ETV Bharat / state

ಎಲ್ಲರಿಗೂ 200 ಯೂನಿಟ್​ ಫ್ರೀ ವಿದ್ಯುತ್​​​ .. ಗೃಹ ಲಕ್ಷ್ಮಿ ಆಗಸ್ಟ್​ 15ರಿಂದ ಜಾರಿ.. ಮಹಿಳೆಯರಿಗೆ ಜೂನ್​ 11 ರಿಂದ ಬಸ್​​ ಫ್ರೀ!

author img

By

Published : Jun 2, 2023, 2:44 PM IST

Updated : Jun 2, 2023, 7:48 PM IST

ಕಾಂಗ್ರೆಸ್​​ನ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಮೊದಲನೇ ಗ್ಯಾರಂಟಿ ಗೃಹ ಜ್ಯೋತಿ ನೀಡಿದ್ದೆವು. ಎಲ್ಲರಿಗೂ 200 ಯೂನಿಟ್​ ವರೆಗೂ ಫ್ರೀ ವಿದ್ಯುತ್​​ ವಾಗ್ದಾನ ಮಾಡಿದ್ದೇವೆ. ಪ್ರತಿ ವರ್ಷ ಅಂದರೆ 12 ತಿಂಗಳ ಸರಾಸರಿ ಆಧಾರದ ಮೇಲೆ ಆ ಮನೆಗೆ ಫ್ರೀ ವಿದ್ಯುತ್​​ ನಿರ್ಧಾರ.. ನೀವು ಸರಾಸರಿ 70 ಯೂನಿಟ್ ವಿದ್ಯುತ್​​ ಬಳಸಿದ್ದರೆ, ಅಥವಾ ಒಬ್ಬ 199 ಯೂನಿಟ್​​​ ಖರ್ಚು ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಆಧಾರದ ಮೇಲೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್​​​​​ ವರೆಗೂ ಆತನಿಗೆ ಫ್ರೀ ವಿದ್ಯುತ್​​ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.​​​​ ಆಗಸ್ಟ್​ ನಿಂದ ಯೋಜನೆ ಜಾರಿ.. ಈ ಹಿಂದಿನ ಬಾಕಿಯನ್ನು ಗ್ರಾಹಕರೇ ತುಂಬಬೇಕು. ಆಗಸ್ಟ್​ನಿಂದ ಸರ್ಕಾರದ ಯೋಜನೆ ಅನ್ವಯ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Chief Minister Siddaramaiah meeting with senior officials
ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಿಎಂ ಮಾಹಿತಿ

ಬೆಂಗಳೂರು: ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು. ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಸಿದ ನಂತರ ಸಿದ್ದರಾಮಯ್ಯ ಸುದ್ದಿಗೋಷ್ಠಿ ಕರೆದು ಎಲ್ಲ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.

ಕಾಂಗ್ರೆಸ್ ಪಕ್ಷ ಚುನಾವಣಾ ಹೊತ್ತಿನಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ನೀಡುವ ಗೃಹ ಲಕ್ಷ್ಮೀ ಯೋಜನೆ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ, ಪ್ರತಿಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಅಡಿ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆ ಎಲ್ಲ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಸಿಎಂ ಹಾಗೂ ಸಚಿವರು ಸಭೆ ನಡೆಸಿದ್ದು, ಇಂದು ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

ನಾವು ಏನ್​ ಮಾತನಾಡಿದ್ದೇವೆ ಆ ಮಾತಿಗೆ ಬದ್ಧವಾಗಿದ್ಧೇವೆ ಎಂದು ಡಿಸಿಎಂ ಶಿವಕುಮಾರ್​ ಸುದ್ದಿಗೋಷ್ಠಿ ಉದ್ದೇಶಿಸಿಸಿ ಮಾತನಾಡಿದರು. ನಾವು ಜನರ ಹೃದಯಕ್ಕೆ ಹತ್ತಿರವಾಗಿರುವ ನಿರ್ಧಾರ ಕೈಗೊಂಡಿದ್ದೇವೆ. ಮುಖ್ಯಮಂತ್ರಿಗಳು ಅದನ್ನ ತಿಳಿಸುತ್ತಾರೆ ಎಂದು ಡಿಕೆಶಿ ಹೇಳಿದರು.

  • ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನತೆಗೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಮೂಲಕ "ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ" ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ.

