ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ: ಬಿಜೆಪಿ ಟ್ವೀಟ್

author img

By

Published : Jan 21, 2023, 9:06 PM IST

bjp-tweet-on-congress

ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ - ಕಾಂಗ್ರೆಸ್ ಸೋಲಿಸಲು ಕೆಸಿಆರ್ ಜೊತೆ 500 ಕೋಟಿ ರೂ. ಒಳ ಒಪ್ಪಂದ - ರಾಜ್ಯ ಬಿಜೆಪಿ ಟ್ವೀಟ್​

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮೂಲಕ ಟೀಕಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕೆಸಿಆರ್ ಜೊತೆ 500 ಕೋಟಿ ರೂ. ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿಕೆಯನ್ನು ಉಲ್ಲೇಖಿಸುತ್ತಾ ರಾಜ್ಯ ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ. ಈ ಬಗ್ಗೆ ಕಾಂಗ್ರೆಸ್ ತೆಲಂಗಾಣ ಅಧ್ಯಕ್ಷರಾದ ರೇವಂತ್ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಕೆಸಿಆರ್‌ ಜತೆ 500 ಕೋಟಿಗೆ ಒಳಒಪ್ಪಂದ ಮಾಡಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿದೆ.

  • ತಿಂಗಳ ಹಿಂದೆ @BZZameerAhmedK ತೆಲಂಗಾಣಕ್ಕೆ ಹೋಗಿ ಕೆಸಿಆರ್‌ ಭೇಟಿ ಮಾಡಿ ಬಂದಿದ್ದರು. ವ್ಯವಹಾರಸ್ಥ ಜಮೀರ್‌ ಅವರು ರಾಜಕೀಯ ಚತುರರು. ಮಾತೃ ಪಕ್ಷಕ್ಕೆ ಚಳ್ಳೆ ಹಣ್ಣು ತಿನ್ನಿಸಿಯೇ ಕಾಂಗ್ರೆಸ್‌ ಸೇರಿದವರು. ಆದರೆ @DKShivakumar ಎದುರು ಜೀ ಹುಜೂರ್‌ ಎಂದು ನಿಲ್ಲುವ ವ್ಯಕ್ತಿಯಲ್ಲ. #CongVsSidduVsDK
    2/4

    — BJP Karnataka (@BJP4Karnataka) January 21, 2023 " class="align-text-top noRightClick twitterSection" data=" ">

ತಿಂಗಳ ಹಿಂದೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ತೆಲಂಗಾಣಕ್ಕೆ ಹೋಗಿ ಕೆಸಿಆರ್‌ ಭೇಟಿ ಮಾಡಿ ಬಂದಿದ್ದರು. ವ್ಯವಹಾರಸ್ಥ ಜಮೀರ್‌ ಅವರು ರಾಜಕೀಯ ಚತುರರು. ಮಾತೃ ಪಕ್ಷಕ್ಕೆ ಚಳ್ಳೆ ಹಣ್ಣು ತಿನ್ನಿಸಿಯೇ ಕಾಂಗ್ರೆಸ್‌ ಸೇರಿದವರು. ಆದರೆ ಡಿ.ಕೆ.ಶಿವಕುಮಾರ್ ಎದುರು ಜೀ ಹುಜೂರ್‌ ಎಂದು ನಿಲ್ಲುವ ವ್ಯಕ್ತಿಯಲ್ಲ ಎಂದು ಕಿಡಿ ಕಾರಿದೆ. ಜಮೀರ್ ಅಹಮ್ಮದ್ ತೆಲಂಗಾಣಕ್ಕೆ ಹೋಗಿ ಬಂದದ್ದು, ರೇವಂತ್‌ ರೆಡ್ಡಿ ಹೇಳಿಕೆಯ ನಂತರ ಹಠಾತ್ತಾಗಿ ಸಿದ್ದರಾಮಯ್ಯ ಭೇಟಿ ಮಾಡಿದ್ದನ್ನು ಕಾಣುವಾಗ ಅಲ್ಲೊಂದು ಗುಪ್ತ ವ್ಯವಹಾರ ನಡೆದಂತೆ ಕಾಣುತ್ತದೆ.

  • '@BZZameerAhmedK ತೆಲಂಗಾಣಕ್ಕೆ ಹೋಗಿ ಬಂದದ್ದು, ರೇವಂತ್‌ ರೆಡ್ಡಿ ಹೇಳಿಕೆಯ ನಂತರ ಹಠಾತ್ತಾಗಿ @siddaramaiah ಭೇಟಿ ಮಾಡಿದ್ದನ್ನು ಕಾಣುವಾಗ ಅಲ್ಲೊಂದು ಗುಪ್ತ ವ್ಯವಹಾರ ನಡೆದಂತೆ ಕಾಣುತ್ತದೆ. ಒಡೆದು ಆಳುವ ನೀತಿ ಪರಿಪಾಲಿಸಿದರೆ ಸ್ವತಃ ಒಡೆಯುವುದು ಖಚಿತ ಎಂಬುದಕ್ಕೆ ಕಾಂಗ್ರೆಸ್ಸೇ ಉದಾಹರಣೆ.#CongVsSidduVsDK
    3/4

    — BJP Karnataka (@BJP4Karnataka) January 21, 2023 " class="align-text-top noRightClick twitterSection" data=" ">

