ETV Bharat / state

ಬಿಜೆಪಿಯವರು ಮಾಡ್ತಿರೋ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ: ಸಿದ್ದರಾಮಯ್ಯ

author img

By

Published : Nov 19, 2022, 4:57 PM IST

Updated : Nov 19, 2022, 5:32 PM IST

ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪದ ಸಂಬಂಧ ಕಾಂಗ್ರೆಸ್​​​ ನಾಯಕರು ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು.

congress-complained-to-the-state-election-commission-on-voter-id-collection-allegation
ಬಿಜೆಪಿಯವರು ಮಾಡ್ತಿರೋ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ಮಾಡ್ತಿರೋ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ. ಚುನಾವಣೆ ಅಕ್ರಮ ಮಿತಿ ಮೀರಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ದೂರು ಸಲ್ಲಿಸಿ ಬಳಿಕ ಮಾತನಾಡಿದ ಅವರು, ಇಂದು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಕೃಷ್ಣಪ್ಪ ರವಿಕುಮಾರ್ ಚಿಲುಮೆ ಸಂಸ್ಥೆಯ ಮಾಲೀಕ. ಇವ್ನು ಪುಣ್ಯಾತ್ಮ ಅಲ್ಲ ದುರಾತ್ಮ. ಇವ್ನೇ ಬಿಎಲ್ ಓಗಳನ್ನು ನೇಮಕ ಮಾಡಿಬಿಟ್ಟಿದ್ದಾನೆ. ಬೇಕಾದವ್ರನ್ನು ಸೇರಿಸಿ, ಬೇಡದವ್ರನ್ನು ತೆಗೆದುಹಾಕಿದ್ದಾರೆ. ಇವೆಲ್ಲವನ್ನೂ ರದ್ದು ಮಾಡಿ. ನಕಲಿ ಬಿಎಲ್ ಓ ಗಳಿಂದಲ್ಲ, ನಿಜವಾದ ಬಿಎಲ್ ಓ ಗಳಿಂದ ಸರ್ವೇ ಮಾಡಿಸಿ ಎಂದರು.

ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ಸಿಎಂ ಹಾಗೂ ಇತರರ ಮೇಲೆ ದೂರು ಕೊಟ್ಟಿದ್ದೇವೆ. ಪರ್ಮಿಶನ್ ಕೊಟ್ಟು ಕ್ಯಾನ್ಸಲ್ ಮಾಡಿದ್ರೆ ಏನರ್ಥ? ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರೆ ಏನರ್ಥ?. ತಪ್ಪಾಗಿದೆ ಅಂತಾ ಅರ್ಥ ಅಲ್ವಾ? ಪ್ರಭಾವಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ ಯಾಕೆ..? ಖಾಸಗಿತನವನ್ನು ಕಳ್ಳತನ ಮಾಡಿರೋದು ಇದು ಎಂದು ದೂರಿದರು.

ಬಿಜೆಪಿಯವರು ಮಾಡ್ತಿರೋ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ: ಸಿದ್ದರಾಮಯ್ಯ

ಸಚಿವ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಿ : ಸಚಿವ ಅಶ್ವಥ್ ನಾರಾಯಣ್ ಅವರನ್ನು ಕೂಡಲೇ ಬಂಧನ ಮಾಡಬೇಕು. ಅವರ ಲೆಟರ್ ಹೆಡ್, ಪ್ಯಾಡ್, ನೋಟ್ ಮೆಶಿನ್ ಎಲ್ಲಾ ಸಿಕ್ಕಿದೆ. ನಮ್ಮ ಮನವಿ ಕೇಳದೇ ಇದ್ರೆ, ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ. ಕ್ರಮ ತೆಗೆದುಕೊಳ್ಳದೇ ಇದ್ರೆ ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ. ಇದು ದೊಡ್ಡ ಫ್ರಾಡ್ ಕೆಲಸ. ಇಡೀ ರಾಜ್ಯಕ್ಕೆ ಮಾಡಿರೋ ಅನ್ಯಾಯ. ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋಲುತ್ತೆ ಅಂತಾ ಗೊತ್ತಾಗಿದೆ. ದೊಡ್ಡ ಷಡ್ಯಂತ್ರ ಮಾಡ್ತಿದೆ. ಒಂದು ಸಂಸ್ಥೆಯನ್ನು ಮಾಡಿಕೊಂಡು ಎಲೆಕ್ಷನ್ ಕಮಿಶನ್ ಕೋಡ್, ಡಾಟಾ ತೆಗೆದುಕೊಂಡಿದ್ದಾರೆ. ಯಾರ ಹೆಸರು ತೆಗೆಯಬೇಕು, ಯಾರ ಹೆಸರು ಹಾಕಬೇಕು ಎಂದು ನಿರ್ಧಾರ ಮಾಡ್ತಿದ್ರು. ಇದುವರೆಗೆ 27 ಲಕ್ಷ ವೋಟರ್​ ಐಡಿ ತೆಗೆದು ಹಾಕಿದ್ದಾರೆ. ಯಾವುದೇ ಪರ್ಮಿಶನ್ ತೆಗೆದುಕೊಂಡಿಲ್ಲ. ಬಿಎಲ್ ಓ ಐಡಿ ಕಾರ್ಡ್ ಕೊಡೋ ಅಥಾರಿಟಿನೇ ಇಲ್ಲ. ಮೂರು ಜನ ಮಂತ್ರಿಗಳು, ಇಬ್ಬರು ಶಾಸಕರು ಚಿಲುಮೆ ಸಂಸ್ಥೆ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ದೂರಿದರು.

