ಕೋವಿಡ್​ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಧನಾದೇಶ ವಿತರಣೆ ಮಾಡಿದ ಬಿಎಂಟಿಸಿ

author img

By

Published : Dec 2, 2021, 8:49 PM IST

BMTC

ಮೊದಲನೇ ಅಲೆ ಸಂದರ್ಭ ಸಾಕಷ್ಟು ಸಿಬ್ಬಂದಿ ಕೋವಿಡ್​ಗೆ ತುತ್ತಾಗಿ ಮೃತಪಟ್ಟಿದ್ದರು. ಇದೀಗ ಬಿಎಂಟಿಸಿ ಮೃತರ ಕುಟುಂಬಕ್ಕೆ ಧನಾದೇಶ ಬಿಡುಗಡೆ ಮಾಡಿದೆ.

ಬೆಂಗಳೂರು: ಕೋವಿಡ್​ನಿಂದ ಮೃತಪಟ್ಟವರ ಅವಲಂಬಿತರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಧನಾದೇಶ ವಿತರಣೆ ಮಾಡಿದೆ. ಕೋವಿಡ್-19 1ನೇ ಮತ್ತು 2ನೇ ಅಲೆಯಲ್ಲಿ ಮೃತಪಟ್ಟ 101 ನೌಕರರ ಅವಲಂಬಿತರಿಗೆ ಸಂಸ್ಥೆಯಿಂದ ನೀಡಬೇಕಾದ ಸೌಲಭ್ಯಗಳಾದ ಉಪಧನ, ರಜೆ ನಗದೀಕರಣ ಮಾಡಲಾಗಿದೆ.

ಅಲ್ಲದೆ ವೈದ್ಯಕೀಯ ಅಸಮರ್ಥನಾ ನಿಧಿ, ಭವಿಷ್ಯ ನಿಧಿ, ಸ್ವಯಂಪ್ರೇರಿತ ಭವಿಷ್ಯ ನಿಧಿ ಮತ್ತು ವೈದ್ಯಕೀಯ ವೆಚ್ಚದ ಸುಮಾರು ರೂ.11.62 ಕೋಟಿಗಳ ಧನಾದೇಶನಗಳನ್ನು ನೌಕರರ ನಾಮ ನಿದೇರ್ಶನದಾರರಿಗೆ ಕಳೆದ ಮೂರು ದಿನಗಳಲ್ಲಿ ವಿತರಿಸಲಾಗಿದೆ. ಹಾಗೂ ಸದರಿ ಅವಲಂಬಿತರಿಗೆ ಸಂಸ್ಥೆಯಿಂದ ಬಾಕಿ ಪಾವತಿ ಯಾವುದೂ ಇರುವುದಿಲ್ಲ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

BMTC Notification
ಬಿಎಂಟಿಸಿ ಅಧಿಸೂಚನೆ

ಕೋವಿಡ್ ಮೊದಲ ಹಾಗೂ 2ನೇ ಅಲೆ ಸಂದರ್ಭ ತುರ್ತು ಸೇವೆಗಾಗಿ ಹಾಗೂ ಕೆಲಸಕಾರ್ಯಗಳಿಗಾಗಿ ಸಾರಿಗೆ ವ್ಯವಸ್ಥೆಗೆ ಬಿಎಂಟಿಸಿ ಅನ್ನು ಆರಂಭಿಸಲಾಗಿತ್ತು. ಓಲ್ಡ್ ವಾರಿಯರ್​​ಗಳಿಗೆ ಆದ್ಯತೆ ಮೇರೆಗೆ 2ನೇ ಅಲೆ ಸಂದರ್ಭ ವ್ಯಾಕ್ಸಿನೇಷನ್ ನೀಡಲಾಗಿತ್ತು. ಆದರೆ, ಮೊದಲನೇ ಅಲೆ ಸಂದರ್ಭ ಸಾಕಷ್ಟು ಸಿಬ್ಬಂದಿ ಕೋವಿಡ್​​​ಗೆ ತುತ್ತಾಗಿ ಮೃತಪಟ್ಟಿದ್ದರು. ಇದೀಗ ಬಿಎಂಟಿಸಿ ಮೃತರ ಕುಟುಂಬಕ್ಕೆ ಧನಾದೇಶ ಬಿಡುಗಡೆ ಮಾಡಿದೆ.

ಓದಿ: ಇನ್ಫೋಸಿಸ್ ಪ್ರಶಸ್ತಿ - 2021: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಪ್ರಶಸ್ತಿ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.