ETV Bharat / state

ಕರ್ನಾಟಕ ಅಂದ್ರೆ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಗೌರವ ಇಲ್ಲ: ಡಿಕೆಶಿ

author img

By

Published : Jan 8, 2023, 2:31 PM IST

ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು. ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ. ಎಸ್​ಸಿ​ ಮೀಸಲಾತಿಯನ್ನು 9ನೇ ಶೆಡ್ಯುಲ್​ನಲ್ಲಿ ಸೇರಿಸೋದಕ್ಕೆ ಆಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

dk shivakumar
ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಅಂದ್ರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಗೌರವ ಇಲ್ಲ. ಕೇರಳದ ನಾರಾಯಣ ಗುರು ಟ್ಯಾಬ್ಲೋ ಕಿತ್ತುಹಾಕಿದ ನೋವನ್ನೇ ಇನ್ನೂ ಕಡಿಮೆ ಮಾಡಿಕೊಳ್ಳಲು ಆಗ್ತಿಲ್ಲ. ರಾಜ್ಯದಲ್ಲಿ 25-26 ಎಂಪಿಗಳಿದ್ದಾರೆ ಒಂದು ದಿನವೂ ಕರೆದು ಚರ್ಚೆ ಮಾಡಿಲ್ಲ. ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಡೆಲಿಗೇಷನ್ ಬಳಸಿಕೊಂಡು ಮಾತನಾಡಬಹುದಲ್ಲ?. ಎಸ್​ಸಿ​ ಮೀಸಲಾತಿಯನ್ನು 9ನೇ ಶೆಡ್ಯುಲ್​ನಲ್ಲಿ ಸೇರಿಸೋದಕ್ಕೆ ಆಗ್ತಿಲ್ಲ. ಯಾವ ರೀತಿ ದಲಿತರಿಗೆ ಮೋಸ ಮಾಡ್ತಿದ್ದಾರೆ ಎಂದು ಅರ್ಥ ಆಗ್ತಿದೆ. ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು, ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ ಎಂದರು.

ನಾ ನಾಯಕಿ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ಇದೇ ತಿಂಗಳ 16ಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ನಾಯಕರು ಯಾರು ಬರ್ತಾರೆ ಅಂತಾ ಇಂದು ಗೊತ್ತಾಗಲಿದೆ. ಮೈತಿ ಬೂತ್ ನಿಂದ ಮಹಿಳಾ ಕಾರ್ಯಕರ್ತರ ಆಹ್ವಾನ ಮಾಡ್ತಾ ಇದ್ದೇವೆ. ಮಹಿಳೆಯರುಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಮಾವೇಶ ಯಶಸ್ವಿ ಮಾಡಲು ನಾನು ಕೂಡ ಜೂಮ್ ಮೀಟಿಂಗ್ ಮಾಡ್ತಾ ಇದ್ದೇನೆ ಎಂದರು.

ಅಧಿಕಾರಿಗಳು ಗುತ್ತಿಗೆದಾರರಿಗೆ ಡಿ ಕೆ ಶಿವಕುಮಾರ್ ವಾರ್ನಿಂಗ್ : ತರಾತುರಿಯಲ್ಲಿ ಟೆಂಡರ್​ಗಳನ್ನು ಮಾಡೋದಕ್ಕೆ ಸರ್ಕಾರ ಹೊರಟಿದೆ. ನಾವು ಅದನ್ನೆಲ್ಲಾ ಕ್ರಾಸ್ ವೆರಿಫೈ ಮಾಡ್ತೀವಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸರ್ಕಾರ ಬಂದ ತಕ್ಷಣ ಎಲ್ಲಾ ಟೆಂಡರ್​ಗಳ ಎಸ್ಟಿಮೇಷನ್ ವೆರಿಫೈ ಮಾಡ್ತೇವೆ. ಈಗಾಲೇ ಅಧಿಕಾರಿಗಳಿಗೆ ಎಚ್ಚರಿಕೆ ಹೇಳ್ತಿದ್ದೇನೆ, ಯಾರದ್ದೋ ಏಜೆಂಟ್​ಗಳಾಗಬೇಡಿ. ಸುಮ್ಮನೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ತೀರಾ ಎಂದು ಹೇಳಿದರು.

ಚಿತ್ರದುರ್ಗಕ್ಕೆ ತೆರಳಿದ ನಾಯಕರು: ಚಿತ್ರದುರ್ಗದಲ್ಲಿ ನಡೆಯಲಿರುವ ದಲಿತ ಐಕ್ಯತಾ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಂದೀಪ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ ಕೆಶಿವಕುಮಾರ್ ಬೆಂಗಳೂರಿನಿಂದ ತೆರಳಿದರು. ಜಕ್ಕೂರಿನಿಂದ ಹೆಲಿಕಾಪ್ಟರ್ ಮೂಲಕ ಹೋಗಿ ಇಂದು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಹೊಸ ಸಮಿತಿ ರಚನೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಲೋಕಸಭೆ ಕ್ಷೇತ್ರಗಳಿಗೆ ಎಐಸಿಸಿ ವತಿಯಿಂದ ವೀಕ್ಷಕರ ನೇಮಕ ಮಾಡಿದೆ. 28 ಲೋಕಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬ ವೀಕ್ಷಕರ ನೇಮಕ ಮಾಡಲಾಗಿದೆ. ಚುನಾವಣಾ ಸಿದ್ಧತೆಗಳ ಪರಿಶೀಲನೆಗಾಗಿ ಲೋಕಸಭಾ ಕ್ಷೇತ್ರವಾರು ವೀಕ್ಷಕರನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಸೂಚನೆ ಮೇರೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಜನರಿಗೆ ಚಾಕೊಲೇಟ್​​ ಕೊಡುವ ಕೆಲಸ ಮಾಡುತ್ತಿದೆ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.