ETV Bharat / state

ಆರು ಜಿಲ್ಲೆಗಳಿಗೆ ಇವಿ ಪವರ್ ಪ್ಲಸ್ ಬಸ್ ಸೇವೆ: ಮೊದಲ ಹಂತದ 25 ಬಸ್​ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ

author img

By

Published : Mar 20, 2023, 7:07 PM IST

Updated : Mar 20, 2023, 7:17 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂತರ್ ನಗರ ವಿದ್ಯುತ್ ಚಾಲಿತ ಇ.ವಿ.ಪವರ್ ಪ್ಲಸ್ ಬಸ್ಸುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

cm-bommai-inaugurates-new-25-electric-buses
ಆರು ಜಿಲ್ಲೆಗಳಿಗೆ ಇವಿ ಪವರ್ ಪ್ಲಸ್ ಬಸ್ ಸೇವೆ: ಮೊದಲ ಹಂತದ 25 ಬಸ್​ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್​ಆರ್​ಟಿಸಿ) ಅಂತರ್ ನಗರ ನೂತನ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಇ.ವಿ. ಪವರ್ ಪ್ಲಸ್ ಬಸ್ಸುಗಳು ಹಾಗೂ ಸಾರಿಗೆ ಇಲಾಖೆಯ ಬೊಲೆರೋ ಜೀಪುಗಳ ಲೋಕಾರ್ಪಣೆ ಮತ್ತು ಸ್ಮಾರ್ಟ್​ ಎನ್​ಫೋರ್ಸ್ ಮೆಂಟ್ ಇ. ಚಲನ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮುಂದೆ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಹವಾನಿಯಂತ್ರಿತ 50 ಇವಿ ಪವರ್ ಪ್ಲಸ್ ವಿದ್ಯುತ್ ಚಾಲಿತ ಬಸ್​ಗಳ ಪೈಕಿ ಮೊದಲ ಹಂತವಾಗಿ 25 ಬಸ್ ಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಚಂದ್ರಪ್ಪ, ನಿಮಗದ ಉಪಾಧ್ಯಕ್ಷ ಮೋಹನ್ ಬಿ ಮೆಣಸಿನಕಾಯಿ ಹಾಗೂ ಇತರ ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 7400 ಅನುಸೂಚಿಗಳಿಂದ 27 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 26 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.9.5 ಕೋಟಿ ಆದಾಯ ಗಳಿಸುತ್ತಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದ್ದು, ಇಂದು 25 ಬಸ್ ಗಳನ್ನು ರಸ್ತೆಗೆ ಇಳಿಸಲಾಗಿದೆ. ಉಳಿದ ಬಸ್ ಗಳನ್ನು ಮುಂದಿನ ದಿನಗಳಲ್ಲಿ ರಸ್ತೆಗೆ ಬಿಡಲಾಗುತ್ತದೆ.

ಇವಿ ಪವರ್ ಪ್ಲಸ್ ಬಸ್ ಗಳ ವಿಶೇಷತೆಯೇನು?: ಬಸ್ ಸುಮಾರು 12 ಮೀಟರ್ ಉದ್ದವಾಗಿದ್ದು, ಪ್ರತಿ ಚಾರ್ಜ್ ಗೆ 300 ಕಿ.ಮೀ ಕ್ರಮಿಸುತ್ತದೆ. ಸುಧಾರಿತ Li-ion phosphate Battery ಹೊಂದಿದೆ. ಇದು 203 ಗಂಟೆಗಳಲ್ಲಿ ಫಾಸ್ಟ್ ಚಾರ್ಚಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು. ಚಾಲಕರು, ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿದೆ. ಬಸ್ ನಲ್ಲಿ ಸಿಸಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮತ್ತಿತರ ಸುರಕ್ಷಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ-ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ. ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೂ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.

ಬಸ್ ಸಂಚರಿಸುವ ಮಾರ್ಗಗಳು: ಪ್ರಸ್ತುತ ಉದ್ಘಾಟನೆಗೊಂಡಿರುವ ಬಸ್​ಗಳು ಆರು ಜಿಲ್ಲೆಗಳಲ್ಲಿ ಸಂಚರಿಸುತ್ತವೆ. ಬೆಂಗಳೂರು-ಮೈಸೂರು, ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಚಿಕ್ಕಮಗಳೂರು.
ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದ್ದು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗು ಚಿಕ್ಕಮಗಳೂರು ನಗರಗಳಲ್ಲಿ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಹೈಕೋರ್ಟ್ ಸೂಚಿಸಿದರೆ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಸಾರಿಗೆ ಇಲಾಖೆ ಸನ್ನದ್ಧ; ಏನಿದು ಬೈಕ್ ಟ್ಯಾಕ್ಸಿ ಕಾನೂನು ಸಮರ?

Last Updated :Mar 20, 2023, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.