ETV Bharat / state

ಡಿ-ನೋಟಿಫಿಕೇಷನ್: ಬಿಎಸ್​ವೈ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು

author img

By

Published : Apr 19, 2023, 10:39 PM IST

alleged de notification of government land
ಲೋಕಾಯುಕ್ತ

ಡಿ-ನೋಟಿಫಿಕೇಷನ್ ಕುರಿತು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ.

ಬೆಂಗಳೂರು: ಸರ್ಕಾರಿ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಿ ಸರ್ಕಾರಕ್ಕೆ 74 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ನಾಲ್ವರ ವಿರುದ್ದ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಜಾಮ್ತಾರಾ ಗ್ಯಾಂಗ್​ನ 6 ಜನರ ಬಂಧನ: 21 ಸಾವಿರ ಸಿಮ್ ಕಾರ್ಡ್ ವಶ!

ಬಿ.ಎಸ್.ಯಡಿಯೂರಪ್ಪ, ವೆಂಕಟಮ್ಮ, ಕೆ.ಉಮಾಪತಿ ಮತ್ತು ಎಸ್.ಜಿ.ವಿಜಯಲಕ್ಷ್ಮಿ ವಿರುದ್ದ ದೂರು ದಾಖಲಿಸಿದ್ದಾರೆ. ಆರ್‌ಎಂವಿ 2ನೇ ಹಂತದ 35 ಗುಂಟೆ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಿ ಸರ್ಕಾರಕ್ಕೆ 74 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಛೋಟಾ ರಾಜನ್‌ ಆಪ್ತನನ್ನು ಭಾರತಕ್ಕೆ ಕರೆತಂದ ತನಿಖಾ ಸಂಸ್ಥೆಗಳು

1997ರಲ್ಲಿ ಸರ್ಕಾರ ಆರ್‌ಎಂವಿ 2ನೇ ಹಂತದ 35 ಗುಂಟೆ ಜಮೀನನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಳ್ಳುತ್ತದೆ. ಇದನ್ನು 2010ರಲ್ಲಿ ಯಡಿಯೂರಪ್ಪ ಅವರು ಕಾನೂನು ಬಾಹಿರವಾಗಿ ಡಿ-ನೋಟಿಫಿಕೇಷನ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಶೇಕಡಾ 20ರಷ್ಟು ಕಮೀಷನ್ ಪಡೆದಿದ್ದಾರೆ. ಅವರ ಕುಟುಂಬ ಸದಸ್ಯರ ಖಾತೆಗೆ ಲಕ್ಷಾಂತರ ಹಣ ವರ್ಗಾವಣೆ ಆಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅತೀಕ್ ಹತ್ಯೆ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಐವರು ಪೊಲೀಸರು ಅಮಾನತು

ಜನಾರ್ದನ ರೆಡ್ಡಿ ಜಾಮೀನು ಷರತ್ತುಗಳನ್ನು ಸಡಿಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್..ಬಳ್ಳಾರಿಗೆ ಹೋಗುವ ಆಸೆಗೆ ತಣ್ಣೀರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.