ETV Bharat / state

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ : ಸಿದ್ದರಾಮಯ್ಯ ಮೊದಲ ರಿಯಾಕ್ಷನ್

author img

By

Published : Sep 6, 2021, 5:18 PM IST

ಕಟೀಲ್ ಎಷ್ಟು ಬಾರಿ ಪ್ರಚಾರಕ್ಕೆ ಹೋಗಿದ್ದಾರೆ. ಅವರೇ ಪ್ರಚಾರಕ್ಕೆ ಹೋಗದೆ ಬೇರೆಯವರ ಮೇಲೆ ಆರೋಪ ಮಾಡ್ತಾರೆ. ಸಿಎಂ ಹುಬ್ಬಳ್ಳಿಯವರಿದ್ರೂ ಅಲ್ಲಿ ಗೆಲ್ಲೋಕೆ ಆಗಿಲ್ಲ. ಐದು ಜನ ಬಿಜೆಪಿ ಶಾಸಕರು ಅಲ್ಲಿದ್ದಾರೆ.ಹಾಗಿದ್ರೂ ಸೋಲು ಯಾಕಾಯಿತು ಅಂತಾ ತಿಳಿದುಕೊಂಡು ಮಾತನಾಡಲಿ. ಈ ಚುನಾವಣೆಯಲ್ಲಿ ಲೋಕಲ್ ವಿಚಾರವಾಗಿ ನಡೆದಿದೆ. ರಾಜ್ಯದ, ರಾಷ್ಟ್ರೀಯ ಸಮಸ್ಯೆ ಅಲ್ಲಿ ವರ್ಕೌಟ್ ಆಗಲ್ಲ. ಅಭ್ಯರ್ಥಿ ಹಿಡಿತ ಚೆನ್ನಾಗಿದ್ರೆ ಅಂತವರು ಗೆಲ್ತಾರೆ. ಅದು ಬಿಟ್ಟು ದೇಶದ ಸಮಸ್ಯೆ ‌ನೋಡಿ ಮತ ಹಾಕಿಲ್ಲ ..

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು : ಮೂರು ಕಾರ್ಪೊರೇಷನ್ ಸೇರಿದಂತೆ ಹಲವು ಕಡೆ ಚುನಾವಣೆ ನಡೆದಿದೆ. ಕಾಂಗ್ರೆಸ್ ಹಲವು ಕಡೆ ಗೆದ್ದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಬೆಳಗಾವಿಯಲ್ಲಿ ಬಿಜೆಪಿ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಅಂದುಕೊಂಡಿದ್ದೆವು. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಪರಿಸ್ಥಿತಿ ಇದೆ. ಕಲಬುರಗಿಯಲ್ಲಿಯೂ ಸಹ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ ಎಂದರು.

ತರೀಕೆರೆಯಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿಯೂ ಅತಂತ್ರ ಪರಿಸ್ಥಿತಿ ಇದೆ. ಮೈಸೂರು ಪಾಲಿಕೆ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲಿ ಮೊದಲು ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು ಎಂದರು.

ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರು ಇದ್ದಾರೆ. ಮೂರು ಜನ ಬಿಜೆಪಿ ಶಾಸಕರಿದ್ದಾರೆ, ನಮ್ಮ ಶಾಸಕರಿಲ್ಲ. ರಾಜ್ಯದಲ್ಲಿಯೂ ಅವರದೇ ಸರ್ಕಾರ ಇದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳು ಅವರಿಗೆ ಇದೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಇದೆ.

ಕಲಬುರಗಿಯಲ್ಲಿ ನಮ್ಮವರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ಎಸ್ಪಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ನಮ್ಮ ಶಾಸಕರ ಸಂಬಂಧಿಯನ್ನ ಹೊಡೆದಿದ್ರು. ಇದು ಡಿಜಿವರೆಗೂ ದೂರು ಬಂದಿದೆ ಎಂದರು.

ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಬೆಳಗಾವಿಯಲ್ಲಿ ನಾವು ಮೊದಲೇ ನಿರೀಕ್ಷೆ ಮಾಡಿದ್ವಿ. ಮತದಾರರ ತೀರ್ಪು ನಾವು ಒಪ್ಪಿಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿ ಮೇಲೆ ಚುನಾವಣೆ ನಡೆಯುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ, ವೈಫಲ್ಯಗಳ ಮೇಲೆ ನಡೆಯುವುದಿಲ್ಲ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆ.

