ETV Bharat / state

ಹೋಟೆಲ್‌,ರೆಸಾರ್ಟ್‌ ರಾಜಕೀಯ: ಕೈ ಶಾಸಕರ ವಾಸ್ತವ್ಯಕ್ಕೆ ಲಕ್ಷ ಲಕ್ಷ ಖರ್ಚು!

author img

By

Published : Jul 13, 2019, 5:40 PM IST

Updated : Jul 13, 2019, 8:36 PM IST

ಕಾಂಗ್ರೆಸ್ ಪಕ್ಷದ ನಡೆ ಕುರಿತು ಅತೃಪ್ತಿ ಹೊಂದಿರುವ ಕೆಲವು ಶಾಸಕರು ರಾಜೀನಾಮೆ ನೀಡಿ, ಮೈತ್ರಿ ನಾಯಕರಲ್ಲಿ ನಡುಕ ಉಂಟುಮಾಡಿದ್ದರು. ಇದರಿಂದಾಗಿ ಎಚ್ಚೆತ್ತಿರುವ ಪಕ್ಷದ ನಾಯಕರು ಇನ್ನುಳಿದ ಶಾಸಕರು ಪಕ್ಷಾಂತರ ಮಾಡುವ ಭೀತಿಯಿಂದ ಅವರನ್ನು ಹೋಟೆಲ್‌ನಲ್ಲಿರಿಸಿ ನಿಯಂತ್ರಿಸುತ್ತಿದ್ದಾರೆ.

ತಾಜ್ ವಿವಾಂತ ಹೋಟೆಲ್​ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್

ಬೆಂಗಳೂರು: ಕಳೆದ ರಾತ್ರಿಯಿಂದ ಯಶವಂತಪುರದ ತಾಜ್ ವಿವಾಂತ ಪಂಚತಾರಾ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರ ವಾಸ್ತವ್ಯಕ್ಕೆ ಪಕ್ಷ ಲಕ್ಷ ಲಕ್ಷ ರೂಪಾಯಿ ದುಡ್ಡು ವ್ಯಯಿಸುತ್ತಿದೆ.

ಕೈ ಶಾಸಕರ ವಾಸ್ತವ್ಯಕ್ಕೆ ಲಕ್ಷ ಲಕ್ಷ ಖರ್ಚು!

ಈ ತಾರಾ ಹೋಟೆಲಿನಲ್ಲಿ ಒಂದು ದಿನಕ್ಕೆ ಒಬ್ಬರಿಗೆ ₹ 7,500+ ತೆರಿಗೆ ₹2,100 ಸೇರಿ ಒಟ್ಟು ₹ 9,600 ವೆಚ್ಚವಾಗುತ್ತದೆ. ಜೊತೆಗೆ, ಬೆಳಗ್ಗಿನ ಕಾಫಿಗೆ ₹160, ತಿಂಡಿಯ ಬೆಲೆ ₹ 450, ಮಧ್ಯಾಹ್ನ ಊಟದ ಮೊತ್ತ ₹ 1,350, ರಾತ್ರಿ ಡಿನ್ನರ್‌ಗೂ ಅಷ್ಟೇ ವೆಚ್ಚವಾಗುತ್ತದೆ. ಇದರ ಹೊರತು ಇತರೆ ಬೇಡಿಕೆಗಳಿದ್ದೇ ಇರುತ್ತದೆ, ಅದಕ್ಕೆ ಪ್ರತ್ಯೇಕವಾಗಿ ದರ ವಿಧಿಸವಾಗುತ್ತದೆ.

ಈ ರೀತಿ ಮೂರು ಹೊತ್ತು ಆಹಾರದ ಲೆಕ್ಕ ಹಾಕಿದ್ರೂ, ಒಬ್ಬರ ಹೋಟೆಲ್ ರೂಂ ಖರ್ಚು- 28,800 ರೂ. ಆಗಲಿದೆ. ಒಟ್ಟು 30 ಶಾಸಕರು ಹೋಟೆಲೊಳಗೆ ತಂಗಿದ್ದು, ಮೂರು ದಿನಕ್ಕೆ ₹ 8 ಲಕ್ಷ 64 ಸಾವಿರ ಖರ್ಚಾಗಲಿದೆ. ಒಬ್ಬರ ಕಾಫಿ ತಿಂಡಿ, ಊಟದ ಖರ್ಚು ಕಡಿಮೆ ಏನಿಲ್ಲವೆಂದ್ರೂ 11,700 ರೂ. ಆಗುತ್ತದೆ.

