ETV Bharat / state

ಬೆಂಗಳೂರಿನಲ್ಲಿ ಜೋಡಿ ಕೊಲೆ ಪ್ರಕರಣ....ಕೊಲೆಯ ಅಸಲಿಯತ್ತು ಬಯಲಿಗೆಳೆದ ಪೊಲೀಸರು

author img

By

Published : May 11, 2020, 3:29 PM IST

ಬೆಂಗಳೂರಿನಲ್ಲಿ ನಡೆದಿದ್ದ ಜೋಡಿಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

couple murder in bengaluru
ಬೆಂಗಳೂರಿನಲ್ಲಿ ಜೋಡಿ ಕೊಲೆ ಪ್ರಕರಣ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ನಡೆದ‌ ಜೋಡಿ ಕೊಲೆ‌‌ ಪ್ರಕರಣದ ಆರೋಪಿಯನ್ನ ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಕೇಶ್ ಅಲಿಯಾಸ್ ರಾಕ್ಸ್‌ ಬಂಧಿತ ಆರೋಪಿ. ನಿನ್ನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​​ಬಿಐ ಲೇಔಟ್ ಬಳಿ ವಾಸವಾಗಿದ್ದ ಸರ್ಕಾರಿ ನಿವೃತ್ತ ನೌಕರ ಗೋಂವಿದಪ್ಪ ಮತ್ತು ಶಾಂತಮ್ಮ ದಂಪತಿಯ ಕೊಲೆ ನಡೆದಿತ್ತು. ಮಗ ನವೀನ್ ಇಲ್ಲದೇ ಇರುವ ಸಂದರ್ಭ ನೋಡಿಕೊಂಡು ಇವರನ್ನು ಹತ್ಯೆ ಮಾಡಲಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಕೊಲೆಯಾದ ದಂಪತಿಯ ಮಗ ನವೀನನೇ ಕೊಲೆ ಮಾಡಿರಬಹುದೆಂದು ಮೊದಲು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ತನಿಖೆಯಲ್ಲಿ ಅಸಲಿಯತ್ತು ಸದ್ಯ ಬೆಳಕಿಗೆ ಬಂದಿದೆ.

ಕೊಲೆಯಾದ ದಂಪತಿ ಮಗ ನವೀನ್ 2008ರಲ್ಲಿ ಮದುವೆಯಾಗಿ ತದ ನಂತ್ರ ಸಂಸಾರದಲ್ಲಿ ಬಿರುಕು ಉಂಟಾದ ಕಾರಣ ಕೌಟುಂಬಿಕ ನ್ಯಾಯಾಲಯದಲ್ಲಿ ಕೌನ್ಸೆಲಿಂಗ್ ಕೂಡ ನಡೆದಿತ್ತು. ಆದರೆ ಇದನ್ನೇ ದ್ವೇಷವಾಗಿಟ್ಟುಕೊಂಡು ನವೀನ್ ಪತ್ನಿಯ ತಮ್ಮ ರಾಕೇಶ್ ಅಕ್ಕನ ವಿಚಾರವಾಗಿ ಬಾವ ನವೀನ್ ಜೊತೆ ಯಾವಾಗಲು ಗಲಾಟೆ ಮಾಡಿಕೊಳ್ತಿದ್ದ. ನಿನ್ನೆ ಕೂಡ ನವೀನ್ ಮನೆಗೆ ತೆರಳಿ ಗಲಾಟೆ‌ ಮಾಡಲು‌ ಮುಂದಾಗಿದ್ದ. ಆದರೆ, ನವೀನ್ ಇಲ್ಲದೇ ಇದ್ದಿದ್ದರಿಂದ ಗೋವಿಂದಯ್ಯ ಮತ್ತು ಶಾಂತಮ್ಮ ಅವರಿಗೆ ಚಾಕುವಿನಿಂದ ಚುಚ್ಚಿ ಕೊಲೆ‌ಮಾಡಿ ಪರಾರಿಯಾಗಿದ್ದ. ಸದ್ಯ ಜೋಡಿ‌ ಕೊಲೆ ಪ್ರಕರಣವನ್ನ ಭೇದಿಸಿರುವ ಕೋಣನಕುಂಟೆ ಪೊಲೀಸರು ಆರೋಪಿ ಪತ್ತೆ ಹಚ್ಚಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.