ETV Bharat / state

ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೆಸರಿನಲ್ಲಿ ನಕಲಿ ವಾಟ್ಸಪ್ ತೆರೆದ ಸೈಬರ್ ಖದೀಮರು

author img

By ETV Bharat Karnataka Team

Published : Nov 4, 2023, 8:00 AM IST

Cyber crime: ಸೈಬರ್ ಖದೀಮರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆಯಿಟ್ಟರುವ ಆರೋಪದ ಹಿನ್ನೆಲೆ ಕ್ರೈಂ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ವಾಟ್ಸ್​ಆ್ಯಪ್
ವಾಟ್ಸ್​ಆ್ಯಪ್

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಸೈಬರ್ ಖದೀಮರು ನಕಲಿ ವಾಟ್ಸಪ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಇನ್​​​ಸ್ಪೆಕ್ಟರ್, ಎಸಿಪಿಗಳ ನಂಬರ್ ಹ್ಯಾಕ್ ಮಾಡುತ್ತಿದ್ದ ಸೈಬರ್ ಖದೀಮರು ಇತ್ತೀಚೆಗೆ ನೇರವಾಗಿ ಕಮಿಷನರ್ ಹೆಸರನ್ನು ದುರ್ಬಳಕೆ ಮಾಡಿದ್ದಾರೆ. ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸಪ್ ಅಕೌಂಟ್ ಕ್ರಿಯೆಟ್ ಮಾಡಿದ್ದ ಕಿಡಿಗೇಡಿ, ಐ ಆ್ಯಮ್ ಬಿ.ದಯಾನಂದ್ ಬೆಂಗಳೂರು ಪೊಲೀಸ್ ಕಮಿಷನರ್ ಎಂದು ಮೆಸೇಜನ್ನು ಸಾಕಷ್ಟು ಜನರಿಗೆ ವಾಟ್ಸ್​ಆ್ಯಪ್ ಮೂಲಕ ಕಳುಹಿಸಿದ್ದನು.

ಆರೋಪಿ ಕಮಿಷನರ್ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿದ್ದನು ಎನ್ನುವದರ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಸದ್ಯ ಅಕೌಂಟ್​​ನ ಡಿ ಆ್ಯಕ್ಟಿವೇಟ್ ಮಾಡಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Cyber accused opened fake WhatsApp
ಕಮೀಷನರ್ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ತೆರೆದ ಸೈಬರ್ ಖದೀಮರು

ಇತ್ತೀಚಿನ ಘಟನೆ; ಮಂಗಳೂರು ‌ನಗರ ಪೊಲೀಸ್ ಕಮಿಷನರ್​ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್​ ಖಾತೆ ಸೃಷ್ಟಿಸಿ ವಂಚನೆಗೆ ಯತ್ನಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು. 8319051976 ನಂಬರ್ ಮೂಲಕ ನಗರ ಪೊಲೀಸ್ ಕಮಿಷನರ್​ ಅನುಪಮ್ ಅಗರ್ ವಾಲ್ ಅವರ ಹೆಸರಿನಲ್ಲಿ ವಂಚಕರು ವಾಟ್ಸ್​ಆ್ಯಪ್ ಖಾತೆಯನ್ನು ಸೃಷ್ಟಿಸಿ, ಡಿಪಿಯಲ್ಲಿ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಅವರ ಭಾವಚಿತ್ರ ಹಾಕಿದ್ದರು. ಈ ರೀತಿ ವಾಟ್ಸಪ್ ಖಾತೆ ಸೃಷ್ಟಿಸಿದ ವಂಚಕರು,

’’Hi sir Good Morning I'm COMMISSIONER ANUPAM AGRAWAL IPS
Today is the first time I have some work for you, don't refuse. If you ever need anything in your life, let me know. ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಆ ಬಳಿಕ Sir I'm in hospital And my upi is not working i need some money can you transfer i will return within 1 hour‘‘ ಎಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ನಾನು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ಕಾರ್ಯನಿರ್ವಹಿಸುತ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡಿ, ನಾನು ಒಂದು ಗಂಟೆಯೊಳಗೆ ವಾಪಸ್​ ಹಣ ಹಾಕುವುದಾಗಿ ಹೇಳಿರುವ ಮೆಸೇಜ್ ಅನ್ನು​ ಮಂಗಳೂರಿನ ಹಲವರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್​ ಅನುಪಮ್ ಅಗರ್ ವಾಲ್ ಅವರು ಇದೊಂದು ನಕಲಿ ಕರೆಯಾಗಿದ್ದು, ಯಾರು ಸ್ಪಂದಿಸಬೇಡಿ ಎಂದು ತಿಳಿಸಿದ್ದರು.

ಇದನ್ನೂಓದಿ:ರಾಜ್ಯದಲ್ಲಿ ಸೈಬರ್ ಪ್ರಕರಣ ಹೆಚ್ಚಳ, ಸೈಬರ್ ಕ್ರೈಂ ತಡೆಗೆ ಹೊಸ ನಿಯಮ ತರಲು ಕ್ರಮ: ಡಾ. ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.