ETV Bharat / state

ಕೆಐಎಎಲ್‌ನಲ್ಲಿ ಸರಕು ನಿರ್ವಹಣೆ ಗುತ್ತಿಗೆ ಅವಧಿ ಪೂರ್ಣ ಬಳಿಕ ಮುಂದುವರೆಸಲಾಗದು: ಹೈಕೋರ್ಟ್

author img

By

Published : May 25, 2023, 7:24 AM IST

ಕೆಐಎಎಲ್‌ನಲ್ಲಿ ಸರಕು ನಿರ್ವಹಣೆ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಮುಂದುವರೆಸಲಾಗದು ಎಂದು ಹೈಕೋರ್ಟ್ ಹೇಳಿದೆ.

Cargo handling contract period completion  completion after cannot be extended at KIAL  High court  ಕೆಐಎಎಲ್‌ನಲ್ಲಿ ಸರಕು ನಿರ್ವಹಣೆ ಗುತ್ತಿಗೆ ಅವಧಿ ಪೂರ್ಣ  ಅವಧಿ ಪೂರ್ಣಗೊಂಡ ಬಳಿಕ ಮುಂದುವರೆಸಲಾಗದು  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಏಕ ಸದಸ್ಯಪೀಠ ನೀಡಿರುವ ಆದೇಶ ಊರ್ಜಿತವಾಗುವುದಿಲ್ಲ  ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ
ಕೆಐಎಎಲ್‌ನಲ್ಲಿ ಸರಕು ನಿರ್ವಹಣೆ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಮುಂದುವರೆಸಲಾಗದು

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ನಿರ್ವಹಣೆ ಕುರಿತಂತೆ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಸಹ ಹಿಂದಿನ ಗುತ್ತಿಗೆದಾರರೇ ಸೇವೆ ಮುಂದುವರಿಸಲು ಅವಕಾಶ ನೀಡಿ ಏಕ ಸದಸ್ಯಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ವಿಶೇಷ ವಿಭಾಗೀಯ ಪೀಠ, ಏಕ ಸದಸ್ಯಪೀಠ ನೀಡಿರುವ ಆದೇಶ ಊರ್ಜಿತವಾಗುವುದಿಲ್ಲ. ಆದ್ದರಿಂದ ಅದನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ, ಏಕ ಸದಸ್ಯಪೀಠ ತನ್ನ ವ್ಯಾಪ್ತಿಯನ್ನು ಮೀರಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ವಿಮಾನ ನಿಲ್ದಾಣದಲ್ಲಿ ಸರಕು ನಿರ್ವಹಣೆ ಗುತ್ತಿಗೆಯನ್ನು ಮೆಂಜೀಸ್ ಏವಿಯೇಷನ್ ಬೊಬ್ಬಾ ಪ್ರವೈಟ್ ಲಿಮಿಟೆಡ್‌ಗೆ ನೀಡಲಾಗಿತ್ತು. ಈ ಸಂಸ್ಥೆಯ ಸೇವಾವಧಿ 2023ರ ಮೇ 23 ರ ಮಧ್ಯರಾತ್ರಿ ಕೊನೆಗೊಂಡಿದೆ. ಆದರೆ ಗುತ್ತಿಗೆ ಮುಂದುವರಿಸದ ಕ್ರಮ ಪ್ರಶ್ನಿಸಿ ಮೆಂಜೀಸ್ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಗುತ್ತಿಗೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಅಲ್ಲದೆ, ಹೊಸ ಗುತ್ತಿಗೆದಾರರಿಗೆ ನೀಡಿರುವ ಆದೇಶವನ್ನು ಅಮಾನತ್ತಿನಲ್ಲಿರಿಸಿ ಹಳೆಯ ಗುತ್ತಿಗೆದಾರರ ಸೇವೆ ಮುಂದುವರಿಸುವಂತೆ ಸೂಚನೆ ನೀಡಿತ್ತು. ಅದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ವಿಮಾ ನಿಲ್ದಾಣ ಲಿಮಿಟೆಡ್ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ಆದೇಶ

ಇದನ್ನೂ ಓದಿ: ಉದ್ಯೋಗದಾತರು - ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.