ETV Bharat / state

ಇಲ್ಲಿಯವರೆಗೆ ಬೆಳೆ, ಮನೆ ಹಾನಿ ಪರಿಹಾರ ಪಾವತಿಯಾಗಿಲ್ಲ: ಸಿದ್ದರಾಮಯ್ಯ

author img

By

Published : Sep 16, 2022, 10:52 AM IST

ಇಲ್ಲಿಯವರೆಗೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ಪಾವತಿಯಾಗಿಲ್ಲ. 5.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೇಂದ್ರ ನಿಯೋಗಕ್ಕೆ ವರದಿ ನೀಡಲಾಗಿದೆ. ಯಾರೊಬ್ಬ ಸಂತ್ರಸ್ತ ಕೂಡ ಬೆಳೆ ಹಾನಿ ಪರಿಹಾರ ಪಡೆದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

Siddaramaiah
ಸಿದ್ದರಾಮಯ್ಯ

ಬೆಂಗಳೂರು: ಇಲ್ಲಿಯವರೆಗೆ ಬೆಳೆ ಮತ್ತು ಮನೆ‌ ಹಾನಿ ಪರಿಹಾರವೇ ಪಾವತಿಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ನಾನು ನಾಲ್ಕೈದು ಕಡೆ ಹೋಗಿದ್ದೆ. ಇಲ್ಲಿಯವರೆಗೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ಪಾವತಿಯಾಗಿಲ್ಲ. 5.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೇಂದ್ರ ನಿಯೋಗಕ್ಕೆ ವರದಿ ನೀಡಲಾಗಿದೆ. ಯಾರೊಬ್ಬರು ಬೆಳೆ ಹಾನಿ ಪರಿಹಾರ ಪಡೆದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸತತ ಮಳೆಗೆ ಹಾಸನದಲ್ಲಿ 4,440 ಹೆಕ್ಟೇರ್ ಬೆಳೆ ನಾಶ: ಕಂಗಾಲಾದ ಕೃಷಿಕರು

ಈ ವೇಳೆ ಮಧ್ಯಪ್ರವೇಶಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಬೆಳೆ ಹಾನಿಗಾಗಿ 116 ಕೋಟಿ ರೂ.‌ಹಣ ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆಗೆ 112 ಲಕ್ಷ ರೂ. ಕೊಡಲಾಗಿದೆ ಎಂದರು. ಈ ವೇಳೆ ಸಿದ್ದರಾಮಯ್ಯ ಬಾದಾಮಿಯಲ್ಲಿ ಎಷ್ಟು ರೈತರಿಗೆ ಬೆಳೆ ಹಾನಿ ಪಾವತಿಸಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಲಾಗದೆ ಸಚಿವ ಬಿ.ಸಿ.ಪಾಟೀಲ್ ನಾಳೆ ಅಂಕಿ ಅಂಶ ನೀಡುತ್ತೇನೆ ಎಂದು ಹೇಳಿದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಸಚಿವ ಬಿ.ಸಿ.ಪಾಟೀಲ್ ಎದ್ದು ನಿಂತು ಮಾಹಿತಿ ನೀಡಲು ಮುಂದಾದರು. ಬಾದಾಮಿಯಲ್ಲಿ 169 ರೈತರಿಗೆ 18.5 ಲಕ್ಷ ಪರಿಹಾರ ಜಮಾ ಅಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಶ್ರೀಗಂಧ ಬೆಳೆ ನಷ್ಟ: ಪರಿಹಾರಕ್ಕಾಗಿ ಸರ್ಕಾರಕ್ಕೆ ರಕ್ತದಲ್ಲಿ ಪತ್ರ

ಈ ವೇಳೆ ಎಷ್ಟು ಎಕರೆ ಬೆಳೆ ನಷ್ಟ ಆಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸಿದ್ದರಾಮಯ್ಯ ಪ್ರಶ್ನೆಗೆ ಸಚಿವ ಬಿ.ಸಿ.ಪಾಟೀಲ್ ತಬ್ಬಿಬ್ಬಾದರು. ನಾಳೆ ಆ ಮಾಹಿತಿ ನೀಡುತ್ತೇನೆ ಎಂದರು. ಕೊನೆಗೆ ಸ್ಪೀಕರ್ ಕೈಯಲ್ಲೂ ಗದರಿಸಿಕೊಂಡರು. ಬಿಡ್ರೀ, ಸುಮ್ಮನೆ ನಾಳೆ ಹೇಳೋರಂತೆ. ಅರ್ಧಂಬರ್ಧ ಬಂದು ಇಲ್ಲಿ ಹೇಳಿ ಇಲ್ದೆ ಇರೋದನ್ನು ಮೈಮೇಲೆ ಎಳೆದುಕೊಳ್ತೀರಿ ಎಂದು ಸ್ಪೀಕರ್ ಗರಂ ಆದರು.

ಇದನ್ನೂ ಓದಿ: ತುಮಕೂರಿನಲ್ಲಿ ಮಳೆಗೆ ನೂರಾರು ಎಕರೆ ಅಡಿಕೆ ತೋಟ ಜಲಾವೃತ, ರೈತರಿಗೆ ಭಾರೀ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.