ಶಾಸಕರ ವಾಸ್ತವ್ಯದ ವೆಚ್ಚ ಇಷ್ಟಕ್ಕೆ ನಿಲ್ಲುವುದಿಲ್ಲ. ಹೋಟೆಲ್​ನಲ್ಲಿ ತಂಗಿರುವ ಶಾಸಕರ ಬೇಡಿಕೆ ಹಾಗೂ ಆಶಯಗಳು ಹೆಚ್ಚಿರಲಿದ್ದು, ಇದರಿಂದಾಗಿ ಖರ್ಚಿನ ಬಾಬ್ತು ಕೋಟಿ ಮೀರಿದರೂ ಅಚ್ಚರಿಯಿಲ್ಲ.

Intro:newsBody:ಕಾಂಗ್ರೆಸ್ ಶಾಸಕರ ವಾಸ್ತವ್ಯಕ್ಕೆ ಲಕ್ಷ ಲಕ್ಷ ಖರ್ಚು!

ಬೆಂಗಳೂರು: ನಿನ್ನೆ ರಾತ್ರಿಯಿಂದ ಯಶವಂತಪುರದ ತಾಜ್ ವಿವಾಂತದಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯಕ್ಕೆ ಪಕ್ಷ ಲಕ್ಷ ಲಕ್ಷ ರೂಪಾಯಿ ವ್ಯಯಿಸುತ್ತಿದೆ.
ಮೂರು ದಿನದ ವಾಸ್ತವ್ಯಕ್ಕೆ ಸದ್ಯ ನಿರ್ಧರಿಸಲಾಗಿದ್ದು, ಲಕ್ಷ ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ.
ಒಂದು ದಿನಕ್ಕೆ ಒಬ್ಬರಿಗೆ 7500+ ತೆರಿಗೆ 2100 ಸೇರಿ ಒಟ್ಟು 9600 ರೂ.
ಬೆಳಗಿನ ಕಾಫಿ ಮತ್ತ 160 ರೂ. ತಿಂಡಿಯ ಬೆಲೆ 450 ರೂ. ಮಧ್ಯಾಹ್ನ ಊಟದ ಮೊತ್ತ 1350 ರೂ. ರಾತ್ರಿ ಡಿನ್ನರ್ ಕೂಡ ಅಷ್ಟೇ ಆಗಲಿದೆ. ಇದರ ಹೊರತು ಇತರೆ ಬೇಡಿಕೆಗಳಿದ್ದೇ ಇರುತ್ತದೆ ಅದಕ್ಕೆ ಇನ್ನಷ್ಟು ವೆಚ್ಚವಾಗುವುದು ಶತಸಿದ್ಧ.
ಈ ರೀತಿ ಮೂರು ಹೊತ್ತು ಆಹಾರದ ಲೆಕ್ಕ ಹಾಕಿ ಕೊಂಡು ಹೋದರು ಮೂರು ದಿನಕ್ಕೆ ಒಬ್ಬರ ಹೊಟೇಲ್ ರೂಂ ಖರ್ಚು- 28,800 ರೂ. ಆಗಲಿದೆ.
ಒಟ್ಟು 30 ಶಾಸಕರು ಹೋಟೆಲೊಳಗೆ ಇದ್ದಾರೆಂದು ನಿರೀಕ್ಷಿಸಲಾಗಿದ್ದು, ಮೂರು ದಿನಕ್ಕೆ8 ಲಕ್ಷ 64ಸಾವಿರ ರೋಜ್ ಆಗಲಿದೆ. ಒಬ್ಬರ ಕಾಫಿ ತಿಂಡಿ,ಊಟದ ಖರ್ಚು ಕನಿಷ್ಠ 11,700 ರೂ. ಅಂತ ಹಿಡಿದರು ಈ ಲೆಕ್ಕ ಸಿಗುತ್ತಿದೆ.
ಇಷ್ಟಕ್ಕೆ ಮುಗಿಯಲ್ಲ
ಶಾಸಕರ ವಾಸ್ತವ್ಯದ ವೆಚ್ಚ ಇಷ್ಟಕ್ಕೆ ನಿಲ್ಲುವುದಿಲ್ಲ ಕೇವಲ ಒಂದು ಹೊತ್ತು ಕಾಫಿ ತಿಂಡಿ ಊಟ ಸೇರಿದರೆ ಮಾತನಾಡುವ ಸಂದರ್ಭದಲ್ಲಿ, ಹೋಟೆಲ್ ನಲ್ಲಿ ತಂಗಿರುವ ಶಾಸಕರ ಬೇಡಿಕೆ ಹಾಗೂ ಆಶಯಗಳು ಅಷ್ಟಕ್ಕೇ ನಿಲ್ಲುವುದಿಲ್ಲ. ಇದರಿಂದಾಗಿ ಖರ್ಚಿನ ಬಾಬ್ತು ಕೋಟಿ ಮೀರಿದರು ಅಚ್ಚರಿಯಿಲ್ಲ.

Conclusion:news
Last Updated : Jul 13, 2019, 8:36 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.