ETV Bharat / state

ಸಕ್ಷಮ ದಿವ್ಯಾಂಗರ ರಾಷ್ಟ್ರೀಯ ಕೋವಿಡ್‌ ಸಹಾಯವಾಣಿಗೆ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ಚಾಲನೆ

author img

By

Published : Jun 21, 2021, 6:31 PM IST

ದಿವ್ಯಾಂಗರು ಕೋವಿಡ್‌  ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ಅಥವಾ ಲಸಿಕೆ ಪಡೆಯಬೇಕಾದರೆ ನೇರವಾಗಿ ಬಂದು ಪಡೆಯಬಹುದು ಅಥವಾ ಅವರ ಸ್ಥಳದ ಮಾಹಿತಿ ಕೊಟ್ಟರೆ ಅವರಿದ್ದಲ್ಲಿಗೆ ಹೋಗಿ ಪರೀಕ್ಷೆ ನಡೆಸುವ ಇಲ್ಲವೇ ಲಸಿಕೆ ಕೊಡುವ ಕೆಲಸ ಮಾಡಲಾಗುವುದು. ಇವರನ್ನು ಆದ್ಯತಾ ವಲಯದಲ್ಲಿ ಸೇರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

dcm
dcm

ಬೆಂಗಳೂರು : ದಿವ್ಯಾಂಗರ ಕಲ್ಯಾಣ, ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮುಂಗಡ ಪತ್ರದಲ್ಲಿ ಹಂಚಿಕೆಯಾಗಿರುವ ಶೇ.4ರಷ್ಟು ಅನುದಾನವನ್ನು ಸದ್ಭಳಕೆ ಮಾಡಲು ಎಲ್ಲ ಕ್ರಮ ವಹಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ದಿವ್ಯಾಂಗರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ʼಸಕ್ಷಮʼ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ದಿವ್ಯಾಂಗರ ರಾಷ್ಟ್ರೀಯ ಕೋವಿಡ್‌ ಸಹಾಯವಾಣಿಗೆ ಚಾಲನೆ ನೀಡಿದ ನಂತರ ಮಾತನಾಡಿದ್ರು. ಎಲ್ಲ ದಿವ್ಯಾಂಗರು ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರು. ಎಲ್ಲರೂ ತಪ್ಪದೇ ಪಡೆದುಕೊಳ್ಳಬೇಕು. ಪಡೆದುಕೊಳ್ಳದೇ ಇರುವವರಿಗೆ ವಿತರಿಸುವ ಕಾರ್ಯಕ್ರಮವನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು. ಆರೋಗ್ಯ, ವಸತಿ ಇತ್ಯಾದಿಗಳಿಗೆ ಬಿಪಿಎಲ್‌ ಕಾರ್ಡ್‌ ಹೆಚ್ಚು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.

ದಿವ್ಯಾಂಗರ ನೆರವಿಗೆ ಪ್ರತಿಯೊಬ್ಬರೂ ಧಾವಿಸಲೇಬೇಕು. ನಮ್ಮ ಆದ್ಯತೆಗಳಲ್ಲಿ ಮೊತ್ತ ಮೊದಲ ಸ್ಥಾನ ಇವರೇ ಆಗಿರಬೇಕು. ಸರ್ಕಾರವೂ ಇದನ್ನೇ ನಂಬಿ ಕೆಲಸ ಮಾಡುತ್ತಿದೆ ಎಂದ್ರು. ದಿವ್ಯಾಂಗರಿಗೆ ಮನೆ, ನಿವೇಶನ, ಆರೋಗ್ಯ ಸೇವೆ ಸೇರಿದಂತೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲು ಕ್ರಮ ಕೈಗೊಂಡಿದೆ. ಅಗತ್ಯ ಅನುದಾನವನ್ನೂ ನೀಡಿದೆ. ಅಲ್ಲದೇ, ದಿವ್ಯಾಂಗರ ಕಲ್ಯಾಣಕ್ಕಾಗಿ ರೂಪಿಸಿರುವ ಎಲ್ಲ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

ʼಸಕ್ಷಮʼ ಅತ್ಯಂತ ಸ್ಮರಣೀಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿದೆ. ಇದರ ಬೆನ್ನೆಲುಬಾಗಿ ವೈಯಕ್ತಿಕವಾಗಿ ನಾನು ಇರುತ್ತೇನೆ ಮತ್ತು ಸರ್ಕಾರವೂ ಇರುತ್ತದೆ. ದಿವ್ಯಾಂಗರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ಅಥವಾ ಲಸಿಕೆ ಪಡೆಯಬೇಕಾದರೆ ನೇರವಾಗಿ ಬಂದು ಪಡೆಯಬಹುದು ಅಥವಾ ಅವರ ಸ್ಥಳದ ಮಾಹಿತಿ ಕೊಟ್ಟರೆ ಅವರಿದ್ದಲ್ಲಿಗೆ ಹೋಗಿ ಪರೀಕ್ಷೆ ನಡೆಸುವ ಇಲ್ಲವೆ ಲಸಿಕೆ ಕೊಡುವ ಕೆಲಸ ಮಾಡಲಾಗುವುದು. ಇವರನ್ನು ಆದ್ಯತಾ ವಲಯದಲ್ಲಿ ಸೇರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಯೂತ್‌ ಫಾರ್‌ ಸೇವಾ ಸಂಘಟನೆಯ ಸಂಸ್ಥಾಪಕ ವೆಂಕಟೇಶ ಮೂರ್ತಿ, ಸಕ್ಷಮದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಸುಕುಮಾರ್‌, ಸಕ್ಷಮದ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಾ.ಸಂತೋಷ್‌, ಐಡಿಯಾ ಸಂಸ್ಥೆಯ ಸಂಸ್ಥಾಪಕ ಮಲ್ಲಿಕಾರ್ಜುನ ಐತ ಹಾಗೂ ಸಕ್ಷಮದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಡಾ.ಸುಧೀರ್‌ ಪೈ ಮುಂತಾದವರು ಈ ವರ್ಚುಯಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಹಾಯವಾಣಿ ಸಂಖ್ಯೆ: 0120 690 4999

ETV Bharat Logo

Copyright © 2024 Ushodaya Enterprises Pvt. Ltd., All Rights Reserved.