ETV Bharat / state

ಶಾಸಕರ ಆಪ್ತನಾಗಲು ಗೋಪಾಲಕೃಷ್ಣಗೆ ಖೆಡ್ಡಾ ತೋಡಿದನಾ ಕುಳ್ಳ ದೇವರಾಜ್‌!?

author img

By

Published : Dec 1, 2021, 3:17 PM IST

ಪೊಲೀಸರು ವಿಚಾರಣೆಗಾಗಿ ಕಾಂಗ್ರೆಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್‌ನನ್ನು ಕರೆಸಿದ್ದರು. ನಿನ್ನೆ ರಾತ್ರಿಯೇ ಗೋಪಾಲಕೃಷ್ಣರನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ಕುಳ್ಳ ದೇವರಾಜ್ ವಿಚಾರಣೆಯನ್ನು ಮುಂದುವರೆಸಿದ್ದಾರೆ..

CCB drill to Kulla Devaraj over Conspiracy of MLA murder
ಶಾಸಕನ ಹತ್ಯೆಗೆ ಸಂಚು ಆರೋಪ

ಬೆಂಗಳೂರು : ಬಿಜೆಪಿ ಶಾಸಕ ಎಸ್‌ ಆರ್‌ ವಿಶ್ವನಾಥ್ ಹತ್ಯೆಯ ಬಗ್ಗೆ ಮಾತನಾಡಿದ್ದರೆಂಬ ಕಾರಣಕ್ಕೆ ರೌಡಿಶೀಟರ್ ಸೇರಿ ಕಾಂಗ್ರೆಸ್ ಮುಖಂಡನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಳ್ಳ ದೇವರಾಜ್ ಎಂಬ ರೌಡಿಯ ಸ್ಟಿಂಗ್ ವಿಡಿಯೋ ಮಾಡುವ ಮೂಲಕ ವಿಶ್ವನಾಥ್‌ಗೆ ಆಪ್ತನಾಗಲು ಮಾಸ್ಟರ್ ಫ್ಲ್ಯಾನ್ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ವಿಚಾರಣೆಗಾಗಿ ಕಾಂಗ್ರೆಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್‌ನನ್ನು ಕರೆಸಿದ್ದರು. ನಿನ್ನೆ ರಾತ್ರಿಯೇ ಗೋಪಾಲಕೃಷ್ಣರನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ಕುಳ್ಳ ದೇವರಾಜ್ ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕುಳ್ಳ ವೆಂಕಟೇಶ್ ಮರ್ಡರ್ ಮಾಡಿದ್ದು ನಾನೇ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದವನ ಬಂಧನ

ಸ್ಟಿಂಗ್ ಮಾಡುವ ಉದ್ದೇಶದಿಂದ ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ ಬಳಿ ಎತ್ತಿ ಕಟ್ಟಿದ್ದ ಕುಳ್ಳ ದೇವರಾಜ, ತಾನು ವಿಶ್ವನಾಥ್ ಬೆಂಬಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದ.

ವಿಡಿಯೋ ಪರಿಶೀಲನೆ ನಡೆಸಿರುವ ಪೊಲೀಸರು ಹತ್ಯೆಗೆ ಪ್ರಚೋದನೆ ನೀಡಿರುವ ಕಾರಣದಿಂದಾಗಿ ಕುಳ್ಳ ದೇವರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.