ETV Bharat / state

ಮಾನನಷ್ಟ ಮೊಕ್ಕದ್ದಮೆ ಪ್ರಕರಣ: ಗುತ್ತಿಗೆದಾರ ಕೆಂಪಣ್ಣ ಸೇರಿ ಐವರಿಗೆ ಜಾಮೀನು

author img

By

Published : Dec 25, 2022, 9:32 PM IST

Updated : Dec 26, 2022, 9:34 AM IST

ಮಾನನಷ್ಟ ಮೊಕದ್ದಮೆ ಪ್ರಕರಣ- ಗುತ್ತಿಗೆದಾರ ಕೆಂಪಣ್ಣಗೆ ಜಾಮೀನು -ನ್ಯಾಯಾಧೀಶರ ಮನೆಯಲ್ಲೇ ಹಾಜರು- ಪ್ರಕರಣ ಗಂಭೀರವಲ್ಲದ ಕಾರಣ ಜಾಮೀನು ಕರುಣಿಸಿದ ಜಡ್ಜ್​

defamation-suit-case-bail-to-five-including-contractor-kempiah
ಮಾನನಷ್ಟ ಮೊಕ್ಕದ್ದಮೆ ಪ್ರಕರಣ: ಗುತ್ತಿಗೆದಾರ ಕೆಂಪಯ್ಯ ಸೇರಿ ಐವರಿಗೆ ಜಾಮೀನು

ಬೆಂಗಳೂರು: ಬಂಧನಕ್ಕೊಳಗಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ ಐವರಿಗೆ 8ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಡಿ. ಕೆಂಪಣ್ಣ ಅವರನ್ನು ಶನಿವಾರ ಬಂಧಿಸಲಾಗಿತ್ತು.

ಬಂಧನದ ಬಳಿಕ ಪೊಲೀಸರು ಕೋರಮಂಗಲದಲ್ಲಿರುವ ನ್ಯಾಯಾದೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಿದ್ದರು. ಗಂಭೀರ ಅಪರಾಧ ಪ್ರಕರಣ ಅಲ್ಲದಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಬಂಧಿತ ಐವರಿಗೂ ಜಾಮೀನು ಮಂಜೂರು ಮಾಡಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಸುಮಾರು ಅರ್ಧ ಗಂಟೆ ಕಾಲ ನಡೆದ ವಾದ ವಿವಾದದ ಬಳಿಕ ನ್ಯಾಯಾಧೀಶರು ಷರತ್ತುಬದ್ಧ ಜಾಮೀನಿಗೆ ಆದೇಶಿಸಿದರು. ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ನೀಡಬೇಕೆಂದು ಸೂಚಿಸಿದರು. ಆದೇಶದಂತೆ ಕೆಂಪಣ್ಣ ಮತ್ತಿರರು ಶನಿವಾರ ಮಧ್ಯರಾತ್ರಿಯೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 40 ಪರ್ಸೆಂಟ್​ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್​

Last Updated :Dec 26, 2022, 9:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.