    ಬೆಲೆಯೇರಿಕೆ, ನಿರುದ್ಯೋಗ, ಹಸಿವು, ಬಡತನಗಳಿಂದ ನೊಂದು ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರ ಬದುಕಿಗೆ… pic.twitter.com/f0gZmzfPdo

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ನಾವು ಮಾತಿಗೆ ಬದ್ಧ, ಯೋಜನೆ ಜಾರಿಗೆ ಸಿದ್ಧ: ನಾವು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಆ ಸಂದರ್ಭದಲ್ಲಿ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರು ಗ್ಯಾರಂಟಿಗೆ ನಮ್ಮ ಸಹಿ ಹಾಕಿದ್ದೆವು. ನಾವು ಇವುಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದೆವು. ಎಲ್ಲ ಮನೆಗಳಿಗೆ ಗ್ಯಾರಂಟಿಗಳನ್ನು ತಲುಪಿಸಿದ್ದೇವೆ. ಈ ನಡುವೆ ಪ್ರತಿಪಕ್ಷಗಳು ಟೀಕಿಸಿವೆ. ಮಾಧ್ಯಮಗಳು ನಿಮಗೆ ಅನಿಸಿದ್ದನ್ನು ಹೇಳಿದ್ದೀರಿ. ಆ ಬಗ್ಗೆ ನಮ್ಮ ತಕಾರರು ಇಲ್ಲ. ಜನರಿಗೆ ತಿಳಿಸಬೇಕಾಗಿರುವುದನ್ನು ತಿಳಿಸಿದ್ದೀರಿ. ನಾವು ನಮ್ಮ ಮಾತಿಗೆ ಬದ್ಧವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇಂದಿನ ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಐದು ಗ್ಯಾರಂಟಿಗಳ ಬಗ್ಗೆ ಚರ್ಚಿಸಿದ್ದೇವೆ. ನಾವು ಈ ಆರ್ಥಿಕ ವರ್ಷದಲ್ಲಿ ಐದೂ ಗ್ಯಾರಂಟಿಗಳನ್ನು ಜಾರಿಗೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಯಾವುದೇ ಜಾತಿ, ಧರ್ಮ, ಭಾಷೆ ಹೀಗೆ ಭೇದ ಭಾವ ಮಾಡದೇ ಈ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

  • ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ ಗರಿಷ್ಠ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ.

    ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ… pic.twitter.com/6uW9OWCetT

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ಮೊದಲ ಗ್ಯಾರಂಟಿ ಘೋಷಣೆ: ಮೊದಲನೇ ಗ್ಯಾರಂಟಿ ಗೃಹ ಜ್ಯೋತಿ ನೀಡಿದ್ದೆವು. ಎಲ್ಲರಿಗೂ 200 ಯೂನಿಟ್​ ವರೆಗೂ ಫ್ರೀ ವಿದ್ಯುತ್​​ ವಾಗ್ದಾನ ಮಾಡಿದ್ದೇವೆ. ಪ್ರತಿ ವರ್ಷ ಅಂದರೆ 12 ತಿಂಗಳ ಸರಾಸರಿ ಆಧಾರದ ಮೇಲೆ ಆ ಮನೆಗೆ ಫ್ರೀ ವಿದ್ಯುತ್​​ ನಿರ್ಧಾರ ಮಾಡಿದ್ದೇವೆ.. ಉದಾಹರಣೆಗೆ ನೀವು ಸರಾಸರಿ 70 ಯೂನಿಟ್ ವಿದ್ಯುತ್​​ ಬಳಸಿದ್ದರೆ, ಅಥವಾ ಒಬ್ಬ 199 ಯೂನಿಟ್​​​ ಖರ್ಚು ಮಾಡಿದ್ದರೆ, 12 ತಿಂಗಳ ಸರಾಸರಿ ಮೇಲೆ 10 ರಷ್ಟು ಹೆಚ್ಚುವರಿ ಯೂನಿಟ್​​​​​ ವರೆಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.​​​​

ಆತ ಬಳಿಸಿದ ಸರಾಸರಿ ಮೇಲೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಅಂದರೆ ಒಬ್ಬ ವ್ಯಕ್ತಿ 70 ಯೂನಿಟ್​​ ಸರಾಸರಿ ವಿದ್ಯುತ್​ ಬಳಕೆ ಮಾಡಿದರೆ, ಈ ತಿಂಗಳು ಅದು 80 ಯೂನಿಟ್​ ಬಂದಿದ್ದರೆ ಅದು ಫ್ರೀ ಆಗಲಿದೆ. ಆದರೆ 200 ಯೂನಿಟ್​​​​​ಗಳ ಒಳಗೆ ಇರಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು. ಜುಲೈ 1 ರಿಂದ ಆಗಸ್ಟ್​ ತಿಂಗಳವರೆಗಿನ ಬಿಲ್​ ನಿಂದ ಮುಂದಿನ ಎಲ್ಲ ಬಿಲ್​​ಗಳಿಗೆ ಯೋಜನೆ ಅನ್ವಯ ಆಗಲಿದೆ ಎಂದು ಸಿಎಂ ಘೋಷಣೆ ಮಾಡಿದರು.

