ETV Bharat / state

C.T.Ravi: ಯಾವ ಶಾಸಕರೂ ಬಿಜೆಪಿ ತೊರೆಯಲ್ಲ- ಸಿ.ಟಿ.ರವಿ

author img

By

Published : Aug 16, 2023, 5:59 PM IST

C.T.Ravi reaction on BJP MLA's joining Congress: ಬಿಜೆಪಿ ಶಾಸಕರು ಕಾಂಗ್ರೆಸ್​ ಸೇರ್ಪಡೆ ಸುದ್ದಿಯ ವಿಚಾರವಾಗಿ ನಾನು ಯಾರನ್ನೂ ಅನುಮಾನದಿಂದ ನೋಡಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ct-ravi-reaction-on-bjp-mlas-joining-of-congress
CT Ravi: ಯಾವ ಶಾಸಕರೂ ಬಿಜೆಪಿ ತೊರೆಯಲ್ಲ, ವದಂತಿ ಹರಿಡಿಸಿದ್ದಾರೆ ಅಷ್ಟೆ - ಸಿ.ಟಿ. ರವಿ

ಬೆಂಗಳೂರು: "ಬಿಜೆಪಿಯ ಕೆಲ ಶಾಸಕರು ಪಕ್ಷ ಬಿಡುವ ಬಗ್ಗೆ ವಿಷಯ ಕೇವಲ ವದಂತಿ. ನಮ್ಮಿಂದ ಕಾಂಗ್ರೆಸ್​ಗೆ ಹೋಗುವವರು ಯಾರೂ ಇಲ್ಲ. ಕೇವಲ ಸುದ್ದಿ ಹರಡಿಸಿದ್ದಾರೆ ಅಷ್ಟೇ. ಅಪನಂಬಿಕೆಯಿಂದ ನಾನು ಯಾರನ್ನೂ ನೋಡಲ್ಲ" ಎಂದು ಸಿ.ಟಿ.ರವಿ ಹೇಳಿದರು. ನಗರದ ಖಾಸಗಿ ಹೋಟೆಲ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ವಾಪಸ್ ವಿಚಾರದ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಗೊತ್ತಿದ್ದಂತೆ ಯಾರೂ ಹೋಗುವವರು ಇಲ್ಲ. ಒಂದು ಸಲ ಅನುಮಾನ ಬಂದರೆ ಎಲ್ಲರನ್ನೂ ಅಪನಂಬಿಕೆಯಿಂದ ನೋಡಬೇಕಾಗುತ್ತದೆ. ಆದರೆ ನಾನು ಯಾರನ್ನೂ ಅನುಮಾನದಿಂದ ನೋಡಲ್ಲ" ಎಂದರು.

"ಡಿ.ಕೆ.ಶಿವಕುಮಾರ್ ರಾಜಕೀಯ ಗುರು ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆ ಚರ್ಚೆಯಾಗುತ್ತಿದೆ. ಆದರೆ ಯಾವ ರೀತಿಯ ಗುರು ಅಂತಾ ಅವರು ಹೇಳಿಲ್ಲ, ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಒಂದೋ ಇವರು ಗುರುವಿನ ಮಾತು ಮೀರಿರಬಹುದು ಅಥವಾ ಗುರುವೇ ಇವರಿಗೆ ಬೆಂಬಲ ಕೊಟ್ಟಿರಬಹುದು" ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಬಳಿಕ ಅಥವಾ ಮುನ್ನ ಸರ್ಕಾರ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಅವರಿಗೆ ಯಾರೋ ಸಂಪರ್ಕದಲ್ಲಿರಬಹುದು, ಹೀಗಾಗಿ ಮಾಹಿತಿ ಇರಬಹುದು. ಮಾಹಿತಿ ಇಲ್ಲದೇ ಅವರು ಹೇಳಲು ಸಾಧ್ಯವೇ? ಈಗ ಯಾರ ಮಾತನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಸರಿಯಿದ್ದರೆ ಎರಡು ತಿಂಗಳಲ್ಲಿ ಶಾಸಕರು ಪತ್ರ ಬರೆಯುತ್ತಿರಲಿಲ್ಲ, ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿರಲಿಲ್ಲ. ಯತ್ನಾಳ್ ಹೇಳಿಕೆಯನ್ನು ಅಲ್ಲಗಳೆಯಲು ಸಾಧ್ಯವೇ? ಇನ್ನೂ ಆರು ತಿಂಗಳು ಕಾದು ನೋಡಬೇಕು" ಎಂದು ತಿಳಿಸಿದರು.

