ETV Bharat / state

ಪಾಕಿಸ್ತಾನದಂತಹ ಮನಸ್ಥಿತಿ ಭಾರತದಲ್ಲಿ ಇದ್ದಿದ್ದರೆ ಭಗವಾನ್ ಉಳಿಯುತ್ತಿರಲಿಲ್ಲ: ಸಿ.ಟಿ.ರವಿ

author img

By

Published : Feb 5, 2021, 3:16 PM IST

ಭಗವಾನ್ ಪುಣ್ಯ, ಅವರು ಭಾರತದಲ್ಲಿ ಹುಟ್ಟಿದ್ದಾರೆ. ಆ ಹೇಳಿಕೆಗಳನ್ನು ಅವರ ಅಪ್ಪ- ಅಮ್ಮ ಸಹ ಒಪ್ಪಲ್ಲ. ಸಹನೆಯನ್ನು ದೌರ್ಬಲ್ಯ ಅಂತ ತಿಳಿಬಾರದು ಎಂದು ಸಿ.ಟಿ.ರವಿ ಹೇಳಿದರು.

c-t-ravi
ಸಿ.ಟಿ.ರವಿ

ಬೆಂಗಳೂರು: ಪಾಕಿಸ್ತಾನದಂತಹ ಮನಸ್ಥಿತಿ ಭಾರತದಲ್ಲಿ ಇದ್ದಿದ್ದರೆ ಎಲ್ಲಿ ಭಗವಾನ್ ಉಳಿಯುತ್ತಿದ್ದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಗವಾನ್​​ಗೆ ಮಸಿ ಬಳಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಮಸಿ ಬಳಿಯೋದನ್ನು ನಾವು ಸಮರ್ಥನೆ ಮಾಡಲ್ಲ. ಆದ್ರೆ ಭಗವಾನ್ ಅವರ ಹೇಳಿಕೆಗಳನ್ನು ಯಾರೂ ಒಪ್ಪಲ್ಲ. ಪಾಕಿಸ್ತಾನದಂತಹ ದೇಶಗಳಲ್ಲಿ ಅವರು ಈ ರೀತಿ ಮಾತನಾಡಿದ್ರೆ ಇಷ್ಟೊತ್ತಿಗೆ ಭಗವಾನ್ ತಲೆ ತೆಗೆಯುತ್ತಿದ್ದರು. ಪಾಕಿಸ್ತಾನದಂತಹ ಮನಸ್ಥಿತಿ ಭಾರತದಲ್ಲಿ ಇಲ್ಲ. ಒಂದು ವೇಳೆ ಆ ಮನಸ್ಥಿತಿ ಇದ್ದಿದ್ದರೆ ಅವರ ಪೋಟೋಗೆ ಹಾರ ಹಾಕಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಭಗವಾನ್ ಮುಖಕ್ಕೆ ಮಸಿ ಬಳಿದಿರುವ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ಭಗವಾನ್ ಪುಣ್ಯ, ಅವರು ಭಾರತದಲ್ಲಿ ಹುಟ್ಟಿದ್ದಾರೆ. ಆ ಹೇಳಿಕೆಗಳನ್ನು ಅವರ ಅಪ್ಪ- ಅಮ್ಮ ಸಹ ಒಪ್ಪಲ್ಲ. ಸಹನೆಯನ್ನು ದೌರ್ಬಲ್ಯ ಅಂತ ತಿಳಿಬಾರದು ಎಂದರು.

ರೈತರು ಚಳುವಳಿಯ ಭಾಗವಾಗಿಲ್ಲ: ರೈತರು ಚಳುವಳಿಯ ಭಾಗವಾಗಿಲ್ಲ. ರೈತರ ಹೆಸರಲ್ಲಿ ರಾಜಕೀಯ, ದೇಶ ವಿರೋಧಿಗಳು ಪ್ರತಿಭಟನೆ ಮಾಡ್ತಿದ್ದಾರೆ ಎಂದು ದೂರಿದರು.

ನಾವು ಹತ್ತಾರು ಭಾರಿ ಪ್ರಶ್ನೆ ಕೇಳಿದ್ದೇವೆ. ಮೂರು ಕಾಯ್ದೆಗಳಲ್ಲಿ ರೈತ ವಿರೋಧಿ ನೀತಿ ಎಲ್ಲಿದೆ?. ಅತಿ ಹೆಚ್ಚು ರೈತರ ಪರ ಕೆಲಸ ಮಾಡಿರೋದು ಬಿಜೆಪಿ ಸರ್ಕಾರ. ಕಾಂಟ್ರಾಕ್ಟ್ ಫಾರ್ಮಿಂಗ್ ರೈತರ ಹೆಸರಲ್ಲಿ ಅರಾಜಕತೆ ಅಲ್ಲ ಎಂದರು.

ರೋಹಿತ್ ಮೋವೆ ಹತ್ಯೆ ಸೇರಿದಂತೆ ಹಲವು ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ರು. ಸಿಎಎನಲ್ಲಿ ಪಾಕಿಸ್ತಾನಕ್ಕೆ ಓಡಿಸ್ತಾರೆ ಅಂತ ಪ್ರಚೋದನೆ ಮಾಡಿ‌ ಪ್ರತಿಭಟನೆ ಕೂತರು. ಏನಾಯಿತು?. ಈ ಕಾಯ್ದೆ ತಂದು ಏಳು ತಿಂಗಳಾಯ್ತು. ಆದರೂ ಬಹುತೇಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಜನರು, ರೈತರು ನಮ್ಮ ಸರ್ಕಾರದ ಪರ ನಿಂತಿದ್ದಾರೆ. ಜಾಬ್ ಕ್ರಿಯೇಟ್ ಆಗಲು ಈ ಕಾಯ್ದೆ ಜಾರಿಗೆ ತಂದಿರೋದು. ಅವರಿಗೆ ಸತ್ಯ ಗೊತ್ತಿದ್ದೂ ವಿರೋಧ ಮಾಡುತ್ತಿದ್ದಾರೆ ಎಂದರು.

ಓದಿ: ಮೈಸೂರು: ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..!

ರೈತರು ಬೆಳೆದ ಅನ್ನ ತಿನ್ನುವವರು ರೈತರ ಹೋರಾಟಕ್ಕೆ ಬೆಂಬಲಿಸುವಂತೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ಬೆಂಬಲಿಸಲಿ. ರೈತರ ಹೆಸರಲ್ಲಿ ಬೇರೆಯವರು ಮಾಡೋ ಪ್ರತಿಭಟನೆಗೆ ಬೆಂಬಲ ಬೇಡ. ರೈತರ ಹೆಸರಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಶಿರಾದಲ್ಲಿ ಈ ಬಗ್ಗೆ ಭಾಷಣ ಮಾಡಿದ್ರು. ಉಪ ಚುನಾವಣೆಯಲ್ಲಿ ಏನಾಯಿತು.? ರೈತರೇ ಬೇರೆ, ರೈತರ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿರೋರೇ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.