ETV Bharat / state

ಕೈ-ಕಮಲ ಟ್ವೀಟ್‌ ವಾರ್‌.. ಮೋದಿ ದೇಶಕ್ಕೆ ಸಮರ್ಪಿತ ಜೀವ, ತನ್ನ ಕುಟುಂಬಕ್ಕಲ್ಲ ಎಂದು ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು!

author img

By

Published : Oct 18, 2021, 7:22 PM IST

Updated : Oct 18, 2021, 11:00 PM IST

ಏನೇ ಹೇಳಿ ಫೀಲ್ಡ್‌ನಲ್ಲಿ ನಾಯಕರ ಕಾದಾಟಕ್ಕಿಂತಲೂ ಸೋಷಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಟ್ವಿಟರ್‌ ಖಾತೆಗಳ ಮೂಲಕ ನಡೆಯುತ್ತಿರುವ ಸಮರ ಸಾಕಷ್ಟು ಗಮನ ಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲನ್ನ ಕಾಂಗ್ರೆಸ್‌ ಎಳೆಯೋಕೆ ಮುಂದಾಗಿದೆ. ಆದರೆ, ಅಷ್ಟೇ ತೀವ್ರವಾಗಿಯೇ ಬಿಜೆಪಿ ಮೋದಿ ಅವರನ್ನ ಸಮರ್ಥಿಸಿಕೊಂಡು ಕೈಗೆ ಎದುರೇಟು ನೀಡ್ತಿದೆ.. ಕೈ-ಕಮಲ ಟ್ವೀಟ್‌ ವಾರ್‌ ಹೀಗಿವೆ..

ಕೈ ಗೆ ಬಿಜೆಪಿ ತಿರುಗೇಟು
ಕೈ ಗೆ ಬಿಜೆಪಿ ತಿರುಗೇಟು

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಮೋದಿ ಅವರನ್ನು ಸಮರ್ಥಿಸಿಕೊಂಡು ಪ್ರತ್ಯುತ್ತರ ನೀಡಿದೆ.

ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್‌ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ ಎಂದು ತಿರುಗೇಟು ನೀಡಿದೆ.

  • Dear @INCKarnataka,

    ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ.

    √ ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ.

    √ ಬಾರ್‌ನಲ್ಲಿ ಡ್ಯಾನ್ಸ್‌ ಮಾಡಲಿಲ್ಲ.

    √ ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ.

    ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ. pic.twitter.com/fM9GJPpwWC

    — BJP Karnataka (@BJP4Karnataka) October 18, 2021 " class="align-text-top noRightClick twitterSection" data=" ">

ಅತ್ಯುತ್ತಮ ರಾಡಾರ್ ತಜ್ಞರು ಮೋದಿ : ಬಿಜೆಪಿಯ ಈ ಟ್ಟೀಟ್​ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹೌದು ನಿಮ್ಮ ಹೆಬ್ಬೆಟ್ಟು ಗಿರಾಕಿ ನಿಜಕ್ಕೂ ವಿಭಿನ್ನ, ಕೈಹಿಡಿದವರಿಗೆ ಕೈಕೊಟ್ಟವರು, ಪರಸ್ತ್ರೀ ಮೇಲೆ ಗೂಢಾಚಾರಿಕೆ ನಡೆಸಿದವರು, ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!, ಈಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು, ಅತ್ಯುತ್ತಮ ರಾಡಾರ್ ತಜ್ಞರು! ಎಂದು ವ್ಯಂಗ್ಯವಾಡಿದೆ.

  • ಹೌದು @BJP4Karnataka ನಿಮ್ಮ #ಹೆಬ್ಬೆಟ್‌ಗಿರಾಕಿಮೋದಿ ನಿಜಕ್ಕೂ ವಿಭಿನ್ನ,

    √ಕೈಹಿಡಿದವರಿಗೆ ಕೈಕೊಟ್ಟವರು

    √ಪರಸ್ತ್ರೀ ಮೇಲೆ ಗೂಡಾಚಾರಿಕೆ ನಡೆಸಿದವರು

    √ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!

    √ಈ ಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು

    √ಅತ್ಯತ್ತಮ ರಾಡರ್ ತಜ್ಞರು! pic.twitter.com/Ar6XYUQGit

    — Karnataka Congress (@INCKarnataka) October 18, 2021 " class="align-text-top noRightClick twitterSection" data=" ">

ಓದಿ: ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಬಂಡವಾಳ! ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕೈ ಆಕ್ರೋಶಕಾರಿ ಟ್ವೀಟ್​

Last Updated : Oct 18, 2021, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.