ETV Bharat / state

ಒಂದಿಂಚು ಭೂಮಿ ಇಲ್ಲ ಅಂತಾರೆ, ನಮ್ಮ ಬಳಿ ಇರುವ ಪಟ್ಟಿ ತೆಗೀಲಾ: ಹೆಚ್​ಡಿಕೆಗೆ ತಿರುಗೇಟು ಕೊಟ್ಟ ಡಿಕೆಶಿ

author img

By ETV Bharat Karnataka Team

Published : Aug 28, 2023, 3:22 PM IST

Updated : Aug 28, 2023, 4:18 PM IST

ಹಿಂದೆ ಅಧಿಕಾರದಲ್ಲಿ ಇದ್ದಾಗ ಕುಮಾರಸ್ವಾಮಿಯವರಿಗೆ ಅಥಾರಿಟಿ ಇತ್ತು. ಆಗ ಯಾಕೆ ನೈಸ್ ವಿಚಾರವಾಗಿ ತನಿಖೆ ಮಾಡಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು ಹೆಚ್​.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

dcm-dk-shivakumar-reaction-on-hd-kumaraswamy-over-nice-issue
ಒಂದಿಂಚು ಭೂಮಿ ಇಲ್ಲ ಅಂತಾರೆ, ನಮ್ಮ ಬಳಿ ಇರುವ ಪಟ್ಟಿ ತೆಗೀಲಾ: ಹೆಚ್​ಡಿಕೆಗೆ ತಿರುಗೇಟು ಕೊಟ್ಟ ಡಿಸಿಎಂ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

ಬೆಂಗಳೂರು: ನಮ್ಮ ಬಳಿ ಇರೋ ಪಟ್ಟಿ ತೆಗೀಲಾ. ಒಂದಿಂಚು ಭೂಮಿ ಇಲ್ಲ ಅಂತಾರೆ. ಇವರದ್ದು ಹಾಗಾದ್ರೆ ಏನೂ ಇಲ್ಲವಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಏನು ಬೇಕಾದ್ರೂ ಬಿಚ್ಚಲಿ, ಪಟ್ಟಿ ತೆಗೀಲಿ, ಏನು ಬೇಕಾದ್ರೂ ಮಾಡಲಿ. ಹಿಂದೆ ಅಧಿಕಾರದಲ್ಲಿ ಇದ್ದಾಗ ಇವರಿಗೆ ಅಥಾರಿಟಿ ಇತ್ತು ಯಾಕೆ ತನಿಖೆ ಮಾಡಲಿಲ್ಲ?. ಪ್ಯಾಂಟ್ ಹಾಕಿದವರು ಯಾರು, ರೈತರು ಯಾರು, ಪಂಚೆ ಕಟ್ಟಿರೋರು ಯಾರು ಅಂತ ಗೊತ್ತಾಗಿದೆ. ರಾಜಕಾರಣಿಗಳದ್ದು ಯಾರದ್ದೂ ಇಲ್ಲವಾ?. ನಮ್ಮತ್ರ ಪಟ್ಟಿ ಇಲ್ಲವಾ?. ನನ್ನನ್ನು ಇಡಿ, ಐಟಿ ಎಲ್ಲರೂ ಸ್ಕ್ಯಾನ್ ಮಾಡಿದ್ದಾರೆ. ಅದರ ವರದಿ ಕೂಡ ಕೊಟ್ಟಿದ್ದಾರೆ ಎಂದು ತಿಳಿಸಿದರು.