"ಸಿ.ಟಿ.ರವಿಗೆ ಟ್ರೀಟ್‌ಮೆಂಟ್ ಕೊಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಆದರೆ ನಾನು ರೋಗಿಯೂ ಅಲ್ಲ, ಅವರು ಡಾಕ್ಟರೂ ಅಲ್ಲ. ಅಜ್ಜಯ್ಯನ ಹೇಳಿಕೆಯೂ ನನ್ನದಲ್ಲ ನನ್ನಲ್ಲಿ ಕೊರತೆ ಇರುವುದನ್ನು ಅವರು ತುಂಬಬೇಕು ಅಂತಾದರೆ ಅವರ 1,500 ಕೋಟಿ ವೈಟ್ ಮನಿಯನ್ನು ನನಗೆ ಟ್ರಾನ್ಸ್ ಫರ್ ಮಾಡಬೇಕು, ಆದರೆ ಅದು ನನಗೆ ಖಂಡಿತಾ ಬೇಡ ಅವರ ಕೋಟಿ ಗಳಿಕೆಯ ಸಿದ್ಧ ವಿದ್ಯೆಯನ್ನು ಜನರಿಗೆ, ಕೃಷಿಕರಿಗೆ ಹೇಳಿ ಕೊಟ್ಟರೆ ಜನ ದೇವರು ಅಂತಾ ಭಾವಿಸುತ್ತಾರೆ" ಎಂದರು.

"ಡಿ.ಕೆ. ಶಿವಕುಮಾರ್ ಆ ದಿನಗಳನ್ನು ನೆನಪು ಮಾಡಿಕೊಳ್ಳಬಾರದು ಅವರು ರಾಜ್ಯದ ಡಿಸಿಎಂ ಮುಂದೆ ಸಿಎಂ ಆಗುವ ಬಯಕೆ, ಪ್ರಯತ್ನ ಮಾಡುತ್ತಿರುವವರು. ಇನ್ನೂ ಆ ದಿನಗಳ ಮೂಡ್​ನಲ್ಲೇ ಇದ್ದಾರೆ? ಎಲ್ಲರೂ ಒಪ್ಪಿಕೊಳ್ಳುವ ಕ್ಯಾರೆಕ್ಟರ್ ಆಗಿ ಬದಲಾಗಬೇಕು. 50:50 ಒಪ್ಪಂದವೂ ಆಗಿದೆ ಎಂದು ತಿಳಿದುಬಂದಿದೆ. ಡಿಕೆಶಿ ಎಸ್.ಎಂ ಕೃಷ್ಣ ರೀತಿ ಅಕ್ಸೆಪ್ಟಬಲ್ ರಾಜಕಾರಣಿ ಆಗಬೇಕು ಇನ್ನೂ ಆ ದಿನಗಳ ಮೋಡ್‌ನಲ್ಲೇ ಇರಬಾರದು ಆ ದಿನಗಳು ನಿಮಗೂ ಗೊತ್ತು, ನನಗೂ ಗೊತ್ತು, ಅದನ್ನ ನನ್ನಿಂದ ಹೇಳಿಸಬೇಡಿ. ಡಿಕೆಶಿಯಷ್ಟು ದೊಡ್ಡವನಲ್ಲ, ಆರ್ಥಿಕ ಸಮರ್ಥನಲ್ಲ ಆದರೂ ಹಿತೈಷಿಯಾಗಿ ಹೇಳುತ್ತಿದ್ದೇನೆ ಅವರು ಡಿಸಿಎಂ ಎಂದು ಅರಿತುಕೊಂಡು ನಡೆಯಬೇಕು. ಅವರಷ್ಟು ಅಧಿಕಾರ ನನ್ನ ಬಳಿ ಇಲ್ಲ, ಅವರಷ್ಟು ಶ್ರೀಮಂತ ನಾನಲ್ಲ" ಎಂದು ಹೇಳಿದರು.

