ETV Bharat / state

ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಭ್ರಷ್ಟಾಚಾರ ಮಿತಿ ಮೀರಿತ್ತು: ಪರಿಷತ್ ಸದಸ್ಯ ಪುಟ್ಟಣ್ಣ ಆರೋಪ

author img

By

Published : Sep 5, 2019, 6:06 PM IST

ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿ ಜಾತೀಯತೆ, ವರ್ಗಾವಣೆ ದಂಧೆ ಅವ್ಯಾಹತವಾಗಿ ತಾಂಡವ ಆಡುತ್ತಿತ್ತು. ಕಳೆದ ಒಂದು ವರ್ಷದಿಂದ ನಾನು ಮಾತನಾಡದೇ ಸುಮ್ಮನಿದ್ದೆ. ಮೈತ್ರಿ ಕಾಲದಲ್ಲಿ ನಮಗೆ ಮಾತನಾಡಲು ಅವಕಾಶ ಇರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ

ಬೆಂಗಳೂರು: ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಆದ ಭ್ರಷ್ಟಾಚಾರ ಬೇರೆ ಯಾವ ಸಮಯದಲ್ಲೂ ಆಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಆಯೋಜಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಕುಲಪತಿಗಳ ನೇಮಕಾತಿಯಲ್ಲಿ ಕೋಟಿ ಕೋಟಿ ಹಣ ಬಾಚಿದ್ದಾರೆ. ಕುಲಪತಿಗಳ ನೇಮಕಾತಿಗೆ ರಾಜ್ಯಪಾಲರಿಂದಲೇ ಹಣ ಫಿಕ್ಸ್ ಅಗಿತ್ತು. ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಎರಡೂ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿದ್ದವು. ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿ ಜಾತೀಯತೆ, ವರ್ಗಾವಣೆ ದಂಧೆ ಅವ್ಯಾಹತವಾಗಿ ತಾಂಡವ ಆಡುತ್ತಿತ್ತು. ಕಳೆದ ಒಂದು ವರ್ಷದಿಂದ ನಾನು ಮಾತನಾಡದೇ ಸುಮ್ಮನಿದ್ದೆ. ಮೈತ್ರಿ ಕಾಲದಲ್ಲಿ ನಮಗೆ ಮಾತನಾಡಲು ಅವಕಾಶ ಇರಲಿಲ್ಲ ಎಂದು ಕಿಡಿ ಕಾರಿದರು.

ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ

ಈಗ ಸರ್ಕಾರ ಬದಲಾಗಿರುವುದು ಸಂತಸ ತಂದಿದೆ.‌ ಉತ್ತಮವಾದವರನ್ನೇ ಎರಡೂ ಇಲಾಖೆಗಳಿಗೂ ಸಚಿವರಾಗಿ ನೇಮಕ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ, ಅಶ್ವತ್ಥ ನಾರಾಯಣ, ಸುರೇಶ್ ಕುಮಾರ್​ರಂತಹ ಒಳ್ಳೆಯವರನ್ನು ಶಿಕ್ಷಣ ಇಲಾಖೆಗಳಿಗೆ ನೇಮಿಸಿದ್ದಾರೆ. ಪ್ರಾಥಮಿಕ‌ ಮತ್ತು ಉನ್ನತ ಶಿಕ್ಷಣ ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತ ಇಲಾಖೆಗಳು ಅಂತ ಘೋಷಿಸಿ. ಇನ್ಮುಂದೆ ಈ ಎರಡೂ ಇಲಾಖೆಗಳು ಭ್ರಷ್ಟಾಚಾರ ಮುಕ್ತ ಇಲಾಖೆಯಾಗುವ ವಿಶ್ವಾಸ ಇದೆ ಎಂದರು.

ಕಚೇರಿ ಸುತ್ತಾಡುವ ಅವಶ್ಯಕತೆ ಬರಲ್ಲ:

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡಿ, ಕಾಲೇಜು ಶಿಕ್ಷಕರು, ಪ್ರಾಂಶುಪಾಲರ ನೇಮಕಾತಿ, ವಿವಿ ಸಂಶೋಧನೆ ಹಾಗೂ ವರ್ಗಾವಣೆ ವಿಚಾರದಲ್ಲಿ ಯಾರೂ ಕಚೇರಿಗಳನ್ನು ಸುತ್ತಾಡುವ ಪರಿಸ್ಥಿತಿ ಉಂಟಾಗುವುದಿಲ್ಲ. ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ.‌ ಈ ಸಂಬಂಧ‌ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_02_TEACHERSDAY_VIDHANSAUDHA_SCRIPT_7201951

ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಭ್ರಷ್ಟಾಚಾರ ಮಿತಿ ಮೀರಿತ್ತು: ಪರಿಷತ್ ಸದಸ್ಯ ಪುಟ್ಟಣ್ಣ

ಬೆಂಗಳೂರು: ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಆದ ಭ್ರಷ್ಟಾಚಾರ ಬೇರೆ ಯಾವ ಸಮಯದಲ್ಲೂ ಆಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಗಂಭೀರ ಆರೋಪ ಮಾಡಿದರು.

ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಸಿ ಕುಲಪತಿಗಳ ನೇಮಕಾತಿಗೆ ಕೋಟಿ ಕೋಟಿ ಹಣವನ್ನು ಬಾಚಿದ್ದಾರೆ. ಕುಲಪತಿಗಳ ನೇಮಕಾತಿಗೆ ರಾಜ್ಯಪಾಲರಿಂದನೇ ಹಣ ಫಿಕ್ಸ್ ಅಗಿತ್ತು. ಹಿಂದಿನ ಮೈತ್ರಿ ಅವಧಿಯಲ್ಲಿ ಈ ಎರಡೂ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿದ್ವು. ಮೈತ್ರಿ ಅವಧಿಯಲ್ಲಿ ಜಾತೀಯತೆ, ವರ್ಗಾವಣೆ ದಂಧೆ ಅವ್ಯಾಹತವಾಗಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿ ತಾಂಡವ ಆಡುತ್ತಿತ್ತು. ಕಳೆದ ಒಂದು ವರ್ಷದಿಂದ ನಾನು ಮಾತಾಡದೇ ಸುಮ್ಮನಿದ್ದೆ. ನಮಗೆ ಮೈತ್ರಿ ಕಾಲದಲ್ಲಿ ಮಾತಾಡಲು ಅವಕಾಶ ಇರಲಿಲ್ಲ ಎಂದು ಕಿಡಿ ಕಾರಿದರು.

ಈಗ ಸರ್ಕಾರ ಬದಲಾಗಿರುವುದು ಸಂತೋಷ ತಂದಿದೆ.‌ಉತ್ತಮವಾದವರನ್ನೇ ಎರಡೂ ಇಲಾಖೆಗಳಿಗೂ ಸಚಿವರಾಗಿ ನೇಮಕ ಮಾಡಿದ್ದಾರೆ ಸಿಎಂ. ಯಡಿಯೂರಪ್ಪ ನವರು ಅಶ್ವತ್ಥ ನಾರಾಯಣ, ಸುರೇಶ್ ಕುಮಾರ್ ಅಂಥ ಒಳ್ಳೆಯವರನ್ನು ಶಿಕ್ಷಣ ಇಲಾಖೆಗಳಿಗೆ ನೇಮಿಸಿದ್ದಾರೆ. ಪ್ರಾಥಮಿಕ‌ ಮತ್ತು ಉನ್ನತ ಶಿಕ್ಷಣ ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತ ಇಲಾಖೆಗಳು ಅಂತ ಘೋಷಿಸಿ. ಇನ್ಮುಂದೆ ಈ ಎರಡೂ ಇಲಾಖೆಗಳೂ ಭ್ರಷ್ಟಾಚಾರ ಮುಕ್ತ ಇಲಾಖೆಯಾಗುವ ವಿಶ್ವಾಸ ಇದೆ ಎಂದು ತಿಳಿಸಿದರು.

ಕಚೇರಿ ಸುತ್ತಾಡುವ ಅವಶ್ಯಕತೆ ಬರಲ್ಲ:

ಕಾಲೇಜು ಶಿಕ್ಷಕರು, ಪ್ರಾಂಶುಪಾಲರ ನೇಮಕಾತಿ, ವಿವಿ ಸಂಶೋಧನೆ ಹಾಗೂ ವರ್ಗಾವಣೆ ವಿಚಾರದಲ್ಲಿ ಯಾರೂ ಕಚೇರಿಗಳನ್ನು ಸುತ್ತಾಡುವ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದರು.

ಇಲಖೆಯಲ್ಲಿ ಯಾವುದೇ ಭ್ರಷ್ಟಾಚಾರ ಕ್ಕೆ ಅವಕಾಶ ನೀಡುವುದಿಲ್ಲ.‌ ಈ ಸಂಬಂಧ‌ ಸಂಪೂರ್ಣ ಪಾರದರ್ಶಕ ಕಾಯ್ದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.