  • ಯಾವುದೇ ಜಾತಿ, ಧರ್ಮ, ಭಾಷೆ, ವರ್ಗಗಳ ಆಧಾರದ ಮೇಲೆ ತಾರತಮ್ಯವಿಲ್ಲದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ ರೂ. 2,000 ವನ್ನು ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.

    ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು… pic.twitter.com/ts7f4S5Coo

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ಎರಡನೇ ಗ್ಯಾರಂಟಿ ಗೃಹ ಲಕ್ಷ್ಮಿ: ಈ ಯೋಜನೆಯನ್ನ ಜಾರಿಗೆ ಮಾಡಲು ಒಪ್ಪಿಗೆ ನೀಡಿದ್ದೇವೆ. ಇವರು ಆಧಾರ ಕಾರ್ಡ್​, ಬ್ಯಾಂಕ್​ ಅಕೌಂಟ್​ ಹೊಂದಿರಬೇಕು. ಈ ಯೋಜನೆ ಸೌಲಭ್ಯ ಬೇಕು ಎಂದರೆ ಅರ್ಜಿ ಸಲ್ಲಿಸಬೇಕು. ಜೂನ್​ 15 ರಿಂದ ಜುಲೈ 15 ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್​ 15 ರಿಂದ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಹಿಳೆಯರು ಕೊಟ್ಟ ದಾಖಲೆಗಳನ್ನು ಪರಿಶೀಲಿಸಿ ಆಗಸ್ಟ್​ 15 ರಿಂದ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.

ಅತ್ತೆ, ಸೊಸೆ ಅಂತಾ ಏನಿಲ್ಲ, 18 ವರ್ಷ ತುಂಬಿದ ಯಾವುದೇ ಮನೆ ಯಜಮಾನಿ ಹಾಗೂ ಯಾರು ಯೋಜನೆಗೆ ಅರ್ಹರೋ ಅವರಿಗೆ ನೀಡುತ್ತೇವೆ. ತಕ್ಷಣ ಈ ಯೋಜನೆ ಜಾರಿಗೆ ಬರಲ್ಲ, ಕಾರಣ ಕೆಲ ತಾಂತ್ರಿಕ ತೊಂದರೆ ಇರುವುದರಿಂದ ಈಗಲೇ ಜಾರಿಗೆ ಬರುವುದಿಲ್ಲ. ಎಲ್ಲ ಅರ್ಜಿಗಳ ಪರಿಶೀಲನೆಗೆ ಸಮಯ ಬೇಕಾಗಿರುವುದರಿಂದ ಅರ್ಜಿ ಕರೆದು ಅದನ್ನು ಪರಿಶೀಲಿಸಿ, ಆಗಸ್ಟ್​ 15 ರಿಂದ ಯೋಜನೆ ಜಾರಿ ಮಾಡಿ ಎಲ್ಲ ಮನೆ ಯಜಮಾನಿಗಳಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇವೆ. ಇದಕ್ಕೆ ಯಾವುದೇ ಕಂಡಿಷನ್ ಇಲ್ಲ. ಪತ್ರಕರ್ತರು ನಡು ನಡುವೆ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ, ನಾನು ಮಾತನಾಡುವವರೆಗೂ ಸುಮ್ಮನಿರಿ ಆ ಮೇಲೆ ಬೇಕಾದರೆ ಪ್ರಶ್ನೆ ಕೇಳಿ ಎಂದರು.

ಎಪಿಎಲ್​ ಹಾಗೂ ಬಿಪಿಎಲ್​​​​ ಕಾರ್ಡ್​ ದಾರರಿಗೂ ಈ ಯೋಜನೆ ಅನ್ವಯ ಆಗಲಿದೆ. ಯಾವುದೇ ಹೆಚ್ಚುವರಿ ಷರತ್ತುಗಳು ಇರುವುದಿಲ್ಲ. ಅರ್ಜಿ ಆನ್​ಲೈನ್​​ನಲ್ಲೇ ಸಲ್ಲಿಕೆ ಮಾಡಬಹುದು. ಇದಕ್ಕಾಗಿ ಸಾಫ್ಟ್​ವೇರ್​ ಸಹ ಅಭಿವೃದ್ಧಿ ಪಡಿಸಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಯಾರು ಓಲ್ಡ್​ ಏಜ್​ ಪೆನ್ಷನ್​ ಪಡೆಯುತ್ತಾರೋ ಅವರಿಗೂ ಈ ಯೋಜನೆ ಅನ್ವಯವಾಗಲಿದೆ. ಅಂಗವಿಕಲರು, ವಯಸ್ಸಾದವರು ಮನೆ ಯಜಮಾನಿ ಆಗಿದ್ದರೆ, ಅದನ್ನು ಕೊಡ್ತೇವಿ ಎಂದು ಸ್ಪಷ್ಟಪಡಿಸಿದರು.

