ETV Bharat / state

ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾದ 'ಇಡಿ': ದಿನೇಶ್ ಗುಂಡೂರಾವ್ ಟ್ವೀಟ್​​

author img

By

Published : Jun 12, 2022, 4:22 PM IST

Updated : Jun 12, 2022, 5:05 PM IST

ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ಇಡಿಗೆ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ. ಆಳುವ ಸರ್ಕಾರವೊಂದು‌ ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ‌ ಉದಾಹರಣೆ ಇತಿಹಾಸದಲ್ಲೇ ಇಲ್ಲ ಎಂದು ದಿನೇಶ್ ಗುಂಡೂರಾವ್ ಟ್ವೀಟ್​ ಮಾಡಿದ್ದಾರೆ.

dinesh-gundu-rao-tweeted-against-ed-for-summoning-sonia-gandhi
ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾದ 'ಇಡಿ': ದಿನೇಶ್ ಗುಂಡೂರಾವ್ ಟ್ವೀಟ್​​

ಬೆಂಗಳೂರು: ರಾಜಕೀಯ ಎದುರಾಳಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಸರ್ಕಾರವು ಇಡಿ ಮತ್ತು ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಡಿಗೆ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

  • 1
    ರಾಜಕೀಯ ಎದುರಾಳಿಗಳನ್ನು ಸೈದಾಂತಿಕವಾಗಿ ಎದುರಿಸಲಾಗದ BJP, ED ಮತ್ತು CBI ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ.
    ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ED ಸಮನ್ಸ್ ನೀಡಿರುವುದು BJPಯ ಕುತಂತ್ರದ ಭಾಗ. ED&CBI ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು.
    ಆದರೆ ಈ ಸಂಸ್ಥೆಗಳು BJPಯ ಅಂಗಸಂಸ್ಥೆಯಾಗಿವೆ.

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 12, 2022 " class="align-text-top noRightClick twitterSection" data=" ">

ಕಾಂಗ್ರೆಸ್​​ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಇಡಿ ಸಮನ್ಸ್ ನೀಡಿರುವುದು ಬಿಜೆಪಿಯ ಕುತಂತ್ರದ ಭಾಗ. ಇಡಿ ಹಾಗೂ ಸಿಬಿಐ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಆದರೆ, ಈ ಸಂಸ್ಥೆಗಳು ಬಿಜೆಪಿಯ ಅಂಗಸಂಸ್ಥೆಯಾಗಿವೆ ಎಂದು ಅವರು ಟ್ವೀಟ್ ಮೂಲಕ ಆರೋಪಿಸಿದ್ದಾರೆ.

  • 2
    ಮೋದಿಯವರು ಪ್ರಧಾನಿಯಾದ ಬಳಿಕ‌ ಕೇವಲ ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ED,CBI ಮತ್ತು IT ದಾಳಿ ನಡೆದಿದೆ.
    ಆದರೆ @BJP4India ಯ ಒಬ್ಬರೇ ಒಬ್ಬರ ಮೇಲೆ ದಾಳಿ ನಡೆದಿಲ್ಲ.
    ಹಾಗಾದರೆ BJPಯವರೇನು ಸಚ್ಛಾರಿತ್ರ್ಯರೆ?
    ಸದ್ಗುಣ ಸಂಪನ್ನರೆ?
    EDಯವರ ಪ್ರಕಾರ ಆಪರೇಷನ್ ಕಮಲದಲ್ಲಿ ಕೈ ಬದಲಾದ ಸಾವಿರಾರು ಕೋಟಿ ಹಣ ಅಕ್ರಮ ಸಂಪತ್ತಲ್ಲವೆ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 12, 2022 " class="align-text-top noRightClick twitterSection" data=" ">

ಮೋದಿಯವರು ಪ್ರಧಾನಿಯಾದ ಬಳಿಕ‌ ಕೇವಲ ಪ್ರತಿ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಇಡಿ, ಸಿಬಿಐ ಹಾಗೂ ಐಟಿ ದಾಳಿ ನಡೆದಿದೆ. ಆದರೆ, ರಾಷ್ಟ್ರೀಯ ಬಿಜೆಪಿಯ ಒಬ್ಬರೇ ಒಬ್ಬರ ಮೇಲೂ ದಾಳಿ ನಡೆದಿಲ್ಲ. ಹಾಗಾದರೆ ಬಿಜೆಪಿಯವರೇನು ಸಚ್ಚಾರಿತ್ರ್ಯರೇ? ಸದ್ಗುಣ ಸಂಪನ್ನರೇ?. ಇಡಿಯವರ ಪ್ರಕಾರ ಆಪರೇಷನ್ ಕಮಲದಲ್ಲಿ ಕೈ ಬದಲಾದ ಸಾವಿರಾರು ಕೋಟಿ ಹಣ ಅಕ್ರಮ ಸಂಪತ್ತಲ್ಲವೇ ಎಂದೂ ಪ್ರಶ್ನಿಸಿದ್ದಾರೆ.

  • 3
    ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ED ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ.
    ಆಳುವ ಸರ್ಕಾರವೊಂದು‌ ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ‌ ಉದಾಹರಣೆ ಇತಿಹಾಸದಲ್ಲೇ ಇಲ್ಲ.
    BJPಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕಿದೆ.

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 12, 2022 " class="align-text-top noRightClick twitterSection" data=" ">

ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ಇಡಿಗೆ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ. ಆಳುವ ಸರ್ಕಾರವೊಂದು‌ ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ‌ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಬಿಜೆಪಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕಿದೆ ಎಂದು ಟ್ವೀಟ್​ನಲ್ಲಿ ದಿನೇಶ್​ ಗುಂಡೂರಾವ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

Last Updated : Jun 12, 2022, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.