ETV Bharat / state

ಈಗ ಯಾರನ್ನು ನೇಣಿಗೆ ಹಾಕುವಿರಿ ಬಿಜೆಪಿ ನಾಯಕರೆ?: ಕಾಂಗ್ರೆಸ್​ ಟ್ವೀಟ್​

author img

By

Published : Jun 14, 2023, 5:24 PM IST

ಸಂಸದ ರಮೇಶ್​ ಜಿಗಜಿಣಗಿ ಹೇಳಿಕೆ ಬಗ್ಗೆ ಕಾಂಗ್ರೆಸ್​ ವ್ಯಂಗ್ಯವಾಡಿದೆ.

ಕಾಂಗ್ರೆಸ್​
ಕಾಂಗ್ರೆಸ್​

ಬೆಂಗಳೂರು : ಹೊಂದಾಣಿಕೆ ರಾಜಕಾರಣದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತ್ತು ಮೈಸೂರು -ಕೊಡಗು ಕ್ಷೇತ್ರದ ಸಂಸದ ಪ್ರತಾಪ್​ ಸಿಂಹ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ರಿಟೈರ್ಡ್ ಹರ್ಟ್ ಆಗಿರುವ ಸಿ ಟಿ ರವಿ ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅವರ ಅರಣ್ಯ ರೋಧನಕ್ಕೆ ಪ್ರತಾಪ್​ ಸಿಂಹ ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟ್​​ಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ! ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿ ಎಸ್ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಪ್ರತಾಪ್​ ಸಿಂಹ ಹಾಗೂ ಸಿ ಟಿ ರವಿ ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಪ್ರಹ್ಲಾದ್​ ಜೋಶಿ, ಬಿ ಎಲ್​ ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

  • ರಿಟೈರ್ಡ್ ಹರ್ಟ್ ಆಗಿರುವ @CTRavi_BJP ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋಧನಕ್ಕೆ @mepratap ದನಿ ಜೋಡಿಸಿದ್ದಾರೆ.

    ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ.

    ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ…

    — Karnataka Congress (@INCKarnataka) June 14, 2023 " class="align-text-top noRightClick twitterSection" data=" ">

ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?: ಮತ್ತೊಂದು ಟ್ವೀಟ್​ನಲ್ಲಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ ಬಿಜೆಪಿ ನಾಯಕರೆ? ಅಮಿತ್ ಶಾ ಅವರನ್ನೋ? ಬಿ ಎಲ್ ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ? ಎಂದು ಕೇಳಿದೆ.

  • ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ!

    ಬೊಮ್ಮಾಯಿ ಹಾಗೂ @BSYBJP ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ @mepratap @CTRavi_BJP ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ.

    ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ.…

    — Karnataka Congress (@INCKarnataka) June 14, 2023 " class="align-text-top noRightClick twitterSection" data=" ">

ಹೊಸಬರಿಗೆ ಟಿಕೆಟ್‌ ಕೊಡುವಂತೆ ಐಡಿಯಾ ಕೊಟ್ಟವರನ್ನು ನೇಣಿಗೆ ಹಾಕಿ: ಇನ್ನೊಂದೆಡೆ ಹೊಸಬರಿಗೆ ಟಿಕೆಟ್‌ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದ್ರೂ ಹಾಕಿ, ಕಾಲನ್ನಾದರೂ ಕಡಿಯಿರಿ ಎಂದು ವಿಜಯಪುರ ಸಂಸದ ರಮೇಶ್​ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದರು.

  • ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ @BJP4Karnataka?

    ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ, ಯಾರ ಕಾಲು ಕಡಿಯುವಿರಿ?

    ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ?

    ಅಂದಹಾಗೆ ನಿಮ್ಮ "ಚಾಣಕ್ಯ" ಎಲ್ಲಿ, ಪತ್ತೆಯೇ ಇಲ್ಲವಲ್ಲ?

    — Karnataka Congress (@INCKarnataka) June 14, 2023 " class="align-text-top noRightClick twitterSection" data=" ">

ಇದನ್ನೂ ಓದಿ: ನಾವು ಮತ್ತು ಬೊಮ್ಮಾಯಿ ಬೀಗರು, ನಮ್ಮ ಭೇಟಿ ರಾಜಕೀಯ ಪ್ರೇರಿತ ಅಲ್ಲ: ಶಾಮನೂರು ಶಿವಶಂಕರಪ್ಪ

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಜನ ಹೊಸಬರಿಗೆ ಟಿಕೆಟ್‌ ನೀಡಲಾಗಿತ್ತು. ಅದರಲ್ಲಿ ಗೆದ್ದವರು ಬೆರಳಣಿಕೆಯಷ್ಟು ಮಂದಿ ಮಾತ್ರ. ಹಿರಿಯರಿಗೆ ಟಿಕೆಟ್‌ ಕೊಟ್ಟಿದ್ದರೆ ಎಲ್ಲರೂ ಗೆಲ್ಲುತ್ತಿದ್ದರು. ಆಗ 130ಕ್ಕೂ ಹೆಚ್ಚು ಸೀಟ್‌ಗಳನ್ನು ಬಿಜೆಪಿ ಗೆಲ್ಲುವ ಮೂಲಕ ಬಹುಮತ ಸಾಧಿಸುತ್ತಿತ್ತು. ಹೊಸಬರಿಗೆ ಬಿಜೆಪಿ ಟಿಕೆಟ್‌ ಕೊಡುವ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಫ್ರೀ ಬಸ್ ಯೋಜನೆಯಿಂದ ಗಂಡ- ಹೆಂಡತಿ ನಡುವೆ ಜಗಳ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.