ETV Bharat / state

ರಾಜ್ಯದಲ್ಲಿ ಕೊರೊನಾ ಹೊಸ ಕೇಸ್​ ಮತ್ತಷ್ಟು ಇಳಿಕೆ.. ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..

author img

By

Published : Jul 18, 2021, 7:18 PM IST

ರಾಜಧಾನಿಯಲ್ಲಿ 386 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,22,189ಕ್ಕೆ ಏರಿಕೆ ಕಂಡಿದೆ. 793 ಮಂದಿ ಗುಣಮುಖರಾಗಿದ್ದಾರೆ. ಈ ತನಕ‌  11,94,641  ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ 11,751 ಸಕ್ರಿಯ ಪ್ರಕರಣಗಳಿವೆ. ಇಂದು 9 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 15,796ಕ್ಕೆ ಏರಿದೆ..

covid-19-new-cases-decreased-in-karnataka
ಕೊರೊನಾ ಹೊಸ ಕೇಸ್​ ಇಳಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಧಾನವಾಗಿ ಇಳಿಮುಖವಾಗುತ್ತಿದೆ. ಇಂದು 1708 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಳೆ ಒಂದೇ ದಿನ 2463 ಜನ ಗುಣಮುಖರಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 29,291ಕ್ಕೆ ಇಳಿದಿದೆ. ರಾಜ್ಯಾದ್ಯಂತ ಈವರೆಗೆ ವೈರಸ್​ನಿಂದ ಗುಣಮುಖರಾದವರ ಸಂಖ್ಯೆ 28,18,476ಕ್ಕೆ ಏರಿಕೆ ಕಂಡಿದೆ.

ಕೋವಿಡ್​-19 ಸೋಂಕಿಗೆ ಈವರೆಗೆ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 36,157ಕ್ಕೆ ಏರಿದ್ದು, ಇಂದು 36 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೂ ಕೊರೊನಾ ಸೋಂಕಿತರ ಸಂಖ್ಯೆ 28,83,947ಕ್ಕೆ ಏರಿಕೆ ಕಂಡಿದ್ದು, ಸಾವಿನ‌ ಶೇಕಡವಾರು ಪ್ರಮಾಣ 2.10%ರಷ್ಟು‌ ದಾಖಲಾಗಿದೆ.

ರಾಜಧಾನಿಯಲ್ಲಿ 386 ಜನರಿಗೆ ಸೋಂಕು ದೃಢ

ರಾಜಧಾನಿಯಲ್ಲಿ 386 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,22,189ಕ್ಕೆ ಏರಿಕೆ ಕಂಡಿದೆ. 793 ಮಂದಿ ಗುಣಮುಖರಾಗಿದ್ದಾರೆ. ಈ ತನಕ‌ 11,94,641 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ 11,751 ಸಕ್ರಿಯ ಪ್ರಕರಣಗಳಿವೆ. ಇಂದು 9 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 15,796ಕ್ಕೆ ಏರಿದೆ.

ಓದಿ: SSLC EXAM : ರಾಮನಗರದಲ್ಲಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.