  • ಬಡತನ ರೇಖೆಗಿಂತ ಕೆಳಗಿನ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ ತಲಾ 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.

    ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ಹಿಂದಿನ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ… pic.twitter.com/z6AtNaJuCx

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ಅನ್ನಭಾಗ್ಯ ಯೋಜನೆಯೂ ಜಾರಿ: ನಾವು ಎಲೆಕ್ಷನ್​ನಲ್ಲಿ 10 ಕೆ ಜಿ ಕೊಡ್ತೇವಿ ಎಂದಿದ್ದೆವು. ಅದನ್ನು ಈಡೇರಿಸುತ್ತೇವೆ. ಜುಲೈ 1 ರಿಂದ ಎಲ್ಲ ಬಿಪಿಎಲ್​, ಅಂತ್ಯೋದಯ ಕಾರ್ಡ್​ ದಾರರಿಗೂ ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ಇದು ಜುಲೈ 1ರಿಂದಲೇ ಯೋಜನೆ ಜಾರಿಗೆ ತರುತ್ತೇವೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ತಿಂಗಳು ಯೋಜನೆ ಜಾರಿ ಮಾಡಲು ಸಾಧ್ಯವಾಗಲ್ಲ, ಹಾಗಾಗಿ ಮುಂದಿನ ತಿಂಗಳು 1 ರಿಂದಲೇ ತಲಾ 10 ಕೆಜಿ ಅಕ್ಕಿಯನ್ನು ಎಲ್ಲ ಬಿಪಿಎಲ್​, ಅಂತ್ಯೋದಯ ಕಾರ್ಡ್​ದಾರರಿಗೆ ಉಚಿತ ಅಕ್ಕಿ ನೀಡುತ್ತೇವೆ ಎಂದರು.

  • ಶಾಲಾ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಎಸಿ, ಸ್ಲೀಪರ್ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಲು ಇಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.

    ಜೂನ್ 11 ರಂದು ಈ ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು… pic.twitter.com/F1gCSAzeBM

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ನಾಲ್ಕನೇ ಗ್ಯಾರಂಟಿ ಶಕ್ತಿ: ಎಲ್ಲ ಮಹಿಳೆಯರಿಗೆ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ನೀಡುವ ಭರವಸೆಯನ್ನೂ ಈಡೇರಿಸುತ್ತೇವೆ. ವಿದ್ಯಾರ್ಥಿನಿಯರು ಸೇರಿದಂತೆ ಈ ತಿಂಗಳ 11 ರಿಂದಲೇ ಯೋಜನೆ ಜಾರಿಗೆ ಬರಲಿದೆ. ಈ ಕಾರ್ಯಕ್ರಮ ಕರ್ನಾಟಕ ರಾಜ್ಯದ ಒಳಗಡೆ ಮಾತ್ರ ಸೀಮಿತವಾಗಿದೆ. ನೀವು ಬೆಂಗಳೂರಿನಿಂದ ಕೋಲಾರ, ಬೀದರ್​, ಬೆಳಗಾವಿ ಹೀಗೆ ಎಲ್ಲಿ ಬೇಕಾದರೂ ರಾಜ್ಯದ ಒಳಗಡೆ ಓಡಾಡಬಹುದು.

ಎಸಿ ಹೊರತುಪಡಿಸಿ, ವೇಗದೂತ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಬಹುದು. ಬೆಂಗಳೂರಿಂದ ತಿರುಪತಿ, ಹೈದರಾಬಾದ್​ಗೆ ಒಡಾಡಲು ಆಗುವುದಿಲ್ಲ. ಎಸಿ ಮತ್ತು ಲಕ್ಷುರಿ ಬಸ್​ ಹೊರತು ಪಡಿಸಿ ಶೇ 94 ರಷ್ಟು ಬಸ್​​ನಲ್ಲಿ ಯಾವುದೇ ಮಹಿಳೆ ಯಾವುದೇ ಷರತ್ತುಗಳಿಲ್ಲದೇ ಯಾವುದೇ ಬಸ್​ ಚಾರ್ಜ್​ ಇಲ್ಲದೇ ಎಲ್ಲೆಂದರಲ್ಲಿ ಓಡಾಡಬಹುದು. ಜೂನ್​ 11ರಿಂದಲೇ ಬೆಂಗಳೂರಿನಲ್ಲಿ ಯೋಜನೆ ಜಾರಿಗೆ ಬರಲಿದೆ. ಬಿಎಂಟಿಸಿ ಬಸ್​​ಗಳಲ್ಲಿ ಯಾವುದೇ ರಿಸರ್ವೇಷನ್​ ಇರುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಘೋಷಣೆ ಮಾಡಿದರು.

