ETV Bharat / state

ಟ್ವಿಟರ್​ ಕಚೇರಿ ಮೇಲೆ ಪೊಲೀಸರ ದಾಳಿ, ಕೇಂದ್ರದ ಕ್ರಿಮಿನಲ್ ಷಡ್ಯಂತ್ರದ ಭಾಗ: ಗುಂಡೂರಾವ್ ಆರೋಪ

author img

By

Published : May 25, 2021, 3:52 PM IST

ಟೂಲ್‌ಕಿಟ್ ಸುಳ್ಳು ಆರೋಪದ ಸೂತ್ರಧಾರಿ ಸಂಬೀತ್ ಪಾತ್ರರ ಕರಾಳ ಮುಖ ತೆರೆದಿಟ್ಟಿದ್ದ ಟ್ವೀಟರ್‌ ಕಚೇರಿ ಮೇಲೆ ಪೊಲೀಸರ ದಾಳಿ ಕೇಂದ್ರದ ಕ್ರಿಮಿನಲ್ ಷಡ್ಯಂತ್ರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

dinesh-gundurao and mahadevappa
ದಿನೇಶ್ ಗುಂಡೂರಾವ್ ಹಾಗೂ ಡಾ. ಹೆಚ್ ಸಿ ಮಹದೇವಪ್ಪ

ಬೆಂಗಳೂರು: ಟ್ವಿಟರ್ ಕಚೇರಿ ಮೇಲೆ ಪೊಲೀಸರ ದಾಳಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಕೋವಿಡ್ ಟೂಲ್​ಕಿಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾಡಿದ್ದ ಟ್ವಿಟ್ ಅನ್ನು 'ತಿರುಚಿತ ಮೀಡಿಯಾ' ಎಂದು ಟ್ಯಾಗ್ ಮಾಡಿದ್ದ ಟ್ವಿಟರ್‌ಗೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

  • ಟೂಲ್‌ಕಿಟ್ ಸುಳ್ಳು ಆರೋಪದ ಸೂತ್ರಧಾರಿ ಸಂಬೀತ್ ಪಾತ್ರರ ಕರಾಳ ಮುಖ ತೆರೆದಿಟ್ಟಿದ್ದ ಟ್ವೀಟರ್‌ ಕಚೇರಿ ಮೇಲೆ ಪೊಲೀಸರ ದಾಳಿ ಕೇಂದ್ರದ ಕ್ರಿಮಿನಲ್ ಷಡ್ಯಂತ್ರ.

    ಸುಳ್ಳಿನ ಕುರುಡು ಆರಾಧಕವಾಗಿರುವ ಕೇಂದ್ರ, ಯಾವತ್ತೂ ಸತ್ಯ ಒಪ್ಪಿಕೊಳ್ಳುವುದಿಲ್ಲ.

    ಸುಳ್ಳಿನ ಜನಕರನ್ನು ಮಡಿಲಲ್ಲಿಟ್ಟುಕೊಂಡಿರುವ ಕೇಂದ್ರಕ್ಕೆ ಸುಳ್ಳರ ರಕ್ಷಣೆಯೇ ಆದ್ಯತೆಯಾಗಿದೆ pic.twitter.com/1COAVEDktG

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 25, 2021 " class="align-text-top noRightClick twitterSection" data=" ">

