ETV Bharat / state

Karnataka Unlock 2.0: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?

author img

By

Published : Jun 19, 2021, 7:21 PM IST

Updated : Jun 19, 2021, 8:37 PM IST

ಮೈಸೂರಿನಲ್ಲಿ ಮಾತ್ರ ಈಗಿನಂತೆ ನಿರ್ಬಂಧ ಮುಂದುವರೆಯಲಿದೆ. ರಾಜ್ಯದಲ್ಲಿ ಶೇ. 50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್​, ಮಾಲ್​, ಈಜುಕೊಳ ತೆರೆಯಲು ಅನುಮತಿ ಇಲ್ಲ.

BSY
ಬಿಎಸ್​ವೈ

ಬೆಂಗಳೂರು: ರಾಜ್ಯದಲ್ಲಿ ಮೈಸೂರು ಸೇರಿ 13 ಜಿಲ್ಲೆ ಹೊರತು ಪಡಿಸಿ ಉಳಿದ 16 ಜಿಲ್ಲೆಗಳಲ್ಲಿ ಅನ್​​​ಲಾಕ್​ ಘೋಷಣೆ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಹೊಸ ಮಾರ್ಗಸೂಚಿ ಘೋಷಿಸಿದ್ದಾರೆ.

ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ ಶೇ.5-10ರಷ್ಟು ಪಾಸಿಟಿವಿಟಿ ರೇಟ್​ ಇದೆ. ಮೈಸೂರಿನಲ್ಲಿ ಶೇ.10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದ್ದು, ಇದರ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗಳನ್ನು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ಕೆಳಕಂಡಂತೆ ನಿರ್ಬಂಧ ಸಡಿಲಿಕೆಯ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಅನ್​ಲಾಕ್ ಕುರಿತು ಸಿಎಂ ಬಿಎಸ್​​ವೈ ಪ್ರತಿಕ್ರಿಯೆ

ಯಾವೆಲ್ಲಾ ಸೇವೆ ಲಭ್ಯ..?

ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿಬಿಎಂಪಿ ವಲಯ) ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್​ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

  • ಸೋಮವಾರದಿಂದ ಜಿಮ್ ಓಪನ್ ಶೇ. 50ರಷ್ಟು ಮಂದಿಗಷ್ಟೇ ಅವಕಾಶ
  • ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಅಂಗಡಿ ತೆರೆಯಲು ಅವಕಾಶ
  • ಹೋಟೆಲ್​​​ನಲ್ಲಿ ಕುಳಿತು ಊಟ-ತಿಂಡಿಗೆ ಅವಕಾಶ
  • ಮೆಟ್ರೋದಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ
  • ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ
  • ಹೊರಾಂಗಣ ಕ್ರೀಡೆಗಳಿಗೆ ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ
  • ಜ್ಯುವೆಲ್ಲರಿ ಅಂಗಡಿ ತೆರೆಯಲು ಅವಕಾಶ
  • ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಕೆ
  • ಸೋಮವಾರದಿಂದ ಲಾಡ್ಜ್​ ಮತ್ತು ರೆಸಾರ್ಟ್​​ಗಳು ಓಪನ್
  • 16 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ
  • ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ
  • ಜಿಮ್​​, ಹೋಟೆಲ್​​​, ಲಾಡ್ಜ್​​ನಲ್ಲಿ ಎಸಿ ಬಳಕೆಗೆ ನಿರ್ಬಂಧ

13 ಜಿಲ್ಲೆಗಳಿಗೆ ನಿರ್ಬಂಧ ಮುಂದುವರಿಕೆ

ಶೇ.5ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ದಿನಾಂಕ: 11-06-2021ರಂದು ನೀಡಿರುವ ಆದೇಶದಲ್ಲಿನ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

ರಾಜ್ಯವ್ಯಾಪಿ ನೈಟ್​​ ಕರ್ಫ್ಯೂ ಜಾರಿ

ಪ್ರತಿ ದಿನ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿಯಿರಲಿದ್ದು, ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಗ್ಗೆ 05.00 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ.

ಈ ಎಲ್ಲಾ ನಿಯಾಮಾವಳಿಗಳು ಜುಲೈ 5ರ ವರೆಗೆ ಅನ್ವಯವಾಗಲಿದೆ ಎಂದು ಬಿಎಸ್​ವೈ ತಿಳಿಸಿದ್ದಾರೆ.

Last Updated : Jun 19, 2021, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.