ETV Bharat / state

ನಾಡಿನ ಜನತಗೆ ದೀಪಾವಳಿ ಶುಭ ಕೋರಿದ ಬೊಮ್ಮಾಯಿ‌, ಬಿಎಸ್​ವೈ, ಕಟೀಲ್

author img

By

Published : Oct 24, 2022, 10:52 AM IST

ಬೆಳಕಿನ ಹಬ್ಬ ದಿಪಾವಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್​​ ಮಾಡಿ ಶುಭಕೋರಿದ್ದಾರೆ.

dipavali-wishes-for-c-m-basavaraj-bommai-b-s-yediyurappa-and-nalin-kumar-kateel
ನಾಡಿನ ಜನತಗೆ ದೀಪಾವಳಿ ಶುಭ ಕೋರಿದ ಬೊಮ್ಮಾಯಿ‌, ಬಿಎಸ್​ವೈ, ಕಟೀಲ್

ಬೆಂಗಳೂರು: ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಚಿವರು, ಬಿಜೆಪಿ ನಾಯಕರು ಬೆಳಕಿನ ಹಬ್ಬ ದೀಪಾವಳಿಯ ಶುಭ ಕೋರಿದ್ದಾರೆ.

  • ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು .

    ಸರ್ವರ ಬಾಳಲ್ಲಿ ಸಂಕಷ್ಟಗಳು ದೂರವಾಗಿ, ಸುಖ, ಶಾಂತಿಃ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.#Deepavali2022 pic.twitter.com/2vSzsslLjM

    — Basavaraj S Bommai (@BSBommai) October 24, 2022 " class="align-text-top noRightClick twitterSection" data=" ">

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸರ್ವರ ಬಾಳಲ್ಲಿ ಸಂಕಷ್ಟಗಳು ದೂರವಾಗಿ, ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಎಲ್ಲರಿಗೂ ಸಂಭ್ರಮ, ಸಂತೋಷದ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಈ ದೀಪಾವಳಿಯು ಎಲ್ಲರ ಜೀವನದಲ್ಲಿ ಆರೋಗ್ಯ, ಸುಖ, ಸಮೃದ್ಧಿಗಳ ಬೆಳಕನ್ನು ಹೊತ್ತು ತರಲಿ, ಎಲ್ಲೆಡೆ ಸಡಗರ, ಸಂಭ್ರಮ, ಸದ್ಭಾವಗಳ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸೋಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್​ ಮಾಡಿದ್ದಾರೆ.

ದೀಪಗಳ ಹಬ್ಬ ದೀಪಾವಳಿ ನಮ್ಮೆಲ್ಲರ ಬದುಕಿನಲ್ಲಿ ಸಕರಾತ್ಮಕ ಶಕ್ತಿ ಎಂಬ ಬೆಳಕನ್ನು ನಿತ್ಯವೂ ಹೊಸ ಹುಮ್ಮಸ್ಸಿನೊಂದಿಗೆ ಪ್ರಜ್ವಲಿಸಲಿ ಎಂದು ಪ್ರೀತಿಪೂರ್ವಕ ಹಾರೈಕೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ, ಇಷ್ಟಾರ್ಥಗಳನ್ನು ಸಮೃದ್ಧವಾಗಿ ಕರುಣಿಸಲಿ ಎಂದು ಕಟೀಲಮ್ಮನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಗ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಶುಭಕೋರಿದ ರಾಷ್ಟ್ರಪತಿ - ಪ್ರಧಾನಿ!.. ವಿಶ್​ ಮಾಡಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.