ETV Bharat / state

ಸಂಪತ್ ರಾಜ್ ಪರಾರಿ ಪ್ರಕರಣ: ಆಸ್ಪತ್ರೆ ಹೆಚ್​ಒಡಿ ಹೇಳಿಕೆ ದಾಖಲಿಸಿಕೊಂಡ ಸಿಸಿಬಿ

author img

By

Published : Nov 3, 2020, 6:50 PM IST

ಮಾಜಿ ಮೇಯರ್ ಸಂಪತ್ ರಾಜ್​​​ಗೆ ಚಿಕಿತ್ಸೆ ನೀಡಿದ ಸಂಬಂಧ ವೈದ್ಯರು ಸಿಸಿಬಿ ತನಿಖಾಧಿಕಾರಿಗಳಿಗೆ ಪತ್ರದ ಮುಖೇನ ವಿವರಣೆ ನೀಡಿದ್ದಾರೆ. ಸೆಪ್ಟೆಂಬರ್​​​ 14ರಿಂದ 29ರವರೆಗೂ ಕೋವಿಡ್ ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 2ನೇ ಬಾರಿ ಅಕ್ಟೋಬರ್ 4ರಿಂದ 14ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ccb-records-the-hospital-hod-statement-on-case-of-sampath-raj-escape
ಆಸ್ಪತ್ರೆ ಎಚ್ಓಡಿ ಹೇಳಿಕೆ ದಾಖಲಿಸಿಕೊಂಡ ಸಿಸಿಬಿ

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ‌ಯಿಟ್ಟ ಪ್ರಕರಣ ಸಂಬಂಧ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಹೆಚ್​ಒಡಿ ಬೆಂಜಮಿನ್ ಸೇರಿ ಹಲವರಿಂದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್​​​ಗೆ ಚಿಕಿತ್ಸೆ ನೀಡಿದ ಸಂಬಂಧ ವೈದ್ಯರು ಸಿಸಿಬಿ ತನಿಖಾಧಿಕಾರಿಗಳಿಗೆ ಪತ್ರದ ಮೂಲಕ ವಿವರಣೆ ನೀಡಿದ್ದಾರೆ. ಸೆಪ್ಟೆಂಬರ್​​​ 14ರಿಂದ 29ರವರೆಗೂ ಕೋವಿಡ್ ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 2ನೇ ಬಾರಿ ಅಕ್ಟೋಬರ್ 4ರಿಂದ 14ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಸಂಪತ್ ರಾಜ್​​​​ರನ್ನು ಡಿಸ್ಚಾರ್ಜ್ ಮಾಡುವ ವೇಳೆ ಮಾಹಿತಿ‌ ನೀಡುವಂತೆ ಆಸ್ಪತ್ರೆಗೆ ಸಿಸಿಬಿ ಮನವಿ ಮಾಡಿತ್ತು. ಆದರೆ ನಾಲ್ಕು ಬಾರಿ ಆಡ್ಮಿಟ್ ಆಗಿ ಡಿಸ್ಚಾರ್ಜ್ ಮಾಡುವಾಗಲೂ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರು. ಮಾಜಿ‌ ಮೇಯರ್​ಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿನ್ನೆ ಸಿಸಿಬಿ ಕಚೇರಿಗೆ ಕರೆಯಿಸಿ ವಿಚಾರಣೆ ನಡೆಸಲಾಗಿತ್ತು.

ಸಂಪತ್ ರಾಜ್ ತಪ್ಪಿಸಿಕೊಳ್ಳುವಾಗ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.