ಕೊರೊನಾ ಬರಲಿ ಅಂತ ಅವರು ಪಾದಯಾತ್ರೆ ನಡೆಸಿದರು: ಸಚಿವ ಬಿ.ಸಿ.ಪಾಟೀಲ್ ಆರೋಪ

author img

By

Published : Jan 13, 2022, 6:25 PM IST

ಸಚಿವ ಬಿ.ಸಿ.ಪಾಟೀಲ್

ಕಾಂಗ್ರೆಸ್‌ನವರು ಕಳಸಾಬಂಡೂರಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?. ಸೋನಿಯಾ ಗಾಂಧಿ ಒಂದು ಹನಿ ನೀರು ಕೊಡಲ್ಲ ಅಂತ ಗೋವಾದಲ್ಲಿ ಹೇಳಿದ್ದರು. ಡಿಕೆಶಿ ಈಗ ಎಚ್ಚೆತ್ತುಕೊಂಡಿದ್ದಾರೆ. ರಾಜಕೀಯಕ್ಕಾಗಿ ಸಿದ್ದರಾಮಯ್ಯ ಮುಂದೆ ಡಿಕೆಶಿ ಬಲ ತೋರಿಸಲು ಪಾದಯಾತ್ರೆ ಮಾಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರು: ನೀರಾವರಿಗಿಂತ ಕೊರೊನಾ ಬರಲಿ ಅಂತ ಅವರು ಕಾಂಗ್ರೆಸ್ಸಿಗರು ಪಾದಯಾತ್ರೆ ನಡೆಸಿದ್ದರು. ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಮಾತು ಕಾಂಗ್ರೆಸ್‌ ನದ್ದಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ. ಜನರ ಜೀವನದ ಮೇಲೆ ಕಾಂಗ್ರೆಸ್ ಆಟ ಆಡುತ್ತಿದೆ. ಹೈಕಮಾಂಡ್ ಹೇಳಿತು ಅಂತ ಪಾದಾಯಾತ್ರೆ ಮಾಡಿದ್ದರು. ಕೊರೊನಾವನ್ನು ಅವರ ಹೈಕಮಾಂಡ್ ತಡೆಯುತ್ತಾ?. ಇದೆಲ್ಲ ಕಾಂಗ್ರೆಸ್ ಡ್ರಾಮಾ ಎಂದು ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಿಗೆ ಜನರ ಬಗ್ಗೆ ಕಾಳಜಿ ಇದೆ ಅನ್ನೋ ಕಾರಣಕ್ಕೆ ಸುಮ್ಮನಿದ್ವಿ. ಎಲ್ಲದಕ್ಕೂ ಒಂದು ವಿಧಿ ಇರುತ್ತೆ. ಸಾಮ, ಭೇದ,‌ ದಂಡ ಅಂತ. ಅವರೇ ಅರ್ಥ ಮಾಡಿಕೊಂಡು ಕೈಬಿಡಬೇಕಿತ್ತು. ಈಗ ಹೈಕಮಾಂಡ್ ಹೇಳಿತು ಅನ್ನೋ ಕಾರಣಕ್ಕೆ ಪಾದಯಾತ್ರೆ ಕೈಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಬಿ.ಸಿ.ಪಾಟೀಲ್

ಕಾಂಗ್ರೆಸ್‌ನವರು ಕಳಸಾಬಂಡೂರಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?. ಹಿಂದೆ ಕಾಂಗ್ರೆಸ್​ ಅಧ್ಯಕ್ಷ ಸೋನಿಯಾ ಗಾಂಧಿ ಒಂದು ಹನಿ ನೀರು ಸಹ ಕೊಡಲ್ಲ ಅಂತ ಗೋವಾದಲ್ಲಿ ಹೇಳಿದ್ದರು. ಡಿಕೆಶಿ ಈಗ ಎಚ್ಚೆತ್ತುಕೊಂಡಿದ್ದಾರೆ. ರಾಜಕೀಯಕ್ಕಾಗಿ ಸಿದ್ದರಾಮಯ್ಯ ಮುಂದೆ ಡಿಕೆಶಿ ಬಲ ತೋರಿಸಲು ಪಾದಯಾತ್ರೆ ಮಾಡಿದರು ಎಂದು ಆರೋಪಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ.. ಅಂದಿನಿಂದ ಇಂದಿನವರೆಗೆ ಏನೆಲ್ಲಾ ಬೆಳವಣಿಗೆ..!

642 ಕೋಟಿ ರಾಜ್ಯಕ್ಕೆ ಮಂಜೂರು..

ರೈತರ ಹಬ್ಬ ಸಂಕ್ರಾಂತಿ ಹಿನ್ನೆಲೆಯಲ್ಲಿ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 642 ಕೋಟಿ ರಾಜ್ಯಕ್ಕೆ ಮಂಜೂರಾಗಿದೆ ಎಂದ ಅವರು, 5 ವರ್ಷಗಳಲ್ಲಿ 57 ತಾಲೂಕುಗಳಲ್ಲಿ 57 ಜಲಾನಯನ ಉಪಚರಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆ ಕೇಂದ್ರ ಮತ್ತು ರಾಜ್ಯದ 60:40 ಯೋಜನೆಯಾಗಿದೆ. ಪ್ರತಿ ಹೆಕ್ಟೇರ್ ಜಲಾನಯನ ಉಪಚಾರಕ್ಕೆ 22 ಸಾವಿರ ಮತ್ತು ಗುಡ್ಡಗಾಡು ಪ್ರದೇಶದಲ್ಲಿ 28 ಸಾವಿರ ನೀಡಲಾಗುವುದು. ರಾಜ್ಯದ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅನುಮೋದನೆ ಸಿಕ್ಕಿದೆ. ಅನೇಕ ಕಡೆ ಸದಸ್ಯತ್ವ ನೀಡಿ ಉತ್ತೇಜನ ನೀಡಲಾಗುವುದು ಎಂದು ವಿವರಿಸಿದರು.

ವಿಶ್ವಬ್ಯಾಂಕ್ ನೆರವಿನಿಂದ REWARD ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಕರ್ನಾಟಕವನ್ನು ಬೇರೆ ರಾಜ್ಯಗಳಿಗೆ ತಾಂತ್ರಿಕ ಸಹಯೋಗ ನೀಡಲು ವಿಶ್ವ ಬ್ಯಾಂಕ್ ಗುರುತಿಸಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜ್ಯದ ಕೃಷಿ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿ ಮೂಲಕ ಜಲಾನಯನ ಅಭಿವೃದ್ಧಿಗಾಗಿ ರಾಜ್ಯದ ಹೊಸ ರಿವಾರ್ಡ್ ಯೋಜನೆಗೆ 600 ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ 5 ವರ್ಷದಲ್ಲಿ 21 ಜಿಲ್ಲೆಗಳಲ್ಲಿ ಯೋಜನೆ ಜಾರಿ ಆಗಲಿದೆ. ಯೋಜನೆಯ ಶೇ.30ರಷ್ಟನ್ನು ರಾಜ್ಯ ಸರ್ಕಾರ, ಶೇ.70 ರಷ್ಟು ಖರ್ಚನ್ನು ವಿಶ್ವ ಬ್ಯಾಂಕ್ ಭರಿಸಲಿದೆ ಎಂದು ಮಾಹಿತಿ ನೀಡಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.