ETV Bharat / state

ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ: ಸರ್ಕಾರಕ್ಕೆ ದಿನೇಶ್ ಗುಂಡೂರಾವ್ ಸರಣಿ ಪ್ರಶ್ನೆ

author img

By

Published : Jul 27, 2022, 12:46 PM IST

ಬಸವರಾಜ​ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನಾಳೆಗೆ ಒಂದು ವರ್ಷ- ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ- ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ​

KN_BNG_01_DINESH_GUNDURAO_TWEET_SCRIPT_7208077
ದಿನೇಶ್ ಗುಂಡೂರಾವ್

ಬೆಂಗಳೂರು: ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಇದನ್ನು ಖಂಡಿಸಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ.

ಇಂದು ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ಬೊಮ್ಮಾಯಿ ಈ ರಾಜ್ಯದ ಸಿಎಂ ಆಗಿ ನಾಳೆಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಮಾಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಆದರೆ ಈ ಸಮಾವೇಶ ಸರ್ಕಾರದ ಯಾವ ಸಾಧನೆಗಾಗಿ? ಗುತ್ತಿಗೆದಾರರಿಂದ 40% ಕಮೀಷನ್ ಪಡೆದಿದ್ದಕ್ಕೋ? ಸಂತೋಷ್ ಪಾಟೀಲ್ ಆತ್ಮಹತ್ಯೆ‌ ಮಾಡಿಕೊಂಡಿದಕ್ಕೋ? ಅಥವಾ ಈಶ್ವರಪ್ಪರಿಗೆ 'ಬಿ ರಿಪೋರ್ಟ್' ಕೊಡಿಸಿದ್ದಕ್ಕೋ? ಬೊಮ್ಮಾಯಿಯವರ ಒಂದು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ.

  • 2
    ಬೊಮ್ಮಾಯಿಯವರ ಒಂದು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?
    PSI ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ನಡೆಸಿದಕ್ಕೆ ಈ ಸಮಾವೇಶವೇ?
    ಬೊಮ್ಮಾಯಿಯವರು ಸಾಧನಾ ಸಮಾವೇಶ ಮಾಡುವ ಬದಲು ಹಗರಣದ ಸಮಾವೇಶ ನಡೆಸುವುದು ಸೂಕ್ತವಲ್ಲವೇ? ಹಗರಣದಿಂದಲೇ ಕುಖ್ಯಾತಿ ಗಳಿಸಿರುವ ಈ ಸರ್ಕಾರ ಯಾವ ಮುಖ ಇಟ್ಟುಕೊಂಡು ಸಾಧನೆಯ ಮಾತಾನಾಡುತ್ತಿದೆ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 27, 2022 " class="align-text-top noRightClick twitterSection" data=" ">

ಪಿಎಸ್ಐ ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ನಡೆಸಿದ್ದಕ್ಕೆ ಈ ಸಮಾವೇಶವೇ? ಬೊಮ್ಮಾಯಿಯವರು ಸಾಧನಾ ಸಮಾವೇಶ ಮಾಡುವ ಬದಲು ಹಗರಣದ ಸಮಾವೇಶ ನಡೆಸುವುದು ಸೂಕ್ತವಲ್ಲವೇ? ಹಗರಣದಿಂದಲೇ ಕುಖ್ಯಾತಿ ಗಳಿಸಿರುವ ಈ ಸರ್ಕಾರ ಯಾವ ಮುಖ ಇಟ್ಟುಕೊಂಡು ಸಾಧನೆಯ ಬಗ್ಗೆ ಮಾತಾನಾಡುತ್ತಿದೆ ಎಂದಿದ್ದಾರೆ.

ಸಿಎಂ ಆದ ಒಂದು ವರ್ಷದ ಅವಧಿಯಲ್ಲಿ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವ ಯೋಜನೆ ತಂದಿದ್ದಾರೆ? ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ? ಕ್ರಿಯೆಗೆ‌ ಪ್ರತಿಕ್ರಿಯೆ ಇರಲಿದೆ ಎಂದು ಕೋಮುಗಲಭೆಗೆ ಪ್ರಚೋದಿಸಿ ಸಮಾಜ ಒಡೆದಿದ್ದು ಬೊಮ್ಮಾಯಿಯವರ ಸಾಧನೆಯೆ? ಹಿಜಾಬ್, ಹಲಾಲ್ ವಿವಾದ ಸೃಷ್ಟಿಸಿದ್ದು ಸಾಧನೆಯೆ? ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಜಿಎಸ್‌ಟಿ ಬಾಕಿ‌ ಕೊಡದೆ ಸತಾಯಿಸುತ್ತಿದೆ. ಬೊಮ್ಮಾಯಿಯವರು ಎಷ್ಟು ಬಾರಿ ಕೇಂದ್ರದ ಬಳಿ ಜಿಎಸ್‌ಟಿ ಬಾಕಿ ಕೇಳಿದ್ದಾರೆ? ಎಂದು ದಿನೇಶ್​ ಗುಂಡೂರಾವ್​ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ.

ತಿಂಗಳಿಗೊಮ್ಮೆ ದೆಹಲಿ ಟ್ರಿಪ್ ಹೋಗುವ ಬೊಮ್ಮಾಯಿಯವರು ಒಂದೇ‌ ಒಂದು ಸಾರಿಯಾದರೂ ಕೇಂದ್ರದಿಂದ ಆಗುತ್ತಿರುವ ಜಿಎಸ್‌ಟಿ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆಯೆ? ನಾಳೆಯ ಸಮಾವೇಶ ಯಾವ ಸಾಧನೆಗಾಗಿ? ಬೊಮ್ಮಾಯಿ ಸಿಎಂ ಆದಾಗ ಜನರಿಗೆ ಒಂದಷ್ಟು ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ.

ಚುರುಕಿಲ್ಲದ ಆಡಳಿತ ಯಂತ್ರ, ವಿಲೇವಾರಿಯಾಗದ ಕಡತಗಳು, ಗುತ್ತಿಗೆದಾರರಿಗೆ ಬಿಡುಗಡೆಯಾಗದ ಬಿಲ್‌ಗಳು, ನೆರೆ ಪರಿಹಾರದಲ್ಲಿನ ಲೋಪ ಬೊಮ್ಮಾಯಿ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ. ಇಷ್ಟಾದರೂ ಸಮಾವೇಶ ಬೇಕೆ? ಎಂದು ಸರಣಿ ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಸರ್ಕಾರವನ್ನು ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರ ನೆರವಿಗೆ ಬೇಕಿದೆ ಲೋಕ್ ಅದಾಲತ್ ಮಾದರಿಯ ನ್ಯಾಯ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.