ETV Bharat / state

ಪಿಎಸ್ಐ ಸಮವಸ್ತ್ರ ಧರಿಸಿದ್ದ ಕಾನ್​​ಸ್ಟೇಬಲ್‌ ಸಸ್ಪೆಂಡ್

author img

By

Published : May 5, 2022, 5:31 PM IST

ವಿವೇಕನಗರ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್ ಬಸನಗೌಡ ಕರೇಗೌಡ ಅಮಾನತುಗೊಂಡಿದ್ದಾರೆ. ಪಿಎಸ್​ಐ ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಸಮವಸ್ತ್ರ ಧರಿಸಿ ಊರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರಿಂದ ಸಸ್ಪೆಂಡ್​ ಮಾಡಲಾಗಿದೆ.

Constable Suspend for wearing PSI uniform
ವಿವೇಕನಗರ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್ ಬಸನಗೌಡ ಕರೇಗೌಡ

ಬೆಂಗಳೂರು: ನೇಮಕಾತಿ ಆದೇಶ ಹೊರಬೀಳುವ ಮುನ್ನವೇ ಖಾಕಿ‌ ಸಮವಸ್ತ್ರ ಧರಿಸಿ ಶಿಸ್ತು ಉಲ್ಲಂಘಿಸಿದ್ದ ಪೊಲೀಸ್ ಕಾನ್​​ಸ್ಟೇಬಲ್​ನನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅಮಾನತು ಮಾಡಿದ್ದಾರೆ‌. ವಿವೇಕನಗರ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್ ಬಸನಗೌಡ ಕರೇಗೌಡ ಅಮಾನತುಗೊಂಡಿದ್ದಾರೆ. ಇತ್ತೀಚೆಗೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಬಸನಗೌಡ ಆಯ್ಕೆಯಾಗಿದ್ದರು.

ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಸಮವಸ್ತ್ರ ಧರಿಸಿ ಊರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಕಾನ್​​ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ, ಪಿಎಸ್ಐ ಬಟ್ಟೆ ಧರಿಸಿದ್ದರು. ಪೊಲೀಸ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ್ದರಿಂದ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ಡಿವೈಎಸ್ಪಿ​ ಸಾಲಿ, ಸಿಪಿಐ ಮೇತ್ರೆ ಬಂಧನ: ಇವರ ಪಾತ್ರವೇನು ಗೊತ್ತಾ?

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.