ETV Bharat / state

ಸಿಲಿಕಾನ್​​​ ಸಿಟಿಯಲ್ಲಿ ಸೈಬರ್​​ ಕ್ರೈಂ ಹೆಚ್ಚಳ: ಶೀಘ್ರದಲ್ಲೇ 4 ಠಾಣೆ ಆರಂಭ?

author img

By

Published : Aug 25, 2019, 9:47 PM IST

ಸೈಬರ್​ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು 4 ಸೈಬರ್ ಕ್ರೈಂ ಠಾಣೆಗಳನ್ನು ಶೀಘ್ರವೇ ಆರಂಭವಾಗಲಿವೆ. ಈ ಕುರಿತಂತೆ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎನ್ನಲಾಗುತ್ತಿದೆ.

ನಗರದಲ್ಲಿ 4 ಸೈಬರ್ ಕ್ರೈಂ ಠಾಣೆ ಆರಂಭ

ಬೆಂಗಳೂರು: ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ನಗರದಲ್ಲಿ 4 ಸೈಬರ್ ಕ್ರೈಂ ಪೊಲೀಸ್​ ಠಾಣೆಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ.

Cyber ​​crime station open shortly
ನಗರದಲ್ಲಿ 4 ಸೈಬರ್ ಕ್ರೈಂ ಠಾಣೆ

ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಮಾತ್ರ ಸೈಬರ್ ಕ್ರೈಂ ಠಾಣೆ ಇದ್ದು, ಪ್ರತಿನಿತ್ಯ 40ರಿಂದ 50 ಸೈಬರ್ ಕ್ರೈಂ ದೂರುಗಳು ದಾಖಲಾಗುತ್ತಿವೆ. ಅಲ್ಲದೆ ಸಿಬ್ಬಂದಿ ಕೊರತೆ ಎದುರಿಸಲಾಗುತ್ತಿದೆ.

ಎಲ್ಲಾ ಡಿಸಿಪಿ ವ್ಯಾಪ್ತಿಯಲ್ಲಿ 8 ಸೈಬರ್ ಕ್ರೈಂ ಠಾಣೆ ಪ್ರಾರಂಭಿಸಲು ವಿಭಾಗದ ಡಿಸಿಪಿಯಾಗಿದ್ದ ಅನುಚೇತ್, ಡಿಜಿ ನೀಲಮಣಿ ಎನ್. ರಾಜು ಅವರಿಗೆ ಪತ್ರ ಬರೆದಿದ್ದರು. ಡಿಜಿಪಿ ನೀಲಮಣಿ ಎನ್. ರಾಜು ಅವರು ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 4 ಸೈಬರ್ ಕ್ರೈಂ ಠಾಣೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದೆ.

ನಿತ್ಯ ಆನ್​ಲೈನ್ ವಂಚನೆ, ಎಟಿಎಂ ವಂಚನೆ ಹಾಗೆ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ವಂಚಕರಲ್ಲಿ ಆಫ್ರಿಕನ್, ನೈಜೀರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರು ಭಾಗಿಯಾಗಿದ್ದಾರೆ. 2019ರ ಜನವರಿಯಿಂದ ಇಲ್ಲಿಯವರೆಗೆ ಬರೋಬ್ಬರಿ 7500 ಎಫ್​ಐಆರ್ ದಾಖಲಾಗಿವೆ.

Intro:Body:ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕ್ರೈಂ ಹೆಚ್ಚಳ: ಶೀಘ್ರದಲ್ಲೇ 4 ಸೈಬರ್ ಕ್ರೈಂ ಠಾಣೆ ಆರಂಭ

ಬೆಂಗಳೂರು: ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಇದನ್ನು ನಿಯಂತ್ರಿಸಲು ನಗರದ ಎಲ್ಲಾ ವಲಯಗಳಲ್ಲಿ ಸೈಬರ್ ಪೊಲೀಸ್ ಠಾಣೆ‌ ಆರಂಭವಾಗಲಿದೆ.
ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಸೈಬರ್ ಠಾಣೆ ಮಾತ್ರ ಇದ್ದು..‌ಇಲ್ಲಿ ಪ್ರತಿನಿತ್ಯ 40 ರಿಂದ 50 ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಾಗುತ್ತಿವೆ. ಅಲ್ಲದೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ
ಸಿಬ್ಬಂದಿ ಮೇಲೆ ಹೆಚ್ಚಾಗುತ್ತಿರುವ ಹೊರೆ ತಪ್ಪಿಸಲು ಎಲ್ಲಾ ಡಿಸಿಪಿ ವ್ಯಾಪ್ತಿಯಲ್ಲಿ 8 ಸೈಬರ್ ಕ್ರೈಂ ಠಾಣೆ ಓಪನ್ ಆಗಲಿವೆ.
ಈ ಹಿಂದೆ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಅನುಚೇತ್ ಡಿಜಿ ನೀಲಮಣಿ ಎನ್.ರಾಜು ಅವರಿಗೆ ಪತ್ರ ಬರೆದಿದ್ದರು. ಪತ್ರವನ್ನು ಡಿಜಿಪಿ ನೀಲಮಣಿ ಎನ್ ರಾಜು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 4 ಸೈಬರ್ ಕ್ರೈಂ ಠಾಣೆ ಸ್ಥಾಪನೆ ಸಾಪಿಸಲು 4 ಕೋಟಿ ಹಣ ಕೂಡ ಬಿಡುಗಡೆಯಾಗಲು ಸರ್ಕಾರ ಆದೇಶಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸೈಬರ್ ಕ್ರೈಂ ವಂಚಕರು ಕೂಡ ಜಾಸ್ತಿಯಾಗಿದ್ದಾರೆ. ಪ್ರತಿನಿತ್ಯ ಆನ್ ಲೈನ್ ವಂಚನೆ, ಎಟಿಎಂ ಓಟಿಪಿ ಪಡೆದು ವಂಚನೆ, ಅಕೌಂಟ್ ನಿಂದ ಹಣ ಕದಿಯುತ್ತಿದ್ದಾರೆ. ಹಾಗೇ ಮೆಡಿಕಲ್ ಸೀಟ್ ಕೊಡಿಸುತ್ತೇವೆ, ಸಾಫ್ಟ್ ವೇರ್ ಕದಿಯೋದು, ವಿವಿಧ ರೀತಿಯ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ.‌ಸೈಬರ್ ವಂಚಕರಲ್ಲಿ ಆಫ್ರಿಕನ್, ನೈಜಿರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರು ವಂಚಕರು 2019ರ ಜನವರಿಯಿಂದ ಇಲ್ಲಿಯವರೆಗೆ ಬರೊಬ್ಬರಿ 7500 ಎಫ್ ಐಆರ್ ದಾಖಲಾಗಿವೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.