ETV Bharat / state

ಪೌರಕಾರ್ಮಿಕರ ಖಾಯಂಗೊಳಿಸುವ ನಿರ್ಧಾರ: ಸರ್ಕಾರದ ವಿರುದ್ಧ ಸಂಘಟನೆಗಳಿಂದ ಆಕ್ರೋಶ

author img

By

Published : Nov 4, 2022, 1:00 PM IST

3,673 ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಇದು ಪೌರಕಾರ್ಮಿಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.

contract civil servants
ಪೌರಕಾರ್ಮಿಕ

ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 3,673 ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರವು ಪೌರಕಾರ್ಮಿಕರಲ್ಲಿ ಅಸಮಾಧಾನ ಉಂಟುಮಾಡಿದೆ.

ನಗರದಲ್ಲಿ 18,000 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದು, ಅವರಲ್ಲಿ ಕೇವಲ 3,673 ಸಾವಿರ ಮಂದಿಯ ಉದ್ಯೋಗವನ್ನು ಮಾತ್ರ ಸರ್ಕಾರ ಖಾಯಂಗೊಳಿಸುತ್ತಿದ್ದು ಇತರರಿಗೆ ಅನ್ಯಾಯವಾಗಿದೆ. ನಾವೂ ರಾಜ್ಯದ ನಿವಾಸಿಗಳೇ, ನಾವು ಕೂಡ ಇಡೀ ನಗರವನ್ನು ಸ್ವಚ್ಛವಾಗಿರಿಸುತ್ತೇವೆ ಎಂದು ಉಳಿದ ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಸರಕಾರ ಸೆಪ್ಟೆಂಬರ್ 26 ರಂದು ಪ್ರಸ್ತಾಪಿಸಿದ ಕರಡಿನಲ್ಲಿ ಕೇವಲ 3,673 ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದಿದ್ದು ಪೌರಕಾರ್ಮಿಕರಲ್ಲಿ ಅಸಹನೆ ಉಂಟು ಮಾಡಿದೆ.

ನವೆಂಬರ್ 6ರಂದು ಸಮಾವೇಶ: ಲೋಡರ್‌ಗಳು, ಕಸದ ಟ್ರಕ್ ಚಾಲಕರು ಮತ್ತು ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ಸೇರಿದಂತೆ ಪೌರ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಖಾಯಂಗೊಳಿಸುವಂತೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಗಳ ನಂತರ, ಗುತ್ತಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದು ಮತ್ತು ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಸರಕಾರ ಜುಲೈನಲ್ಲಿ ತಿಳಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ತೆಗೆದುಕೊಂಡ ನಿರ್ಧಾರ ನ್ಯಾಯಯುತವಾಗಿಲ್ಲ. ಹೀಗಾಗಿ ಇದೀಗ ನವೆಂಬರ್ 6ರಂದು ಸಮಾವೇಶ ನಡೆಸಿ ಭರವಸೆ ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸಲು ತೆರಳಿದ್ದ ಪೌರಕಾರ್ಮಿಕರಿಗೆ ಮನೆ ಮಾಲೀಕನಿಂದ ಜಾತಿ ನಿಂದನೆ, ಹಲ್ಲೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.