ETV Bharat / state

ತಾಜ್​​ ಹೋಟೆಲ್​​​ನಲ್ಲಿ ಕಾಂಗ್ರೆಸ್​​ ನಾಯಕರ ಸಭೆ: ಹಲವು ಶಾಸಕರು ಗೈರು!

author img

By

Published : Jul 15, 2019, 7:34 PM IST

ತಾಜ್​ವಿವಾಂತ ಹೋಟೆಲ್​​ನಲ್ಲಿ ಸಿಎಲ್​​​​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರೆಸಾರ್ಟ್ ಬದಲಿಸುವ ಬಗ್ಗೆ ಹಾಗೂ ಶಾಸಕರ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುತ್ತಿದೆ.

ತಾಜ್​​ ವಿವಾಂತ ಹೋಟೆಲ್

ಬೆಂಗಳೂರು: ಕಾಂಗ್ರೆಸ್​​ ಶಾಸಕರು ತಂಗಿರುವ ತಾಜ್​​ ವಿವಾಂತ ಹೋಟೆಲ್​​ ನಗರದ ಒಳಗಡೆ ಇರುವ ಕಾರಣ ಸಮಸ್ಯೆ ಆಗ್ತಿದ್ದು, ಎಲ್ಲರೂ ಸುಲಭವಾಗಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಹಾಗಾಗಿ ರೆಸಾರ್ಟ್​ ಬದಲಿಸುವ ಬಗ್ಗೆ ಕಾಂಗ್ರೆಸ್​ ಮುಖಂಡರು ಹೋಟೆಲ್​​ನಲ್ಲಿ ಸಭೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೇ ಶಾಸಕರು ಕೂಡ ಮನೆ ಹತ್ತಿರ ಇದೆ ಎಂದು ಮನೆಗೆ ಹೋಗುತ್ತಾರೆ. ಇದರಿಂದ ಶಾಸಕರ ಒಗ್ಗಟ್ಟಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಹೋಟೆಲ್​ನಲ್ಲೇ ಇರೋದಾ ಅಥವಾ ಬೇರೆಡೆಗೆ ಹೋಗೋದಾ ಎಂದು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ತಾಜ್​​ ವಿವಾಂತ ಹೋಟೆಲ್

ಈ ಸಭೆಗೆ ಸಿಎಲ್​​​​ಪಿ ನಾಯಕ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್, ಐವನ್ ಡಿಸೋಜ, ದಿನೇಶ್ ಗುಂಡೂರಾವ್, ಜಯಮಾಲಾ ಆಗಮಿಸಿದ್ದಾರೆ. ಇನ್ನು ಸಭೆಗೆ ಕೆಲವೇ ಕೈ ಶಾಸಕರು ಆಗಮಿಸಿದ್ದು, ಶಾಸಕರಿಂದ ಸಿಎಲ್​​​​ಪಿ ಮುಖಂಡ ಸಿದ್ದರಾಮಯ್ಯ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಗುರುವಾರದವರೆಗೆ ಕಾಂಗ್ರೆಸ್ ಶಾಸಕರ ಒಗ್ಗಟ್ಟು ಕಾಪಾಡಬೇಕಾದ ಹಿನ್ನಲೆ ಅಲ್ಲಿತನಕ ರೆಸಾರ್ಟ್ ವಾಸ ಪಕ್ಕಾ ಎನ್ನಲಾಗ್ತಿದೆ.

Intro:kn_bng_03_taj_evening_meeting_7202707


Body:kn_bng_03_taj_evening_meeting_7202707


Conclusion:kn_bng_03_taj_evening_meeting_7202707

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.