"ಕಂಟ್ರಾಕ್ಟರ್​ಗಳು ಕಮಿಷನ್ ಆರೋಪವನ್ನು ವಾಪಸ್ ಪಡೆದಿರುವ ವಿಚಾರವಾಗಿ ಮಾತನಾಡಿ, ಅವರು ಯಾವ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಗೊತ್ತಿಲ್ಲ ಅವರ ಆರೋಪದ ಮೇಲೆ ನಾವು ಪ್ರತಿಕ್ರಿಯೆ ಕೊಟ್ಟಿದ್ದೇವೆ. ಸರ್ಕಾರದ ಒಳ ವ್ಯವಹಾರ ಬಹಿರಂಗ ಆಗಲು ಬಹಳ ಕಾಲ ಬೇಕಾಗಿಲ್ಲ. ಆರೋಪ ನಾವು ಮಾಡಿಲ್ಲ, ಗುತ್ತಿಗೆದಾರರೇ ಆರೋಪ ಮಾಡಿದ್ದು, ಅವರಿಗೆ ಯಾವ ಟ್ರೀಟ್ ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದರು.

ಎನ್​ಇಪಿ ರದ್ದುಪಡಿಸುವ ಕುರಿತು ಸಿಎಂ ಹೇಳಿಕೆ ಬಗ್ಗೆ ಮಾತನಾಡಿ, "ಯಾವ ಕಾರಣಕ್ಕೆ ಎನ್​ಇಪಿ ತಿರಸ್ಕಾರ ಮಾಡುತ್ತೀರಿ? ಕಾಂಪ್ರೆಹೆನ್ಸಿವ್ ಪಾಲಿಸಿ ಬಗ್ಗೆ ನಿಮ್ಮ ವಿರೋಧ ಇದ್ಯಾ? ಯಾವ ಅಂಶದ ಬಗ್ಗೆ ನಿಮ್ಮ ವಿರೋಧ ಇದೆ ಅಂತಾ ಸ್ಪಷ್ಟಪಡಿಸಿ. ಕಸ್ತೂರಿ ರಂಗನ್ ಅವರ ಬಗ್ಗೆ ನಿಮ್ಮ ವಿರೋಧ ಇದೆಯೋ ಅಥವಾ ಅವರು ತಂದ ಪಾಲಿಸಿ ಬಗ್ಗೆಯೋ, ಮೆಕಾಲೆ ಮತ್ತು ಕಾರ್ಲ್ ಮಾರ್ಕ್ಸ್ ಪ್ರಭಾವದಿಂದ ಹೊರಬರಬಾರದು ಅಂತಾ ಇದ್ಯಾ? ಗುಲಾಮಿ ಮನಸ್ಥಿತಿಯಿಂದ ಹೊರಬರಲು ಸಿದ್ಧವಿಲ್ಲದ ಉದ್ದೇಶ ಇದ್ಯಾ? ನಿಮ್ಮ ನಿರ್ಣಯ ರಾಷ್ಟ್ರ ಹಿತಕ್ಕೆ ಘಾತಕ" ಎಂದರು.

ಇದನ್ನೂ ಓದಿ: Bommai: ತಮಿಳುನಾಡು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಹಾಕಿದ ತಕ್ಷಣ ಕಾವೇರಿ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ- ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.