ETV Bharat / state

ಸಿದ್ದರಾಮೋತ್ಸವದ ಡಿಕೆಶಿ ಭಾಷಣ ಲೀಕ್; ಪೇಚಿಗೆ ಸಿಲುಕಿದ ಮಾಧ್ಯಮ ವಿಭಾಗ

author img

By

Published : Aug 1, 2022, 5:32 PM IST

ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರಿಗೋಸ್ಕರ ಸಿದ್ಧಪಡಿಸಿದ್ದ ಭಾಷಣದ ಪ್ರತಿ ಲೀಕ್​- ಪಕ್ಷದ ವಿವಿಧ ವಾಟ್ಸಪ್ ಗ್ರೂಪ್​​ಗಳಲ್ಲಿ ಪೋಸ್ಟ್ - ಪೇಚಿಗೆ ಸಿಲುಕಿದ ಕಾಂಗ್ರೆಸ್​ ಮಾಧ್ಯಮ ವಿಭಾಗ

ಸಿದ್ದರಾಮೋತ್ಸವದ ಡಿಕೆಶಿ ಭಾಷಣ ವೈರಲ್​
ಸಿದ್ದರಾಮೋತ್ಸವದ ಡಿಕೆಶಿ ಭಾಷಣ ವೈರಲ್​

ಬೆಂಗಳೂರು: ಆ.3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಬೇಕಿದ್ದ ಭಾಷಣ ಎರಡು ದಿನ ಮುನ್ನವೇ ಸೋರಿಕೆ ಆಗುವ ಮೂಲಕ ಕೆಪಿಸಿಸಿ ಮಾಧ್ಯಮ ವಿಭಾಗ ಮುಜುಗರಕ್ಕೆ ಸಿಲುಕುವಂತಾಗಿದೆ.

ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರಿಗೋಸ್ಕರ ಸಿದ್ಧಪಡಿಸಿದ್ದ ಭಾಷಣದ ಪ್ರತಿ ಕಣ್ ತಪ್ಪಿನಿಂದಾಗಿ ಪಕ್ಷದ ವಿವಿಧ ವಾಟ್ಸಪ್ ಗ್ರೂಪ್​​ಗಳಲ್ಲಿ ಪೋಸ್ಟ್ ಆಗಿದೆ. ತಪ್ಪಿನ ಅರಿವಾಗಿ ತಕ್ಷಣವೇ ಕೆಪಿಸಿಸಿ ಮಾಧ್ಯಮ ವಿಭಾಗ ಭಾಷಣದ ಪ್ರತಿಯನ್ನು ಅಳಿಸಿ ಹಾಕಿದೆ. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡುವ ಕೆಲಸಕ್ಕೆ ಡಿಕೆಶಿ ಮಂದಾಗಿದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಿದ್ದರಾಮಯ್ಯ ಅವರ ಅಭಿಮಾನಿಗಳು ಸೇರಿ ಈ ಅವರ 75ನೇ ಹುಟ್ಟುಹಬ್ಬವನ್ನು ಅಮೃತ ಮಹೋತ್ಸವ ಅಂತಾ ಬೆಣ್ಣೆ ನಗರಿಯಲ್ಲಿ ಅದ್ಧೂರಿ ವೇದಿಕೆ ನಿರ್ಮಿಸಿ, ಅದಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಆದ್ರೆ ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು, ಕಾಂಗ್ರೆಸ್​ನಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆಗೆ ಮನ್ನಣೆ ನೀಡಿ ಎಂದು ತಮ್ಮದೇ ದಾಟಿಯಲ್ಲಿ ಟಾಂಗ್​ ಕೊಡುತ್ತ ಬಂದಿದ್ದಾರೆ. ಹೀಗಿರುವಾಗ ಅವರ ಭಾಷಣದ ಪ್ರತಿ ಮುಂಚಿತವಾಗಿ ವೈರಲ್​ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: 'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’: ಹುಬ್ಬಳ್ಳಿ ಅಭಿಮಾನಿ ಬಳಗದಿಂದ ಆಲ್ಬಂ ಸಾಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.