ETV Bharat / state

ಆಡಳಿತದಲ್ಲಿ ವೇಗ ಹಾಗು ಸಕಾಲದಲ್ಲಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಸಿಎಂ ಸೂಚನೆ

author img

By

Published : Jul 21, 2022, 8:31 AM IST

ಕಳೆದ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳ ಜಾರಿಗೆ ಭೂ ಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು. ಈಗಾಗಲೇ ಹಲವಾರು ಜನಪರ ಯೋಜನೆಗಳು ಜಾರಿಯಾಗಿವೆ. ಅವುಗಳಲ್ಲಿ ಗೊಂದಲಗಳಿದ್ದರೆ, ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆಡಳಿತದಲ್ಲಿ ವೇಗ ಮತ್ತು ಯೋಜನೆಗಳ ಪರಿಣಾಮಕಾರಿ ಜಾರಿ ಹಾಗು ನಿಗದಿತ ಸಮಯದಲ್ಲಿ ಯೋಜನೆಗಳ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಿನ್ನೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್​ನಲ್ಲಿ ಘೋಷಣೆ ಮಾಡಿದ ಕೆಲವು ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಇನ್ನು ಕೆಲವು ಯೋಜನೆಗಳು ಅನುಮೋದನೆ ನೀಡುವ ಹಂತದಲ್ಲಿವೆ. ನಿಗದಿತ ಸಮಯದಲ್ಲಿ ಯೋಜನೆಗಳ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.


ಕೆಲವು ಬಿಪಿಎಲ್ ಕಾರ್ಡ್​ಗಳ ಬಗ್ಗೆ ಗೊಂದಲಗಳಿವೆ. ಹೊಸ ಕಾರ್ಡ್​ಗಳಲ್ಲಿ ಅಸಲಿ ಮತ್ತು ನಕಲಿ ಕಾರ್ಡ್ ಬಳಕೆ ಆಗುತ್ತಿದೆ. ಅವುಗಳನ್ನು ತೆಗೆದು ಹಾಕಲು ಸೂಚನೆ ನೀಡಿದ್ದೇನೆ. ಬಜೆಟ್ ಯೋಜನೆಗಳು ಕಟ್ಟಕಡೆಯ ಮನುಷ್ಯನಿಗೆ ತಲುಪಬೇಕು ಎನ್ನುವ ದೃಷ್ಠಿಯಿಂದ ಹಲವು ನಿರ್ದೇಶನವನ್ನು ಕೊಟ್ಟಿದ್ದೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ: ಕೇಂದ್ರ ಸರ್ಕಾರದ ಜನಪರ ಯೋಜನೆಗಳು ರಾಜ್ಯದಲ್ಲಿ ಶೇ. 100 ರಷ್ಟು ಜಾರಿಯಾಗಿವೆ. ಕೇಂದ್ರದ ಜನಪರ ಯೋಜನೆಗಳ ತಕ್ಷಣ ಜಾರಿಗೆ ಸೂಚಿಸಿ, ವಿಶ್ಲೇಷಣೆ ಮಾಡಿದ್ದೇನೆ. ಪಿ.ಎಂ.ಜೆ.ಎಸ್.ವೈ, ಸ್ವ-ನಿಧಿ ಯೋಜನೆ ಶೀಘ್ರದಲ್ಲಿ ಜಾರಿಯಾಗಬೇಕು. ರೈತ ಸಮ್ಮಾನ ನಿಧಿ ಸೇರಿದಂತೆ ಹಲವಾರು ಯೋಜನೆಗಳು ಈಗಾಗಲೇ ಜಾರಿಯಾಗಿವೆ. ರಾಜ್ಯದಲ್ಲಿ ಡ್ರೋನ್ ಸರ್ವೇಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಜು.24ಕ್ಕೆ ದಿಲ್ಲಿಗೆ ಹೋಗುತ್ತಿದ್ದೇನೆ, ಸಚಿವ ಸಂಪುಟ ವಿಸ್ತರಣೆ ನಿರ್ಧಾರ ವರಿಷ್ಠರಿಗೆ ಬಿಟ್ಟಿದ್ದು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.