ETV Bharat / state

ಕಾರಿನ ಚಕ್ರ ಸ್ಫೋಟಗೊಂಡು ಅಪಘಾತ; ಉದ್ಯಮಿ ಸಾವು, ಮೂವರಿಗೆ ಗಾಯ

author img

By

Published : Mar 7, 2021, 10:41 PM IST

ದಾಸರಹಳ್ಳಿಯಲ್ಲಿ ಅಂಗಡಿ ಹೊಂದಿರುವ ಉದ್ಯಮಿ ಪವನ ಕುಮಾರ್ ಎಂಬುವರು ಕುಟುಂಬ ಸಮೇತರಾಗಿ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ದೇವಾಲಯವೊಂದಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನ ಚಕ್ರ ಸ್ಫೋಟ ಸ್ಥಳದಲ್ಲೇ ಉದ್ಯಮಿ ಸಾವು
ಕಾರಿನ ಚಕ್ರ ಸ್ಫೋಟ ಸ್ಥಳದಲ್ಲೇ ಉದ್ಯಮಿ ಸಾವು

ಬೆಂಗಳೂರು: ಕುಟುಂಬ ಸಮೇತರಾಗಿ ದೇವಾಲಯಕ್ಕೆ ಹೋಗುತ್ತಿದ್ದ ವೇಳೆ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿದ್ದು, ಉದ್ಯಮಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಹಾಗೂ ಮಕ್ಕಳು ಗಾಯಗೊಂಡಿದ್ದಾರೆ.

ಟಿ. ದಾಸರಹಳ್ಳಿ ನಿವಾಸಿ ಪವನ ಕುಮಾರ ಜೈನ್ (48) ಮೃತಪಟ್ಟವರು. ಇವರ ಪತ್ನಿ ಪುಷ್ಪಾ ಜೈನ್ (40), ಪುತ್ರ ವಿನಿತ್ ಜೈನ್ (23), ಮಗಳು ವರ್ಷಾ ಜೈನ್ (18) ಗಾಯಗೊಂಡಿದ್ದಾರೆ. ಕೋಡಿಗೆಹಳ್ಳಿ ಗೇಟ್ ಬಳಿ ಭಾನುವಾರ ಮಧ್ಯಾಹ್ನ 12.45ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಓದಿ:ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹೋದರ ಮುತ್ತು ಮೀರನ್ ನಿಧನ

ದಾಸರಹಳ್ಳಿಯಲ್ಲಿ ಅಂಗಡಿ ಹೊಂದಿರುವ ಮೃತ ಪವನ ಕುಮಾರ್ ಅವರು ಕುಟುಂಬ ಸಮೇತರಾಗಿ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ದೇವಾಲಯವೊಂದಕ್ಕೆ ತೆರಳಲು ಮುಂದಾಗಿದ್ದರು. ಭಾನುವಾರ ಮಧ್ಯಾಹ್ನ ದಾಸರಹಳ್ಳಿಯಿಂದ ತಮ್ಮ ಆಲ್ಟೋ ಕಾರಿನಲ್ಲಿ ಕೃಷ್ಣಗಿರಿಗೆ ಪತ್ನಿ ಮಕ್ಕಳೊಂದಿಗೆ ಹೊರಟಿದ್ದರು. ಕೋಡಿಗೆಹಳ್ಳಿ ಗೇಟ್ ಬಳಿ ಪವನ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಕೋಡಿಗೆಹಳ್ಳಿ ಗೇಟ್ ಸಮೀಪ ಏಕಾಏಕಿ ಕಾರಿನ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮೂರು-ನಾಲ್ಕು ಬಾರಿ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.

ಪವನ ಸ್ಥಳದಲ್ಲೇ ಮೃತಪಟ್ಟರೆ, ಇವರ ಪತ್ನಿ ಹಾಗೂ ಮಕ್ಕಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರಿನ ಚಕ್ರ ಹಳೆಯದಾಗಿ ತಾಪಮಾನಕ್ಕೆ ಒಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.