ETV Bharat / state

ಕೊರೊನಾ ಸೋಂಕಿತರು ಹೆಚ್ಚಾದ್ರೆ ವೆಂಟಿಲೇಟರ್​​ ಅಭಾವ ಎದುರಾಗಲಿದೆ: ಡಿಸಿಎಂ ಕಳವಳ

author img

By

Published : Mar 20, 2020, 3:15 PM IST

ಭಾರತದಲ್ಲೀಗ ಕೊರೊನಾ ಸೋಂಕು 2ನೇ ಹಂತದಲ್ಲಿದೆ, ಇನ್ನೊಂದು ವಾರದೊಳಗೆ 3ನೆ ಹಂತಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ಕೊರೊನಾ ಶ್ವಾಸಕೋಶದ ಸಮಸ್ಯೆ ತಂದೊಡ್ಡುವುದರಿಂದ ನ್ಯುಮೋನಿಯಾ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ಖಾಯಿಲೆಗೆ ವೆಂಟಿಲೇಟರ್ ಅವಶ್ಯಕ. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ವೆಂಟಿಲೇಟರ್ ಅಭಾವ ಆಗುತ್ತದೆ- ಡಿಸಿಎಂ ಅಶ್ವತ್ಥ್ ನಾರಾಯಣ್

dcm ashwath narayan reaction about corona virus
ಡಿಸಿಎಂ ಡಾ. ಅಶ್ವತ್ಥ್​​ ನಾರಾಯಣ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ವೆಂಟಿಲೇಟರ್ ಅಭಾವ ಉಂಟಾಗುತ್ತದೆ ಎಂದು ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ್​​ ತಿಳಿಸಿದ್ದಾರೆ.

ಡಿಸಿಎಂ ಡಾ. ಅಶ್ವತ್ಥ್​​ ನಾರಾಯಣ್

ಭಾರತದಲ್ಲೀಗ ಕೊರೊನಾ ಸೋಂಕು 2ನೇ ಹಂತದಲ್ಲಿದೆ, ಇನ್ನೊಂದು ವಾರದೊಳಗೆ 3ನೆ ಹಂತಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ಕೊರೊನಾ ಶ್ವಾಸಕೋಶದ ಸಮಸ್ಯೆ ತಂದೊಡ್ಡುವುದರಿಂದ ನ್ಯುಮೋನಿಯಾ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ಖಾಯಿಲೆಗೆ ವೆಂಟಿಲೇಟರ್ ಅವಶ್ಯಕ. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ವೆಂಟಿಲೇಟರ್ ಅಭಾವ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದರು.

ಸದ್ಯಕ್ಕೆ ಯಾವುದೇ ವೆಂಟಿಲೇಟರ್ ಅಭಾವ ರಾಜ್ಯದಲ್ಲಿ ಇಲ್ಲ, ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೈಮೀರಿ ಹೋದ ಸಂದರ್ಭದಲ್ಲಿ ಇದೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಬಹುದು, ಈ ಸವಾಲನ್ನು ಎದುರಿಸಲು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ಹೆಚ್ಚು ವೆಂಟಿಲೇಟರ್ ಅಳವಡಿಸಬೇಕು,ಇದಕ್ಕೆ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದ್ರು.

'ವದಂತಿಗೆ ಕಿವಿ ಕೊಡಬೇಡಿ'

ವಾಟ್ಸಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಯಾರೂ ಕೂಡಾ ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಹಾಕಬೇಡಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದು ವಿನಂತಿ ಮಾಡಿದರು. ಈ ರೀತಿ ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಸರ್ಕಾರ ಮಹಾಮಾರಿ ಕೊರೊನಾ ತಡೆಯಲು ಶ್ರಮಿಸುತ್ತಿದೆ. ಆದರೆ ಜನರು ಮನೆಯಲ್ಲಿದ್ದರೆ ಸಂಭಾವ್ಯ ದುರಂತವನ್ನು ತಡೆಗಟ್ಟಬಹುದು. ತುರ್ತು ಸೇವೆಯಲ್ಲಿರುವವರು ಮಾತ್ರವೇ ಹೊರಬಂದು ಕೆಲಸ ಮಾಡಬೇಕು, ಉಳಿದವರು ಮನೆಯಿಂದಲೇ ಕೆಲಸ ಮಾಡುವುದು ಸೂಕ್ತ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.