ETV Bharat / state

ಮೇ 15ರಂದು ಯಾರ ನೇತೃತ್ವದ ಕ್ಯಾಬಿನೆಟ್ ಅನ್ನೋದನ್ನು ಖರ್ಗೆ ಘೋಷಣೆ ಮಾಡ್ತಾರೆ: ಡಿಕೆಶಿ

author img

By

Published : May 8, 2023, 1:26 PM IST

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತ ಪಡೆಯಲಿದೆ. ಮೇ 15ಕ್ಕೆ ಯಾರ ನೇತೃತ್ವದಲ್ಲಿ ಸಚಿವ ಸಂಪುಟ ರಚಿಸಲಾಗುವುದು ಎಂದು ಖರ್ಗೆ ಘೋಷಣೆ ಮಾಡ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.

shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡೇ ದಿನ ಬಾಕಿ ಇದೆ. ಈ ನಡುವೆ, "ಯಾರ ನೇತೃತ್ವದ ಕ್ಯಾಬಿನೆಟ್ ಎನ್ನುವ ವಿಚಾರ ಮೇ 15 ರಂದು ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡ್ತಾರೆ. ನಾವು 141 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. 15ನೇ ತಾರೀಖಿನಂದು ಕ್ಯಾಬಿನೆಟ್​ನಲ್ಲಿ ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, "ನಾನು ಕನಕಪುರಕ್ಕೆ ಹೋಗ್ತಿದ್ದೀನಿ. ಮೂರು ಗಂಟೆಗೆ ಹೋಗಿ ಮನವಿ ಮಾಡಿ ಬರ್ತೀನಿ. ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗೆ ಕರೆಗಳು ತುಂಬಿಸುತ್ತೇವೆ. ಹೆಣ್ಣು ಮಕ್ಕಳಿಗೆ ಹೆರಿಕೆ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮಗಳಲ್ಲಿ ಉತ್ತಮ ಶಿಕ್ಷಣ ನೀಡಿ ಸಿಟಿಗಳಿಗೆ ಬರೋದನ್ನು ತಪ್ಪಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ : ನಾನೇ ಮುಂದಿನ ಸಿಎಂ , ಮೊದಲ ಕ್ಯಾಬಿನೆಟ್‌ನಲ್ಲೇ ಗ್ಯಾರಂಟಿಗಳಿಗೆ ಅನುಮೋದನೆ : ಡಿಕೆಶಿ

ಕಾಂಗ್ರೆಸ್​ಗೆ ಚುನಾವಣಾ ಆಯೋಗ ನೋಟಿಸ್ ವಿಚಾರ ಮಾತನಾಡಿ, "ನನಗೆ ನೋಟಿಸ್ ನೀಡಿದ್ರು. ದಾಖಲೆ ಎನು ಅಂತ ಹೇಳಿದ್ರು. ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೀನಿ. ಈಗ ಅದಕ್ಕೆ ಆಧಾರ ಏನು ಅಂತ ಕೇಳಿದ್ದಾರೆ. ಹಾಗೆಯೇ ಯತ್ನಾಳ್ ಸಾಹೇಬ್ರ ಹೇಳಿಕೆ, ಬೇರೆ ಬೇರೆ ಪೇಪರ್​ನಲ್ಲಿ ಬರೆದಿದ್ದು. ವಿಶ್ವನಾಥ್ ಹೇಳಿದ್ದು, ಗೂಳಿಹಟ್ಟಿ ಶೇಖರ್ ಹೇಳಿದ್ದು ಮತ್ತು ಓಲೇಕರ್ ಹೇಳಿದ್ದು, ಯೋಗೀಶ್ವರ್ ಹೇಳಿದ್ದು ಎಲ್ಲಾ ಹೇಳಿಕೆಗಳನ್ನು ಆಯೋಗಕ್ಕೆ ಕೊಡುತ್ತೇವೆ. ಕೇಂದ್ರ ಗೃಹ ಮಂತ್ರಿ ಅಮಿಶ್ ಶಾ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಆಗುತ್ತದೆ ಅಂತ ಹೇಳಿದ್ರು, ಅವರಿಗೆ ಮೊದಲು ನೋಟಿಸ್ ನೀಡಬೇಕು ಅಲ್ವಾ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ನಿನ್ನೆ ಬೈಕ್‌ನಲ್ಲಿ ಸಂಚಾರ, ಇಂದು ಬಿಎಂಟಿಸಿ ಬಸ್​ ಏರಿದ ರಾಹುಲ್ ಗಾಂಧಿ : ಗ್ಯಾರಂಟಿಗಳ ಚರ್ಚೆ

ಜೆ.ಪಿ.ನಡ್ಡಾ ವಿರುದ್ಧ ವಾಗ್ದಾಳಿ ನಡೆಸಿ, "ನಿಮಗೆ ಪಾರ್ಟಿ ನಡೆಸೋಕೆ ಬಂದಿಲ್ಲ. ಅದಕ್ಕೆ‌ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಬೀದಿ ಬೀದಿ ಅಲೆಸ್ತಾ ಇದ್ದೀರಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಬಿಜೆಪಿ 130 ರಿಂದ 135 ಸ್ಥಾನ ಗೆಲ್ಲಲಿದೆ : ಬಿ.ಎಸ್.ಯಡಿಯೂರಪ್ಪ

ಮಹದಾಯಿ ಯೋಜನೆ ಜಾರಿಯಾದ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಭ್ರಮಿಸಿದರು. ಆದ್ರೆ, ಯಾಕೆ ಇನ್ನೂ ಕೆಲಸ ಶುರು ಮಾಡೋಕೆ ಆಗಿಲ್ಲ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕೆಆರ್​ಪಿ ಸೇರುವಂತೆ ಜನಾರ್ದನ ರೆಡ್ಡಿಯಿಂದ ಬೆದರಿಕೆ : ಸೋಮಶೇಖರ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.