ETV Bharat / state

ತಜ್ಞರ ವರದಿ.. ಕೋವಿಡ್ 3ನೇ ಅಲೆಯಿಂದ 18 ವರ್ಷದೊಳಗಿನ ಮಕ್ಕಳು ಬಚಾವ್!

author img

By

Published : Jan 21, 2022, 6:09 PM IST

Updated : Jan 21, 2022, 6:18 PM IST

ಸದ್ಯ ಇದೀಗ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗ್ತಿದೆ. ಆದರೆ, ಕೋವಿಡ್ 3ನೇ ಅಲೆಯಿಂದ 18 ವರ್ಷದೊಳಗಿನ ಮಕ್ಕಳು ಬಾಚವ್ ಆಗಿರುವುದಾಗಿ ತಜ್ಞರು ನಡೆಸಿರುವ ಅನಾಲಿಸಿಸ್ ( analysis) ನಲ್ಲಿ ತಿಳಿದುಸ ಬಂದಿದೆ.‌.

covid test
ಕೋವಿಡ್ ಟೆಸ್ಟ್​

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆ ಆಯ್ತು ಎನ್ನುವಾಗಲೇ ಒಮಿಕ್ರಾನ್ ರೂಪದಲ್ಲಿ ಆರೋಗ್ಯ ಇಲಾಖೆಗೆ 3ನೇ ಅಲೆ ತಲೆ ಕೆಡಿಸಿದೆ.‌ ಕಣ್ಣಿಗೆ ಕಾಣಿಸಿದ ವೈರಸ್ ವಿರುದ್ದ ಹೋರಾಟ ಅನಿರ್ವಾಯವಾಗಿದೆ. ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ಗಡಿದಾಟುತ್ತಿದೆ.

ಅಂದ ಹಾಗೇ ಈ 3ನೇ ಅಲೆಯಲ್ಲಿ ಮಕ್ಕಳೇ ಹೆಚ್ಚು ಟಾರ್ಗೆಟ್ ಆಗುವ ಎಲ್ಲ ಸಾಧ್ಯತೆಗಳು ಇವೆ ಅಂತಾ ತಜ್ಞರು ಈ ಹಿಂದೆಯೇ ತಿಳಿಸಿದ್ದರು.‌ ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಕೋವಿಡ್ ಸೋಂಕಿನ ನಿರ್ವಹಣೆಗಾಗಿ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿಯನ್ನ ರಚನೆ ಮಾಡಲಾಗಿತ್ತು.

ಈ ಸಮಿತಿಯು ಸರ್ಕಾರಕ್ಕೆ ಈ ಹಿಂದೆ ಹಲವು ಶಿಫಾರಸು ಮಾಡಿತ್ತು..

ಸದ್ಯ ಇದೀಗ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗ್ತಿದೆ. ಆದರೆ, ಕೋವಿಡ್ 3ನೇ ಅಲೆಯಿಂದ 18 ವರ್ಷದೊಳಗಿನ ಮಕ್ಕಳು ಬಾಚವ್ ಆಗಿರುವುದಾಗಿ ತಜ್ಞರು ನಡೆಸಿರುವ ಅನಾಲಿಸಿಸ್ ( analysis) ನಲ್ಲಿ ತಿಳಿದು ಬಂದಿದೆ.‌

ಕೋವಿಡ್-19ನ 2ನೇ ಅಲೆಗೆ ಹೋಲಿಸಿದರೆ 3ನೇ ಅಲೆಯ ಸಮಯದಲ್ಲಿ ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚು ಸೋಂಕು ಹರಡುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್​ ಸೋಂಕು ಹರಡುವಿಕೆಯು ಕಡಿಮೆಯಾಗಿರುವ ಬಗ್ಗೆ ಸ್ಟೇಟ್ ಕೋವಿಡ್ ವಾರ್ ರೂಂ‌ ರಿಪೋರ್ಟ್ ಕೊಟ್ಟಿದೆ.

ಏಪ್ರಿಲ್​ನಲ್ಲಿ 6,50,957 ಮಕ್ಕಳಲ್ಲಿ( 0-18 ವರ್ಷ) ಟೆಸ್ಟಿಂಗ್ ಮಾಡಿದಾಗ 57,442 ಪಾಸಿಟಿವ್ ದೃಢಪಟ್ಟಿತ್ತು. ಪಾಸಿಟಿವ್ ರೇಟ್​ 8.82% ರಷ್ಟು ಇತ್ತು.‌ ಅದೇ 19 ವರ್ಷ ಮತ್ತು ಮೇಲ್ಪಟ್ಟ 35,96,500 ವ್ಯಕ್ತಿಗಳಿಗೆ ಟೆಸ್ಟಿಂಗ್ ಮಾಡಿದಾಗ 5,58,614 ಮಂದಿಗೆ ಪಾಸಿಟಿವ್ ಬಂದು ಪಾಸಿಟಿವ್ ರೇಟು 15.53 ರಷ್ಟು ಇತ್ತು.‌

ಪಾಸಿಟಿವ್ ದರದಲ್ಲಿ ವಯಸ್ಕರ ಪಾಸಿಟಿವಿಟಿ ಮತ್ತು ಮಕ್ಕಳ ನಡುವಿನ ಪಾಸಿಟಿವಿಟಿ ಅನುಪಾತವನ್ನು ವಿಭಿನ್ನವಾಗಿ ಲೆಕ್ಕ ಹಾಕಲಾಗುತ್ತೆ.‌ ಆ ಪೈಕಿ ಮಕ್ಕಳಿಗಿಂತ ವಯಸ್ಕರಲ್ಲಿಯೇ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ.