ಕ್ರಿಮಿನಲ್ ಪ್ರಿಸಿಡಿಂಗ್ಸ್ ನ ಇನಿಶಿಯೇಟ್ ಮಾಡಬೇಕು. ಎಲ್ಲಾ ಬಿಎಲ್ ಓ ಗಳ ಮೇಲೆ ಎಫ್ ಐಆರ್ ಆಗಬೇಕು ಎಂದು ಒತ್ತಾಯ ಮಾಡಿದ್ದೇವೆ. ತೆಗೆದು ಹಾಕಲಾಗಿರುವ ವೋಟರ್ ಐಡಿಗಳ ಮರು ಪರಿಶೀಲನೆ ಆಗಬೇಕು. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಮನವಿ ಮಾಡಿದ್ದೇವೆ. ಇವಿಎಂ ಮ್ಯಾನೇಜ್ ಮಾಡೋ ಪವರ್ಸ್ ಅವ್ರಿಗೆ ಕೊಟ್ಟಿದ್ರು. ನಮ್ಮ ಅವಧಿಯಲ್ಲಿ ಕೊಟ್ಟಿದ್ದಾರೆ ಅಂತಾರೆ. ನಾವು ಮರ್ಡರ್ ಮಾಡಿದ್ದೀವಿ ಅಂತಾ ನೀವು ಮಾಡ್ತೀರಾ? ಎಂದು ಪ್ರಶ್ನಿಸಿದರು.

ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಬಿಬಿಎಂಪಿ ಅನುಮತಿ ಕೊಟ್ಟಿರೋದು ಎಂದಿದ್ದಾರೆ. ಇವ್ರು ಬೆಂಗಳೂರು ಉಸ್ತುವಾರಿ ಸಚಿವರಲ್ವಾ? ಧಮ್, ತಾಕತ್ ಬಗ್ಗೆ ಮಾತಾಡ್ತಿರಲ್ವಾ? ನಿಮಗೆ ಧಮ್, ತಾಕತ್ ಇದ್ರೆ ತನಿಖೆ ಮಾಡಿಸಿ ಎಂದು ಸವಾಲೆಸೆದರು.

ಬಿಜೆಪಿಯಿಂದ ಕುತಂತ್ರ : ಬಿಜೆಪಿ ಚುನಾವಣೆ ಸೋಲಿಗೆ ದೊಡ್ಡ ಕುತಂತ್ರ ಮಾಡುತ್ತಿದೆ. ಸೋಲುವ ಕ್ಷೇತ್ರದಲ್ಲಿ ಸಂಸ್ಥೆ ಮೂಲಕ ಅಂಕಿ ಅಂಶಗಳನ್ನು ಸಂಗ್ರಹ ಮಾಡಿದ್ದಾರೆ. ಬಿಜೆಪಿ ಮಂತ್ರಿ, ಶಾಸಕರ ಕೈಯಲ್ಲಿ ಡಾಟಾ ಇದೆ. ಯಾರ ಹೆಸರು ಸೇರಿಸಬೇಕು, ಯಾರದ್ದು ಕೈ ಬಿಡಬೇಕು ಎಂದು ತೀರ್ಮಾನಿಸಿದ್ದಾರೆ. 27 ಲಕ್ಷ ಮತದಾರರನ್ನು ತೆಗೆದುಹಾಕಿದ್ದಾರೆ ಎಂದರು.

ಚುನಾವಣಾ ಆಯೋಗದ ನೇತೃತ್ವದಲ್ಲಿ ತನಿಖೆಗೆ ಆಗ್ರಹ : ಇನ್ನು ಆಯುಕ್ತರೇ ಹೇಳಿದ್ದಾರೆ. ಖಾಸಗಿ ಸಂಸ್ಥೆ ಮಾಡಲು ಬರಲ್ಲ. ಇಲ್ಲಿಯವರೆಗೆ ಯಾರನ್ನೂ ಬಂಧನ ಮಾಡಿಲ್ಲ. 3ಮಂತ್ರಿಗಳು, 2 ಶಾಸಕರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಯಾರ ಮೇಲೆ ಕೂಡ ಕ್ರಮ ಆಗಿಲ್ಲ. ನಮಗೆ ನ್ಯಾಯ ಸಿಕ್ಕಿಲ್ಲ. 28 ಎಆರ್ ಓ ಮೇಲೆ ಕ್ರಿಮಿನಲ್ ಕೇಸ್ ಆಗಬೇಕು. ಬಿಎಲ್ ಓ ಮೇಲೆ ಎಫ್ ಐ ಆರ್ ಆಗಬೇಕು.

ಚುನಾವಣೆ ಆಯೋಗದ ನೇತೃತ್ವದಲ್ಲಿ 7 ಲಕ್ಷ ಮತದಾರ ರೀ ಎಕ್ಸಾಮಿನ್ ಆಗಬೇಕು. ಚೀಫ್ ಜಸ್ಟಿಸ್ ನೇತೃತ್ವದಲ್ಲಿ ತನಿಖೆ ಆಗಬೇಕು. ಕೂಡಲೇ ಪ್ರಕರಣದ ತನಿಖೆಯಾಗಲಿ. ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ : ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ.. ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು

Last Updated : Nov 19, 2022, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.