ETV Bharat / state

'ಮೋದಿ ವಿಷ ಸರ್ಪ..' ಖರ್ಗೆ ಹೇಳಿಕೆ ಬಗ್ಗೆ ಬಿ ಕೆ ಹರಿಪ್ರಸಾದ್ ಹೀಗಂದ್ರು!

author img

By

Published : Apr 28, 2023, 1:18 PM IST

Updated : Apr 28, 2023, 1:28 PM IST

ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

hariprasad
ಬಿ ಕೆ ಹರಿಪ್ರಸಾದ್

ಬೆಂಗಳೂರು: ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಬಿಜೆಪಿಯ ಹುಟ್ಟು ಗುಣವೇ ವಿಷಕಾರುವುದು ಎಂದು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ, ಯತ್ನಾಳ್, ಅಥವಾ ಮೋದಿಯೇ ಆಗಲಿ, ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಹಳ್ಳಿ ಭಾಷೆಯಲ್ಲಿ ಖರ್ಗೆ ಹೇಳಿದ್ದಾರಷ್ಟೇ. ಇವರು ಕರ್ನಾಟಕದಲ್ಲಿ ದೊಂಬಿ ಗಲಾಟೆ ಮಾಡಿ ಚುನಾವಣೆ ಗೆಲ್ಲಲು ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ನಾಯಕರು ಪ್ರಚಾರದಲ್ಲಿ ವಿಷ ಕಾರ್ತಾರೆ. ಅದೇ ಅರ್ಥದಲ್ಲಿ ಖರ್ಗೆ ಹೇಳಿದ್ದು. ಸಿ.ಟಿ.ರವಿ, ಈಶ್ವರಪ್ಪ, ಯತ್ನಾಳ್​ ಅವರು ತಮ್ಮ ಭಾಷಣದಲ್ಲಿ ವಿಷ ಕಾರ್ತಾರೆ. ಅದನ್ನು ಹಳ್ಳಿ ಮಾತಿನಲ್ಲಿ ಖರ್ಗೆ ಅವರು ಹೇಳಿದ್ದಾರಷ್ಟೇ. ಗೃಹ ಸಚಿವರು ಹೇಳಿದ್ರು, ಕಾಂಗ್ರೆಸ್ ಬಂದ್ರೆ ದೊಂಬಿ ಆಗುತ್ತೆ ಅಂತ. ಒಬ್ಬ ಗೃಹ ಸಚಿವರು ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು. ಬಳಿಕ ಯತ್ನಾಳ್ ಅಂತಹವರಿಗೆ ಬಿಜೆಪಿಯವರು ತರಬೇತಿ ಕೊಟ್ಟಿರೋದೇ ಹಾಗೆ. ಅವರವರ ಭಾಷೆ ಅವರವರಿಗೆ. ಹೀಗಿರುವಾಗ ಅದಕ್ಕೆ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಯುಪಿ ಮಾಡೆಲ್ ನಮಗೆ ಬೇಕಾಗಿಲ್ಲ: ಯೋಗಿ ಆದಿತ್ಯನಾಥ್ ಮೇಲೆ 27 ಗಂಭೀರ ಕೇಸ್ ಇತ್ತು. ಇವರ ರೋಲ್ ಮಾಡೆಲ್ ನಮಗೆ ಬೇಕಾಗಿಲ್ಲ. ಯುಪಿ ಮಾಡೆಲ್ ಮಾಡೋದು ನಮಗೆ ಅಗತ್ಯವಿಲ್ಲ. ನಮ್ಮ ಮಾಡೆಲ್ ಬೇಕಿದ್ದರೆ ಅವರು ಮಾಡಿಕೊಳ್ಳಲಿ. ಬಿಜೆಪಿಯವರದ್ದು ದಿವಾಳಿತನದ ಪರಮಾವಧಿ. ಅವರ ಸರ್ಕಾರ ಬಂದ ಮೇಲೆ ಕೇಸ್ ವಾಪಸ್​ ಪಡೆದಿದೆ. ಇದು ಬಸವಣ್ಣ, ಕನಕ, ದಾಸರ ನಾಡಿದು. ಇಲ್ಲಿ ಉತ್ತರ ಪ್ರದೇಶ ಮಾಡೆಲ್ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್​ ಪಟ್ಟಣದಲ್ಲಿ ನಡೆದ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ಪ್ರಧಾನಿ ಮೋದಿ ವಿಷಕಾರಿ ಹಾವು ಇದ್ದಂತೆ. ಅದು ವಿಷವೋ, ಅಲ್ಲವೋ ಎಂಬುದನ್ನು ನೀವೂ ಯೋಚನೆ ಮಾಡಬೇಕು. ಅದನ್ನು ನೆಕ್ಕಿದರೆ ನೀವು ಸತ್ತಂತೆ ಎಂದು ಹೇಳಿದ್ದರು.

ಅಲ್ಲದೇ ಮೋದಿ ದೊಡ್ಡ ಸುಳ್ಳುಗಾರ. ಕೆಲವರು ಮೋದಿ ಮೋದಿ ಅಂತಾರೆ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಹೇಳಿ? ರಾಜ್ಯದಲ್ಲಿ ಈಗಿರುವುದು 40% ಕಮಿಷನ್​ ಸರ್ಕಾರ, ಇವರಿಗೆ ಪಾಠ ಕಲಿಸಬೇಕು. ಮನ್​ ಕಿ ಬಾತ್​, ಘರ್​ ಕಿ ಬಾತ್​ನಲ್ಲಿ ಹೆಣ್ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಆದರೆ ಲಂಚ ತೆಗೆದುಕೊಳ್ಳುವವರ ಬಗ್ಗೆ ಮಾತನಾಡಲ್ಲ. ರಾಜ್ಯದಲ್ಲಿ ಇಷ್ಟೊಂದು ಲಂಚ ಹೊಡೆಯುತ್ತಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರಿಗೆ ಪ್ರಧಾನಿಗೆ ಬರವಣಿಗೆ ಮೂಲಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

Last Updated : Apr 28, 2023, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.