2&3ನೇ ಅಲೆಯಲ್ಲಿ ಪಾಸಿಟಿವ್ ರೇಟ್ ಹೋಲಿಕೆ

( 0-18 ವರ್ಷ)

ಏಪ್ರಿಲ್ 21 0.57%
ಮೇ 21 0.92%
ನವೆಂಬರ್ 210.59
ಡಿಸೆಂಬರ್21 0.42
ಜನವರಿ 220.44

ಮಕ್ಕಳು ವೈರಸ್ ಕ್ಯಾರಿಯರ್ಸ್ ಅಲ್ಲ

ಮಕ್ಕಳು ಸೂಪರ್ ಸ್ಪೈಡರ್ಸ್ ಅಲ್ಲ. ಮಕ್ಕಳು ಕೋವಿಡ್ ಕ್ಯಾರಿಯರ್ಸ್ ಆಗಿರುವುದಿಲ್ಲ. ಬದಲಿಗೆ ಮಕ್ಕಳಿಗೆ ಬಂದರೆ ಮನೆಯವರಿಂದಲೇ ಕೊರೊನಾ ಸೋಂಕು ಬರಬಹುದಾದ ಸಾಧ್ಯತೆಯೇ ಹೆಚ್ಚು. ಸದ್ಯ ಮಕ್ಕಳಿಗೆ ಸೋಂಕು ತಗುಲಿದರೂ ಅನಾಹುತ ಸೃಷ್ಟಿ ಮಾಡಿರೋದು ಕಡಿಮೆ. ಮಕ್ಕಳಲ್ಲಿ ಆಗ್ತಿರುವ ಸಾವಿನ ಪ್ರಮಾಣ ಕೂಡ ಕಡಿಮೆ ಇದೆ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ಒಂದಷ್ಟು ತಯಾರಿಗಳನ್ನ ಮಾಡಿಕೊಳ್ಳಲು ತಾಂತ್ರಿಕ ಸಮಿತಿ ಸದಸ್ಯರು ಸಲಹೆ ನೀಡಿದ್ದಾರೆ.‌

ಲಸಿಕಾ ಅಭಿಯಾನಕ್ಕೆ ಒತ್ತು

ಮಕ್ಕಳಿಗೆ ಸೋಂಕು ಹಿರಿಯರಿಂದಲೇ ತಗುಲುವುದರಿಂದ ಪ್ರಾಥಮಿಕ ನಿಯಂತ್ರಣವಾಗಿ ಹೆಚ್ಚು ಹೆಚ್ಚು ಲಸಿಕೆ ಹಾಕಿಸಬೇಕೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ‌. ಈಗಾಗಲೇ 15-17 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡುತ್ತಿರುವುದರಿಂದ ಸೋಂಕು ಹರಡುವಿಕೆ‌ ಪ್ರಮಾಣ ಹಾಗೂ ತೀವ್ರತೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಯಾವ ಯಾವ ವಯೋಮಾನದವರಿಗೆ ತಗುಲಿದೆ ಸೋಂಕು?

ವಯೋಮಾನ- ಸೋಂಕಿತರ ಸಂಖ್ಯೆ-ಸಾವಿನ ಸಂಖ್ಯೆ

0-9 ವರ್ಷ 1,04,693 68
10-19 ವರ್ಷ 2,85,534 98
20-29 ವರ್ಷ7,38,483 796
30-39 ವರ್ಷ5,79,739 2,374
40-49 ವರ್ಷ4,21,972 5,108
50-59 ವರ್ಷ4,21,972 8,397
60-69 ವರ್ಷ2,95,332 10,884
70-79 ವರ್ಷ1,33,898 7,425
80-89 ವರ್ಷ39,087 2,778
90-99 ವರ್ಷ5065 574

100 ವರ್ಷ ಮೇಲ್ಪಟ್ಟ- 242- 13

ಓದಿ: ಜನ ಮೈಮರೆತರೆ ಲಾಕ್​​​​ಡೌನ್ ಅನಿವಾರ್ಯವಾಗಬಹುದು : ಆರಗ ಜ್ಞಾನೇಂದ್ರ ಎಚ್ಚರಿಕೆ

Last Updated : Jan 21, 2022, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.