ವಿವಿಧ ಪ್ರಕರಣಗಳ ತನಿಖೆ ವಿಚಾರವಾಗಿ ಮಾತನಾಡಿ, ಹಿಂದೆ ನಾವು ಸಾಕಷ್ಟು ಆರೋಪ ಮಾಡಿದ್ದೆವು. ರಮೇಶ್‌ ಜಾರಕಿಹೊಳಿದು, ಮಾಜಿ ಆರ್​​​​ಡಿಪಿಆರ್ ಮಂತ್ರಿಗಳದ್ದು. ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡ್ತಿದ್ದೇವೆ. ಸಂತೋಷ್ ಪಾಟೀಲ್ ವಿಚಾರವಾಗಿ ತನಿಖೆ ಮಾಡುವಂತೆ ಅವರ ಮನೆಯವರು ಮನವಿ ಮಾಡಿದ್ರು. ತನಿಖೆ ನಡೆಯೋ ಮೊದಲೇ ದೋಷಮುಕ್ತರಾಗಿ ಬರ್ತಾರೆ ಅಂತ ಅವರೇ ಹೇಳಿಕೊಂಡಿದ್ರು. ಇನ್ವೆಸ್ಟಿಗೇಷನ್ ಟೀಂನ ದಿಕ್ಕು ತಪ್ಪಿಸಿದ್ರು. ಅದೇ ದಾರಿ ನಮಗೆ ತೋರಿಸಿದ್ದಾರೆ. ಸಮಾಜ ಏನು ಒಪ್ಪಿದೆಯೋ ನಾವು ಅದನ್ನು ಮಾಡ್ತಿದ್ದೇವೆ. ನೀವು ಕ್ಲೀನ್ ಇದ್ದಾಗ ಭಯ ಯಾಕೆ?. ನಮ್ಮ ಮೇಲೆ ಆರೋಪ ಮಾಡಲಿಲ್ಲವಾ?. ಬೆಂಗಳೂರು ಸುತ್ತ ಮುತ್ತಲಿನ ಪಟ್ಟಿ ತೆಗೀಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ಎಚ್ಚರಿಕೆ ನೀಡಿದರು.

ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರೇ ಮಾಡಿಕೊಟ್ಟದ್ದು. ನಮಗೂ ಸ್ವಾರ್ಥ ಇದೆ. ನಮ್ಮ ಕ್ಷೇತ್ರದಲ್ಲೂ ಮೆಡಿಕಲ್ ಕಾಲೇಜು ಇರಬೇಕು ಅಂತ. ರಾಮನಗರ ಜಿಲ್ಲೆಯ ಮೂರು ಕಿ.ಮೀ ದೂರದಲ್ಲೇ ಆಸ್ಪತ್ರೆ ಇರೋದು. ಕನಕಪುರ ಬಾರ್ಡರ್‌ ವರೆಗೂ ಅದು ಅನ್ವಯ ಆಗಲಿದೆ. ಜಿಲ್ಲಾ ಆಸ್ಪತ್ರೆ ಆಗಲಿ ಅನ್ನೋದು ನಮ್ಮ ಆಸೆ. ಇತ್ತೀಚೆಗೆ ಅದು ಉದ್ಘಾಟನೆ ಕೂಡ ಆಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬದಲಾವಣೆ ಮಾಡಿದ್ದಾರೆ. ರಾಮನಗರಕ್ಕೆ ಬರಬೇಕಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಿಯೋಗದೊಂದಿಗೆ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದೆವು. ಯಡಿಯೂರಪ್ಪ ಭರವಸೆ ಕೊಟ್ಟಿದ್ರು ರೀಸ್ಟೋರ್ ಮಾಡ್ತೀನಿ ಅಂತ. ಚುನಾವಣೆ ಬಂದಾಗ ಎತ್ತಿ ಕಟ್ಟುವ ಕೆಲಸ ಆಗಿದೆ. ನನ್ನ ಬಳಿ ದಾಖಲೆ ಇಲ್ವಾ ಎಂದು ಡಿಕೆಶಿ ಪ್ರಶ್ನಿಸಿದರು.

ಕುಮಾರಸ್ವಾಮಿ ಅವರೇ ಬಜೆಟ್ ಸ್ಪೀಚ್‌ನಲ್ಲಿ ಹೇಳಿದ್ರು. ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ ಅಂತ. ಅವರು ಸಿಎಂ ಹೇಗೆ ಸುಮ್ಮನೆ ಆಗಿಬಿಟ್ರಾ?. ನಮ್ಮ ಶಾಸಕರು ಬೆಂಬಲ‌ ಕೊಟ್ಟಿದ್ದಕ್ಕೆ ತಾನೆ ಅವರೂ ಸಿಎಂ ಆಗಿದ್ದು ಎಂದು ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಉಪಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: "ನನ್ನೊಂದಿಗೆ ಇರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ": ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಶಾಸಕ ಸೋಮಶೇಖರ್ ಸ್ಪಷ್ಟನೆ

Last Updated : Aug 28, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.