ETV Bharat / state

ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕರನ್ನ 10 ವರ್ಷಗಳಿಂದ ನೋಡಿಯೇ ಇಲ್ಲ: ಗ್ರಾಮಸ್ಥರು

author img

By

Published : Dec 16, 2022, 8:53 AM IST

ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕರನ್ನು ನಾವು ಕಳೆದ 10 ವರ್ಷಗಳಿಂದ ನೋಡಿಯೇ ಇಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ.

Clash between MLA and Villagers  Clash between MLA and Villagers in Nelamangala  MLA Srinivas murthy  ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕ  10 ವರ್ಷಗಳಿಂದ ಶಾಸಕರನ್ನ ನೋಡಿಯೇ ಇಲ್ಲ  ಗ್ರಾಮಸ್ಥರು ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿ  ತಟ್ಟೇಕೆರೆ ಕಾಲೋನಿ ಸಂಪೂರ್ಣ ಕಾಂಕ್ರೀಟಿಕರ
ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕರನ್ನ 10 ವರ್ಷಗಳಿಂದ ನೋಡಿಯೇ ಇಲ್ಲ

ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕರನ್ನ 10 ವರ್ಷಗಳಿಂದ ನೋಡಿಯೇ ಇಲ್ಲ ಎಂದ ಗ್ರಾಮಸ್ಥರು

ನೆಲಮಂಗಲ: ಕಾಮಗಾರಿಯ ಗುದ್ದಲಿಪೂಜೆಗೆ ನೆಲಮಂಗಲ ಶಾಸಕರಾದ ಡಾ. ಶ್ರೀನಿವಾಸಮೂರ್ತಿ ಬಂದಿದ್ದರು. ಈ ವೇಳೆ, ಗ್ರಾಮಸ್ಥರು 10 ವರ್ಷಗಳಿಂದ ಶಾಸಕರನ್ನ ನೋಡಿಯೇ ಇಲ್ಲವೆಂದು ಹೇಳಿದರು. ಇದೇ ವಿಚಾರಕ್ಕೆ ಶಾಸಕರ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸೋಲೂರಿನ ತಟ್ಟೆಕೆರೆ ಬಳಿ ನಡೆದಿದೆ.

ತಟ್ಟೆಕೆರೆ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ 500 ಮೀ. ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ವೇಳೆ ಆರೋಪ - ಪ್ರತ್ಯಾರೋಪ ನಡೆದಿದೆ. ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ತಟ್ಟೆಕೆರೆಗೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರಾದ ಶ್ರೀನಿವಾಸ್ ಹತ್ತು ವರ್ಷಗಳಿಂದ ನಿಮ್ಮನ್ನು ನೋಡಿಲ್ಲ ಎಂದರು. ಇದೇ ವಿಚಾರಕ್ಕೆ ಶಾಸಕ ಶ್ರೀನಿವಾಸಮೂರ್ತಿ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆಯಿತು.

ತಟ್ಟೆಕೆರೆ ಗ್ರಾಮಕ್ಕೆ ಹಲವಾರು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಶಾಸಕ ಎಂದು ಗೌರವ ಕೊಟ್ಟು ಮಾತನಾಡಿ ಎಂದು ಶ್ರೀನಿವಾಸಮೂರ್ತಿ ಗ್ರಾಮಸ್ಥರಿಗೆ ಹೇಳಿದರು. ಈ ವೇಳೆ ಗ್ರಾಮಸ್ಥರು ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳೀಯರು ವಾಕ್ಸಮರಕ್ಕೆ ಅಂತ್ಯ ಹಾಡಿ, ಗುದ್ದಲಿ ಪೂಜೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಶಾಸಕರು ಮಾಡಿದರು.

ಗುದ್ದಲಿಪೂಜೆ ಬಳಿಕ ಮಾತನಾಡಿದ ಗ್ರಾಮಸ್ಥರು, ಹಲವಾರು ವರ್ಷಗಳಿಂದ ಈ ರಸ್ತೆ ನೆನೆಗುದಿಗೆ ಬಿದ್ದಿದೆ. ಸಂಪೂರ್ಣವಾಗಿ ರಸ್ತೆ ನವೀಕರಣ ಮಾಡಿ ಎಂಬುದೇ ನಮ್ಮ ವಾದ. ಸ್ವಲ್ಪ ಕಾಮಗಾರಿಯಾಗುವ ಬದಲು ಸಂಪೂರ್ಣ ಕಾಮಗಾರಿಯಾಗಲಿ ಎಂಬುದು ನಮ್ಮ ಆಶಯ ಮತ್ತು ಮನವಿ ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಇಂದು ಕೊರಟಗೆರೆ, ಜಿರೋಜ್ ನಗರ, ಆಲೂರು, ತಟ್ಟೇಕೆರೆ ಭಾಗದಲ್ಲಿ 1.50 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದ್ದೇವೆ. ನನ್ನ 10 ವರ್ಷದ ಶಾಸಕ ಅವಧಿಯಲ್ಲಿ ಕೆಲವು ವರ್ಷಗಳಷ್ಟೇ ಆಡಳಿತಾರೂಢರಾಗಿದ್ದೆವು. ವಿರೋಧ ಪಕ್ಷಗಳು ಅನುದಾನ ಸಮರ್ಪಕವಾಗಿ‌ ನೀಡುವುದಿಲ್ಲ. ಆದರೂ ಆಡಳಿತರೂಢ ಪಕ್ಷಕ್ಕೆ ಮನವಿ ಸಲ್ಲಿಸಿ, ಇರುವ ಅನುದಾನದಲ್ಲೇ ಶಾಸಕನ ಕರ್ತವ್ಯ ಅರಿತು ಕೆಲಸ ಮಾಡಿದ್ದೇನೆ ಎಂದರು.

ಸೋಲೂರಿಗೆ ಬಂದಾಗ ಏಕಾಏಕಿ ಶಾಸಕ ಎಂಬುದನ್ನು ಮರೆತು ಮಾತನಾಡಿದ್ದು ಮನಸ್ಸಿಗೆ ಬೇಸರವಾಯಿತು. ಕಳೆದ ಎರಡು ಅವಧಿಯಲ್ಲಿ ಹಲವಾರು ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿದ್ದೇನೆ. ತಟ್ಟೇಕೆರೆ ಕಾಲೋನಿ ಸಂಪೂರ್ಣ ಕಾಂಕ್ರೀಟಿಕರಣವಾಗಿದೆ. ಈ ಸೋಲೂರಿನಿಂದ-ತಟ್ಟೇಕೆರೆವರೆಗೆ ಕೆರೆಯ ಏರಿ ರಸ್ತೆಗೆ 50 ಲಕ್ಷ ಅನುದಾನ ಕಡಿಮೆ ಎಂದು ಹೇಳಿದ್ದಾರೆ. ಇನ್ನಷ್ಟು ಅನುದಾನ ನೀಡಲು ಈ ತಿಂಗಳ ಒಳಗೆ ಮುಂದಾಗುತ್ತೇನೆ. ಪಂಚರತ್ನ ರಥಯಾತ್ರೆ ಮಾಗಡಿಗೆ ಆಗಮಿಸುತ್ತಿರುವುದು ಸ್ವಾಗತಾರ್ಹ ಎಂದರು.

ಓದಿ: ಅಮಿತಾಬ್ ಬಚ್ಚನ್ ಅವರಿಗೆ ಭಾರತ ರತ್ನ ಕೊಡಿ: ಮಮತಾ ಬ್ಯಾನರ್ಜಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.