ETV Bharat / state

Bengaluru crime: ಮಾಜಿ ಸಿಎಂ ನಿವಾಸದ ಬಳಿ ಅಪಾರ್ಟ್ ಮೆಂಟ್​ನ ಸೆಕ್ಯೂರಿಟಿ ಗಾರ್ಡ್​ ಸಿಬ್ಬಂದಿ ಮೇಲೆ ಹಲ್ಲೆ‌ ಕೇಸ್​.. ಆರೋಪಿ ಬಂಧನ

author img

By

Published : Jun 22, 2023, 6:14 PM IST

Updated : Jun 22, 2023, 7:32 PM IST

ವಿಚಾರಣೆ ವೇಳೆ ರಾಮಮೂರ್ತಿನಗರ ಸಂಜಯ್ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿ ಸೆಕ್ಯೂರಿಟಿ ಗಾರ್ಡ್ ಗಳ‌‌‌ ಮೇಲೆ ಹಲ್ಲೆಗೈದಿರುವ ಕುರಿತಾಗಿ ಆರೋಪಿ ತೌಸಿಫ್ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.

Assaulted security guard
ಹಲ್ಲೆಗೊಳಗಾದ ಸೆಕ್ಯೂರಿಟಿ ಗಾರ್ಡ್​

ಡಿಸಿಪಿ ಶಿವಪ್ರಕಾಶ್ ದೇವರಾಜ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನೆ ಕೂಗಳತೆ ದೂರದಲ್ಲಿ ಅಪಾರ್ಟ್ ಮೆಂಟ್ ವೊಂದರ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ.

ಡಿಜಿ ಹಳ್ಳಿ ನಿವಾಸಿ ತೌಸಿಫ್ ಬಂಧಿತ ಆರೋಪಿ. ಜೂನ್​ 18ರ ರಾತ್ರಿ ಆರ್‌.ಟಿ. ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್​ ಎಂಬುವರ ಮುಖಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಆರೋಪದಡಿ ಬಂಧಿಸಲಾಗಿದೆ.

ಆರೋಪಿ ಡಿಜಿ ಹಳ್ಳಿಯಲ್ಲಿ ತಂದೆಯೊಂದಿಗೆ ವಾಸವಿದ್ದನು. ಕೆಲಸವಿಲ್ಲದೆ ಸುಖಾಸುಮ್ಮನೆ ತಿರುಗಾಡುತ್ತಿದ್ದ. ಬೀದಿಯಲ್ಲಿ ಪ್ಲಾಸ್ಟಿಕ್-ಕಬ್ಬಿಣ‌ ವಸ್ತುಗಳನ್ನು ಆಯ್ದು ಮಾರಾಟ ಮಾಡುತ್ತಿದ್ದನು. ಅದರಿಂದ ಬರುತ್ತಿದ್ದ ಹಣವನ್ನ ಕುಡಿತಕ್ಕೆ ವಿನಿಯೋಗಿಸುತ್ತಿದ್ದ. ರಾತ್ರಿ ಆಯ್ತು ಅಂದರೆ ಎಲ್ಲೆಂದರಲ್ಲಿ ಮಲಗುತ್ತಿದ್ದನು. ಕೆಲವು ದಿನಗಳ ಹಿಂದೆ ಆರ್.ಟಿ.ನಗರದ ಬಳಿ ಬಂದು ಕುಡಿದ ಸೋಗಿನಲ್ಲಿ‌‌‌ ಸೆಕ್ಯೂರಿಟಿ ಗಾರ್ಡ್‌ ಮೇಲೆ ಚಾಕುವಿನಿಂದ ಇರಿದು ಹಲ್ಲೆ‌ ಮಾಡಿ ಎಸ್ಕೇಪ್‌ ಆಗಿದ್ದನು. ಈತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ರಾಮಮೂರ್ತಿನಗರ, ಸಂಜಯ್ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ‌‌‌ ಮೇಲೆ ಚಾಕುವಿನಿಂದ ಇರಿದು ಹಲ್ಲೆಗೈದಿರುವ ಕುರಿತಾಗಿ ಬಾಯ್ಬಿಟ್ಟಿದ್ದಾನೆ.‌ ಮೊಬೈಲ್ ಸುಲಿಗೆ ಪ್ರಕರಣದಲ್ಲಿ ಸದಾಶಿವನಗರ ಪೊಲೀಸರು ಈತನನ್ನ ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಅಡ್ಡಾದಿಡ್ಡಿಯಾಗಿ ಒಂಟಿಯಾಗಿ ಓಡಾಡಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ‌ ಮಾಡಿದ್ದಾನೆ.

ಮನೋವ್ಯಾಧಿಯಿಂದ ಬಳಲುತ್ತಿರುವ ಆರೋಪಿ ಭದ್ರತಾ ಸಿಬ್ಬಂದಿಯನ್ನ‌ ಟಾರ್ಗೆಟ್‌ ಮಾಡಿಕೊಂಡು ಯಾಕೆ ಕೃತ್ಯವೆಸಗುತ್ತಿದ್ದ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.‌ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯ ವಿಚಾರಣೆಯನ್ನೂ ತೀವ್ರಗೊಳಿಸಲಾಗಿದೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಚರ್ಚ್​ಗೆ ನುಗ್ಗಿ ವಸ್ತು ಧ್ವಂಸ: ಆರೋಪಿ ಬಂಧನ ಚರ್ಚ್ ಬಾಗಿಲು ಮುರಿದು ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಚರ್ಚ್‌ನ ಕೆಲ ವಸ್ತುಗಳಿಗೆ ಹಾನಿ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ನಗರದ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದಿತ್ತು. ಸುತ್ತಿಗೆ ಬಳಸಿ ಸೈಂಟ್ ಪಿಯಸ್ ಚರ್ಚ್ ಬಾಗಿಲು ಮುರಿದು, ಹಾನಿಗೊಳಿಸಿದ್ದ ಟಾಮ್ ಮ್ಯಾಥ್ಯೂ (20) ಎಂಬ ಆರೋಪಿಯನ್ನ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ಬೆಳಗಿನ ಜಾವ 4:30ರ ಸುಮಾರಿಗೆ ಚರ್ಚ್ ಬಳಿ ಬಂದಿದ್ದ ಟಾಮ್ ಮ್ಯಾಥ್ಯೂ ಸುತ್ತಿಗೆ ಬಳಸಿ ಚರ್ಚ್ ಬಾಗಿಲು ಮುರಿದಿದ್ದ. ಬಳಿಕ ಚರ್ಚ್ ಒಳಗಿರುವ ಕೆಲ ವಸ್ತುಗಳಿಗೆ ಹಾನಿ ಮಾಡಿದ್ದ. ಘಟನೆಯ ಮಾಹಿತಿ ತಿಳಿದ ತಕ್ಷಣ ತ್ವರಿತವಾಗಿ ಆರೋಪಿಯ ವಿಳಾಸ ಪತ್ತೆ ಹಚ್ಚಿದ ಬಾಣಸವಾಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂಓದಿ:Chamarajanagar crime: ಬಸ್​​ ನಿಲ್ದಾಣದಲ್ಲಿ ಹುಡುಗಿ ಪಕ್ಕ ನಿಂತಿದ್ದ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ!

Last Updated : Jun 22, 2023, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.