  • 2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ.

    ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ… pic.twitter.com/XqO66f9tHg

    — Siddaramaiah (@siddaramaiah) June 2, 2023 " class="align-text-top noRightClick twitterSection" data=" ">

ಯುವನಿಧಿ ಯೋಜನೆ ಜಾರಿಗೂ ಸಂಪುಟ ಅಸ್ತು: 2023ನೇ ಇಸ್ಪಿಯಲ್ಲಿ ಪಾಸಾದ ಬಿಎ, ಬಿಎಸ್​ಸಿ, ಹೀಗೆ ಎಲ್ಲ ಪದವೀಧರರಿಗೂ 24 ತಿಂಗಳವರೆಗೂ ಅವರಿಗೆ ಪ್ರತಿ ತಿಂಗಳಿಗೆ 3000 ರೂ ಗಳನ್ನು ನೀಡುತ್ತೇವೆ. ಡಿಪ್ಲೋಮಾ ಮಾಡಿದವರಿಗೆ 1500 ರೂ ಹಣ ನೀಡಲಾಗುವುದು. 24 ತಿಂಗಳ ಒಳಗೆ ಅವರಿಗೆ ಖಾಸಗಿ ಆಗಲಿ, ಸರ್ಕಾರಿ ಆಗಲಿ ಅವರಿಗೆ ನೌಕರಿ ಸಿಕ್ಕರೆ ಯೋಜನೆ ಸ್ಥಗಿತಗೊಳ್ಳಲಿದೆ.

ಎಲ್ಲ ಅನ್​ ಎಂಪ್ಲಾಯ್ಡ್​​ ಆದವರಿಗೆ ಹಾಗೂ ಅರ್ಜಿ ಹಾಕಿದವರಿಗೆ ತಿಂಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗವನ್ನು ನೋಡದೇ ಯೋಜನೆಯನ್ನ ಜಾರಿಗೆ ಮಾಡಲಾಗುವುದು. ದ್ವಿ, ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಕಾಂಗ್ರೆಸ್​ ನೀಡಿದ ಎಲ್ಲ ಐದು ಯೋಜನೆಗಳನ್ನು ಜಾರಿಗೆ ಮಾಡಲು ನಮ್ಮ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಪದವಿ ಪೂರೈಸಿ 180 ದಿನಗಳಾಗಿದ್ದು, ನೌಕರಿ ಸಿಗದವರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಮಾಡಿಕೊಳ್ಳಬಹುದು. ನೌಕರಿ ಇಲ್ಲದ ಯುವಕರಿಗೆ 2 ವರ್ಷ ಹಣ ನೀಡಲಾಗುವುದು.

ನಾವು ನುಡಿದಂತೆ ನಡೆದವರು, ಈ ಹಿಂದೆ ನಾವು 165 ಭರವಸೆ ನೀಡಿ 155 ಭರವಸೆ ಈಡೇರಿಸಿದ್ದೇವೆ. ಈಗಲೂ ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ. ಈಡೇರಿಸುತ್ತಿದ್ದೇವೆ. ಮಾಡಿದೇವಿ, ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ: ಬಿಜೆಪಿ ಹಾಗೂ ನರೇಂದ್ರ ಮೋದಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಬಿಜೆಪಿ ಅವರಿಗೆ ನಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ಇಲ್ಲ ಎಂದು ಹರಿಹಾಯ್ದರು.

ಇದನ್ನೂ ಓದಿ: 'ಷರತ್ತು'ಗಳು ಗ್ಯಾರಂಟಿ- ಸರ್ಕಾರದ ಯೋಜನೆಗಳು ನಿಯಮ, ನಿಬಂಧನೆಗಳಿಗೆ ಒಳಪಟ್ಟಿರುತ್ತವೆ: ಪ್ರಿಯಾಂಕ್ ಖರ್ಗೆ

Last Updated : Jun 2, 2023, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.