ETV Bharat / state

ರಾಜ್ಯದಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲು ಈ ಹೇಳಿಕೆ: ಕಾರಜೋಳ

author img

By

Published : Jun 8, 2021, 2:41 PM IST

ಹೈಕಮಾಂಡ್ ಸೂಚಿಸಿದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಚರ್ಚೆಯಲ್ಲಿರುವ ವಿಚಾರಕ್ಕೆ ಒಂದು ಸಾರಿ ಫುಲ್ ಸ್ಟಾಪ್ ಹಾಕಲು ಸಹಜವಾಗಿ ಸಿಎಂ ಹಾಗೆ ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

dcm govinda karajola
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ: ಮುಖ್ಯಮಂತ್ರಿ ಬಿ. ಎಸ್​​. ಯಡಿಯೂರಪ್ಪ ರಾಜೀನಾಮೆ ಬಗ್ಗೆ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ಚರ್ಚೆಯಲ್ಲಿರುವ ವಿಚಾರಕ್ಕೆ ಇತಿಶ್ರೀ ಹಾಡಲು. ಒಂದು ಸಾರಿ ಅದಕ್ಕೆ ಫುಲ್ ಸ್ಟಾಪ್ ಹಾಕಲು ಸಹಜವಾಗಿ ಸಿಎಂ ಬಿಎಸ್​ವೈ ಹಾಗೆ ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ಕೊಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ನಮ್ಮ ಹೈಕಮಾಂಡ್ ಮುಂದೆ ಆಗಲಿ ಅಥವಾ ರಾಜ್ಯದಲ್ಲಾಗಲಿ ಯಾವುದೇ ಅಜೆಂಡಾ ಸಿಎಂ ಬದಲಾವಣೆ ವಿಚಾರದಲ್ಲಿ ಇಲ್ಲ. ಈ ವಿಚಾರವನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಬಾರದು ಎಂದರು.

ನಮ್ಮ ಪಕ್ಷದ ಮುಂದೆ ಕರ್ನಾಟಕ ಸಿಎಂ ಬದಲಾವಣೆ ವಿಚಾರ ಇಲ್ಲ. ಪೂರ್ಣಾವಧಿವರೆಗೂ ಸಿಎಂ ಬಿಎಸ್​ವೈ ಅವರೇ ಮುಂದುವರೆಯುತ್ತಾರೆ. ಸಿಎಂ ಬದಲಾವಣೆಯ ಅಂತೆ - ಕಂತೆ ಸುದ್ದಿಗಳಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಕಾರಜೋಳ ಸ್ಪಷ್ಟ ಪಡಿಸಿದರು.

ಈಗ ಅದನ್ನು ಕಾಂಗ್ರೆಸ್​​ನವರು ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್​ನವರಿಗೆ ಬಹಳ ಅವಸರವಾಗಿ ಚುಣಾವಣೆ ಬರಬೇಕಿದೆ. ಈಗಾಗಲೇ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಕೆಲಸ ಹಚ್ಚಿದ್ದಾರೆ ಅನ್ನೋ ಮಾಹಿತಿಯಿದೆ. ಆದ್ರೆ ಕಾಂಗ್ರೆಸ್ಸಿಗರ ಆಸೆ ಈಡೇರಲು ಸಾಧ್ಯವಿಲ್ಲ ಎಂದರು. ಕರ್ನಾಟಕದಲ್ಲಿ ಅವಧಿ ಮುಗಿದ ಮೇಲೆಯೇ ಚುಣಾವಣೆ ಬರುತ್ತೆ ಹೊರತು ನಡುವಲ್ಲಿ ಬರಲ್ಲ ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾವು ಬಿಜೆಪಿ ಮನೆಯ ಸೊಸೆಯರಿದ್ದಂತೆ, ಸೊಸೆ ಈಗ ಮನೆ ಮಗಳಾಗಿದ್ದಾಳೆ: ಬಿ.ಸಿ.ಪಾಟೀಲ್

ಕಾಂಗ್ರೆಸ್​ನವರು ಹಗಲುಗನಸು ಕಾಣ್ತಿದ್ದಾರೆ. ಕಾಂಗ್ರೆಸ್​​ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು. ಇದೇ ಸಮಯದಲ್ಲಿ ರೇಣುಕಾಚಾಯ೯ ಸಹಿ ಸಂಗ್ರಹ ಪತ್ರ ಬಹಿರಂಗ ಪ್ರದರ್ಶನ ಮಾಡಿದ ವಿಚಾರ‌‌ವಾಗಿ ಮಾತನಾಡಿ, ಈಗಾಗಲೇ ನಮ್ಮ ರಾಜ್ಯಾಧ್ಯಕ್ಷ ಕಟೀಲ್ ಅವರು ಅದು ನಮ್ಮ ಸಂಸ್ಕೃತಿ ಅಲ್ಲ ಅಂತ ‌ಹೇಳಿದ್ದಾರೆ. ಅವರು ಹೇಳಿದಂತೆಯೇ ನಾವು ಸಹ ವ್ಯಾಖ್ಯಾನ ಮಾಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.