ಒಡೆದು ಆಳುವ ನೀತಿ ಪರಿಪಾಲಿಸಿದರೆ ಸ್ವತಃ ಒಡೆಯುವುದು ಖಚಿತ ಎಂಬುದಕ್ಕೆ ಕಾಂಗ್ರೆಸ್ಸೇ ಉದಾಹರಣೆ ಎಂದು ಆರೋಪಿಸಿದೆ. ಆದರೆ ಡಿಕೆಶಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರ ಆಪ್ತ ರೇವಂತ್ ರೆಡ್ಡಿ ಒಳ ಒಪ್ಪಂದದ ವಿವರ ಹೊರಹಾಕಿದ್ದಾರೆ. ಇಂಥ ತೆರೆಮರೆಯ ಕಸರತ್ತು ಮಾಡುವ ಪಕ್ಷಗಳು ಯಾವತ್ತಿದ್ದರೂ ಅಭಿವೃದ್ಧಿ ವಿರೋಧಿ ಎಂಬುದನ್ನು ಇತಿಹಾಸವೇ ತಿಳಿಸುತ್ತದೆ. ಹಾಗಾಗಿ ಮತದಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.

  • ಆದರೆ @DKShivakumar ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರ ಆಪ್ತ @revanth_anumula ಒಳ ಒಪ್ಪಂದದ ವಿವರ ಹೊರಹಾಕಿದ್ದಾರೆ. ಇಂಥ ತೆರೆಮರೆಯ ಕಸರತ್ತು ಮಾಡುವ ಪಕ್ಷಗಳು ಯಾವತ್ತಿದ್ದರೂ ಅಭಿವೃದ್ಧಿ ವಿರೋಧಿ ಎಂಬುದನ್ನು ಇತಿಹಾಸವೇ ತಿಳಿಸುತ್ತದೆ. ಹಾಗಾಗಿ ಮತದಾರರು ಎಚ್ಚರಿಕೆಯಿಂದ ಇರಬೇಕು.#CongVsSidduVsDK
    4/4

    — BJP Karnataka (@BJP4Karnataka) January 21, 2023 " class="align-text-top noRightClick twitterSection" data=" ">

ಏನಿದು ಒಳ ಒಪ್ಪಂದ ಆರೋಪ?: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸುದ್ದಿಗೋಷ್ಠಿ ಇದೀಗ ದೇಶದಲ್ಲೇ ಭಾರಿ ತಲ್ಲಣ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ತೆಲಂಗಾಣ ಸಿಎಂ ಕೆ ಚಂದ್ರಶೇಕರ್ ರಾವ್, ಕರ್ನಾಟಕದ ಕಾಂಗ್ರೆಸ್ ನಾಯಕನೊಬ್ಬನ ಕರೆಸಿ ಮೂರು ಮೂರು ಬಾರಿ ಮೀಟಿಂಗ್ ನಡೆಸಿದ್ದಾರೆ. ಜೊತೆಗೆ 500 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ನಡೆದ ಬಿಎಸ್​ಆರ್ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ, ದೇವೇಗೌಡರು ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣವೇನು ಗೊತ್ತೆ?. ಪ್ರಶಾಂಕ್ ಕಿಶೋರ್ ಸೇರಿದಂತೆ ಕೆಲ ರಾಜಕೀಯ ಸ್ಟ್ರಾಟರ್ಜಿಗಳಿಂದ ಸಮೀಕ್ಷಾ ದಾಖಲೆ ಪಡೆದಿರುವ ಕೆ ಚಂದ್ರಶೇಖರ್ ರಾವ್, ಈ ಸುಪಾರಿ ತಂತ್ರ ಹೆಣೆದಿದ್ದಾರೆ.

  • కేసీఆర్ కుట్ర అంతా కాంగ్రెస్ పైనే!

    కేసీఆర్ బీజేపీ ఏజెంట్! మోడీ, అమిత్షా డైరెక్షన్లో ఓట్లు చీల్చే కథ నడుపుతున్న రింగ్ లీడర్ కేసీఆర్!

    ఈ దుర్మార్గుడు, నీచ్ కమీనే, "కచరా" యొక్క కుట్రలు మీరే వినండి! తెలంగాణ ప్రజలార!

    కేసీఆర్ తెలంగాణ ద్రోహి మాత్రమే కాదు, దేశ ప్రజల ద్రోహి కూడ! pic.twitter.com/NvaejlNbRK

    — Telangana Congress (@INCTelangana) January 18, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಕರ್ನಾಟಕದ ಕಾಂಗ್ರೆಸ್ ನಾಯಕನಿಗೆ ಜವಾಬ್ದಾರಿ: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 120 ರಿಂದ 130 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರಲ್ಲಿ ಕಡಿಮೆ ಅಂತರ ಅಂದರೆ 1,500-3,000 ಮತಗಳಿಂದ ಗೆಲ್ಲುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕರ್ನಾಟಕದ ಕಾಂಗ್ರೆಸ್ ನಾಯಕನಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. 25 ರಿಂದ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ಕೆ ಚಂದ್ರಶೇಖರ್ ರಾವ್ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕನೊಬ್ಬನನ್ನು ಇತ್ತೀಚೆಗೆ ಕೆಸಿಆರ್ ತೆಲಂಗಾಣಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲ್ಲದಂತೆ ಕೆಸಿಆರ್​ ತಂತ್ರ ಎಂದ ತೆಲಂಗಾಣದ ರೇವಂತ್ ರೆಡ್ಡಿ: ಹೆಚ್​ಡಿಕೆ ಪ್ರತಿಕ್ರಿಯೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.