ಹುಬ್ಬಳ್ಳಿ-ಧಾರವಾಡದಲ್ಲಿ 15 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಮುಂದಿನ ಚುನಾವಣೆಗಳಿಗೆ ಇದು ದಿಕ್ಸೂಚಿ ಅಲ್ಲ. ಮುಂದೆ ಬರುತ್ತಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಲಬುರಗಿಯಲ್ಲಿ ಪಕ್ಷೇತರರು ಮತ್ತು ಜೆಡಿಎಸ್ ಜತೆ ಹೊಂದಾಣಿಕೆ ಕುರಿತು ಖರ್ಗೆ ಅವರ ಜತೆ ಚರ್ಚೆ ಮಾಡಿ ಅಂತಿಮ ಮಾಡ್ತೀವಿ. ನಾನು ಈಗಲೇ ಈ ಬಗ್ಗೆ ಮಾತನಾಡಲ್ಲ ಎಂದರು.

ಕಟೀಲ್ ಗೆ ಪೊಲಿಟಿಕಲ್ ಮೆಚ್ಯುರಿಟಿ ಇಲ್ಲ. ಅವರ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ. ಸ್ಥಳೀಯ ಚುನಾವಣೆಗ ಅಭ್ಯರ್ಥಿ ಮೇಲೆ ನಡೆಯುತ್ತೆ. ಅವನು ಜನ ಸಂಪರ್ಕ ಹೊಂದಿದ್ರೆ ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳು ಲೆಕ್ಕಕ್ಕೆ ಬರಲ್ಲ. ಹೀಗಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿ ಮೇಲೆ ಫಲಿತಾಂಶ ನಿರ್ಧಾರ ಆಗುತ್ತೆ.

ಬೆಳಗಾವಿಯಲ್ಲಿ ‌ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ನಾವು ಇನ್ನಷ್ಟು ಸೀಟ್ ಬರುತ್ತೆ ಅಂತಾ ಇತ್ತು. ಪಕ್ಷೇತರರು ಇನ್ನಷ್ಟು ಗೆಲ್ತಾರೆ ಅಂತಾ ನೀರಿಕ್ಷೆ ಇತ್ತು. ಆದ್ರೆ, ಬಿಜೆಪಿಯವರು ಗೆದ್ದಿದ್ದಾರೆ ಎಂದರು. ಕಟೀಲ್ ಗೆ ರಾಜಕೀಯ ಪ್ರಜ್ಞೆ ಇಲ್ಲ. ಪೊಲಿಟಿಕಲ್ ವಿಚಾರವಾಗಿ ಕೊಡುವ ಎಲ್ಲ ಪ್ರಶ್ನೆಗೆ ಉತ್ತರ ಕೊಡೋಕೆ ಆಗಲ್ಲ.

ಕಟೀಲ್ ಎಷ್ಟು ಬಾರಿ ಪ್ರಚಾರಕ್ಕೆ ಹೋಗಿದ್ದಾರೆ. ಅವರೇ ಪ್ರಚಾರಕ್ಕೆ ಹೋಗದೆ ಬೇರೆಯವರ ಮೇಲೆ ಆರೋಪ ಮಾಡ್ತಾರೆ. ಸಿಎಂ ಹುಬ್ಬಳ್ಳಿಯವರಿದ್ರೂ ಅಲ್ಲಿ ಗೆಲ್ಲೋಕೆ ಆಗಿಲ್ಲ. ಐದು ಜನ ಬಿಜೆಪಿ ಶಾಸಕರು ಅಲ್ಲಿದ್ದಾರೆ.

ಹಾಗಿದ್ರೂ ಸೋಲು ಯಾಕಾಯಿತು ಅಂತಾ ತಿಳಿದುಕೊಂಡು ಮಾತನಾಡಲಿ. ಈ ಚುನಾವಣೆಯಲ್ಲಿ ಲೋಕಲ್ ವಿಚಾರವಾಗಿ ನಡೆದಿದೆ. ರಾಜ್ಯದ, ರಾಷ್ಟ್ರೀಯ ಸಮಸ್ಯೆ ಅಲ್ಲಿ ವರ್ಕೌಟ್ ಆಗಲ್ಲ. ಅಭ್ಯರ್ಥಿ ಹಿಡಿತ ಚೆನ್ನಾಗಿದ್ರೆ ಅಂತವರು ಗೆಲ್ತಾರೆ. ಅದು ಬಿಟ್ಟು ದೇಶದ ಸಮಸ್ಯೆ ‌ನೋಡಿ ಮತ ಹಾಕಿಲ್ಲ ಎಂದರು.

ಇದೇ ಸಂದರ್ಭ ದೂರವಾಣಿ ಮೂಲಕ ದೊಡ್ಡಬಳ್ಳಾಪುರ ಶಾಸಕ ವೆಂಕಟರವಣಪ್ಪಗೆ ಕರೆ ಮಾಡಿದ ಸಿದ್ದರಾಮಯ್ಯ, ಕಡಿಮೆ ಯಾಕೆ ಬಂತು. ಬಿಜೆಪಿ ಹೇಗೆ ಜಾಸ್ತಿ ಬಂತು ಎಂದು ಕೇಳಿದರು.

ಇದನ್ನೂ ಓದಿ : ಬಿಜೆಪಿಗೆ ಸಿಹಿ.. ಎಂಇಎಸ್​ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.