ETV Bharat / state

ಅಂಗನವಾಡಿ ಮೇಲ್ವಿಚಾರಕಿ ಕಣ್ಣಿಗೆ ಖಾರದ ಪುಡಿ ಎರಚಿ ಸರ ಕಿತ್ತುಕೊಂಡ ದುಷ್ಕರ್ಮಿಗಳು

author img

By

Published : Aug 25, 2021, 12:19 PM IST

ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ಯಲಹಂಕ-ಮಾವಳ್ಳಿಪುರ ರಸ್ತೆ ಬಳಿ ಮಹಿಳೆಯನ್ನು ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

rajanukunte police station
ರಾಜಾನುಕುಂಟೆ ಪೊಲೀಸ್ ಠಾಣೆ

ಬೆಂಗಳೂರು/ಯಲಹಂಕ: ಅಂಗನವಾಡಿಗೆ ಭೇಟಿ ನೀಡಲು ತೆರಳುತ್ತಿದ್ದ ಮೇಲ್ವಿಚಾರಕಿ (ಸೂಪರ್​ವೈಸರ್) ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಯಲಹಂಕ ತಾಲೂಕಿನ ಲಿಂಗರಾಜಪುರಂನಲ್ಲಿ ನಡೆದಿದೆ.

ಹೆಸರಘಟ್ಟ ಅಂಗನವಾಡಿ ಸೂಪರ್​ವೈಸರ್ ಆಗಿರುವ ನಂದಿನಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ಯಲಹಂಕ- ಮಾವಳ್ಳಿಪುರ ರಸ್ತೆ ಬಳಿ ಆಕೆಯನ್ನು ಅಡ್ಡಗಟ್ಟಿ, ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡಿದ್ದಾರೆ.

ನಂತರ ಅಂಗನವಾಡಿ ಸೂಪರ್​ವೈಸರ್​ಅನ್ನು ಹಳ್ಳಕ್ಕೆ ತಳ್ಳಿದ ಖದೀಮರು, ಮತ್ತೊಂದು ಕಾರು ಬರುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.