ದೆಹಲಿ ಪೊಲೀಸರ ವಿಶೇಷ ಘಟಕ, ಟೂಲ್​ಕಿಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್ ಕಚೇರಿಗಳಿಗೆ ಪೊಲೀಸರ ಎರಡು ತಂಡ ಭೇಟಿ ನೀಡಿ ನೋಟಿಸ್ ಅನ್ನು ಜಾರಿ ಮಾಡಿದೆ. ಸಾಮಾಜಿಕ ಜಾಲತಾಣವನ್ನು ಆರ್ಥಿಕ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಟೂಲ್‌ಕಿಟ್ ಸುಳ್ಳು ಆರೋಪದ ಸೂತ್ರಧಾರಿ ಸಂಬೀತ್ ಪಾತ್ರರ ಕರಾಳ ಮುಖ ತೆರೆದಿಟ್ಟಿದ್ದ ಟ್ವಿಟರ್‌ ಕಚೇರಿ ಮೇಲೆ ಪೊಲೀಸರ ದಾಳಿ ಕೇಂದ್ರದ ಕ್ರಿಮಿನಲ್ ಷಡ್ಯಂತ್ರದ ಭಾಗ. ಸುಳ್ಳಿನ ಕುರುಡು ಆರಾಧಕವಾಗಿರುವ ಕೇಂದ್ರ, ಯಾವತ್ತೂ ಸತ್ಯ ಒಪ್ಪಿಕೊಳ್ಳುವುದಿಲ್ಲ. ಸುಳ್ಳಿನ ಜನಕರನ್ನು ಮಡಿಲಲ್ಲಿಟ್ಟುಕೊಂಡಿರುವ ಕೇಂದ್ರಕ್ಕೆ ಸುಳ್ಳರ ರಕ್ಷಣೆಯೇ ಆದ್ಯತೆಯಾಗಿದೆ ಎಂದು ಹರಿಹಾಯ್ದಿದ್ದಾರೆ.

  • ಈ ಮೂಲಕ ಸರ್ಕಾರದ ಅಕ್ರಮಣಶೀಲತೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಸಾಬೀತುಪಡಿಸಿದೆ.

    ಸುಳ್ಳು ಸುದ್ದಿಗಳನ್ನೇ ಜೀವಾಳ ಮಾಡಿಕೊಂಡಿರುವ ಬಿಜೆಪಿ ಪಕ್ಷಕ್ಕೆ ಅಪಪ್ರಚಾರ ಮಾಡಿಕೊಂಡು ಬದುಕುವುದೇ ಈಗ ಉಳಿದಿರುವ ಮಾರ್ಗವಾಗಿದ್ದು ಈ ಅಪಪ್ರಚಾರಕ್ಕೂ ಹೆಚ್ಚಿನ ಆಯಸ್ಸು ಇಲ್ಲವೆಂಬಂತಾಗಿದೆ

    2/2

    — Dr H.C.Mahadevappa (@CMahadevappa) May 25, 2021 " class="align-text-top noRightClick twitterSection" data=" ">

ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್ ಬಳಸಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡು ಅದರ ಮೇಲೆ ಪಕ್ಷದ ಹೆಸರಿಗೆ ಕಳಂಕ ತರುವಂತಹ ಮಾಹಿತಿಯನ್ನು ಬಿತ್ತರಿಸಿದ ರಾಷ್ಟ್ರೀಯ ಬಿಜೆಪಿ ನಾಯಕರ ಮೇಲೆ ಕಾನೂನಾತ್ಮಕವಾದ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್ ಇಲಾಖೆಯು ತಪ್ಪು ಮಾಹಿತಿ ಬಿತ್ತರಿಸಬೇಡಿ ಎಂದು ಎಚ್ಚರಿಸಿದ ಟ್ವಿಟರ್ ಸಂಸ್ಥೆಯ ಮೇಲೆಯೇ ದಾಳಿ ನಡೆಸಿದೆ. ಈ ಮೂಲಕ ಸರ್ಕಾರದ ಅಕ್ರಮಣಶೀಲತೆ ಮತ್ತು ಸರ್ವಾಧಿಕಾರಿ ಧೋರಣೆ ಸಾಬೀತು ಪಡಿಸಿದೆ.

ಸುಳ್ಳು ಸುದ್ದಿಗಳನ್ನೇ ಜೀವಾಳ ಮಾಡಿಕೊಂಡಿರುವ ಬಿಜೆಪಿ ಪಕ್ಷಕ್ಕೆ ಅಪಪ್ರಚಾರ ಮಾಡಿಕೊಂಡು ಬದುಕುವುದೇ ಈಗ ಉಳಿದಿರುವ ಮಾರ್ಗವಾಗಿದ್ದು, ಈ ಅಪಪ್ರಚಾರಕ್ಕೂ ಹೆಚ್ಚಿನ ಆಯಸ್ಸು ಇಲ್ಲ ಎಂಬಂತಾಗಿದೆ ಎಂದು ದೂರಿದ್ದಾರೆ.

ಓದಿ: ಕೋವಿಡ್​ನಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ ಸಂಬಳ ಮುಂದುವರಿಸಲು ಟಾಟಾ ಸ್ಟೀಲ್ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.