ETV Bharat / state

ಕಾಂಗ್ರೆಸ್ ನೀಡಿದ ಭರವಸೆಗಳ ಪೈಕಿ ಒಂದನ್ನಾದರೂ ಸರಿಯಾಗಿ ಜಾರಿ ಮಾಡಿದೆಯೇ?: ಬಿಜೆಪಿ

author img

By

Published : Aug 31, 2022, 3:27 PM IST

ಶೇ 95 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಯಾವ ಮುಖ ಇಟ್ಟುಕೊಂಡು ಜನತೆಯ ಮುಂದೆ ಸುಳ್ಳು ಹೇಳುತ್ತಿದ್ದೀರಿ? ಎಂದು ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

BJP tweet about congress
BJP tweet about congress

ಬೆಂಗಳೂರು: ಕಾಂಗ್ರೆಸ್ ತಾನು ನೀಡಿದ ಭರವಸೆಗಳ ಪೈಕಿ ಒಂದನ್ನಾದರೂ ಸರಿಯಾಗಿ ಜಾರಿ ಮಾಡಿದೆಯೇ? ಎಂದು ಬಿಜೆಪಿ ಕೇಳಿದೆ. ಈ ಕುರಿತು ಟ್ವೀಟ್ ಮಾಡಿದ್ದು, 165 ರಲ್ಲಿ 158 ಭರವಸೆ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದು ಶತಮಾನದ ಸುಳ್ಳು. ಅಸಲಿಗೆ ಕಾಂಗ್ರೆಸ್‌ 173 ಭರವಸೆ ನೀಡಿತ್ತು. ಕಾಂಗ್ರೆಸ್‌ ಇಲ್ಲೂ ಸುಳ್ಳು ಹೇಳುತ್ತಿದೆ. 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ ಎಂದು ಟೀಕಾಸ್ತ್ರ ಪ್ರಯೋಗಿಸಿದೆ.

  • ಬೀದರ್ - ಚಾಮರಾಜನಗರ ಹೆದ್ದಾರಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಸ್ಲಂ ಮುಕ್ತ ಬೆಂಗಳೂರು ಸೇರಿದಂತೆ ಕಾಂಗ್ರೆಸ್ ಈಡೇರಿಸದ ಭರವಸೆಗಳ ಪಟ್ಟಿ ಉದ್ದವಿದೆ.

    ಯೋಜನೆಗಳ ಹೆಸರಿನಲ್ಲಿ ಮಾಡಿದ ಭ್ರಷ್ಟ ಹಣ ಕಾಂಗ್ರೆಸ್‌ ಭ್ರಷ್ಟರ ಜೇಬು ಸೇರಿದರೆ, ಉಳಿದ ಭರವಸೆಗಳು ಕಸದ ಬುಟ್ಟಿಯಲ್ಲಿದೆ.#ಕಾಂಗ್ರೆಸ್‌ಮತ್ತುಸುಳ್ಳುಗಳು‌

    — BJP Karnataka (@BJP4Karnataka) August 31, 2022 " class="align-text-top noRightClick twitterSection" data=" ">

2013 ರಲ್ಲಿ ನೀಡಲಾದ ಭರವಸೆಗಳಲ್ಲಿ 95% ರಷ್ಟನ್ನು ಕಾಂಗ್ರೆಸ್ ಈಡೇರಿಸಿದೆ ಎನ್ನುವುದೇ ಒಂದು ದೊಡ್ಡ ಸುಳ್ಳು. ಪ್ರಣಾಳಿಕೆಯಲ್ಲಿದ್ದ ಮೊತ್ತ ಮೊದಲ ಭರವಸೆಯೇ ಜಾರಿಯಾಗಿಲ್ಲ. ಘೋಷಿಸಿರುವ ಎಲ್ಲಾ ಅಂಶಗಳ ಜಾರಿ ಹಾಗೂ ಮೇಲುಸ್ತುವಾರಿಗೆ ಸಮಿತಿ ರಚಿಸುತ್ತೇವೆ ಎಂದು ಹೇಳಿ ಅದರಿಂದ ನುಣುಚಿಕೊಂಡಿತ್ತು. 2013 ರಲ್ಲಿ ಕಾಂಗ್ರೆಸ್ ಕೃಷಿ ಪಂಪ್‌ಸೆಟ್‌ ಮತ್ತು ಗೃಹ ಬಳಕೆಗೆ 24 ಗಂಟೆ ವಿದ್ಯುತ್‌ ಪೂರೈಸುವ ಭರವಸೆ ನೀಡಿತ್ತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ನೀಡಿದ್ದ ಅಷ್ಟೂ ಭರವಸೆಗಳನ್ನು ಈಡೇರಿಸಿದ್ದಾಗಿ ಭಾಷಣ ಮಾಡುತ್ತಾರೆ. ಕಾಂಗ್ರೆಸ್ ನೀಡಿದ ಭರವಸೆಗಳ ಪೈಕಿ ಒಂದನ್ನಾದರೂ ಸರಿಯಾಗಿ ಜಾರಿ ಮಾಡಿದೆಯೇ ಅನ್ನೋದು ಬಿಜೆಪಿ ಪ್ರಶ್ನೆ.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್​​ಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿ ಕಾಂಗ್ರೆಸ್ ನಾಡಿನ ಜನತೆಗೆ ಭರವಸೆ ನೀಡಿತ್ತು. ಆದರೆ, ಸಚಿವರಾಗಿದ್ದ ಆಂಜನೇಯ ಹಾಸಿಗೆ ಮತ್ತು ದಿಂಬಿನ ಹೆಸರಲ್ಲಿ ಅಕ್ರಮವೆಸಗಿ ರಾಜ್ಯದ ಹಿಂದುಳಿದ ವರ್ಗಕ್ಕೆ ಅನ್ಯಾಯ ಬಗೆದರು. ಕಾಂಗ್ರೆಸ್, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸುವ ಘೋಷಣೆ ಮಾಡಿತ್ತು. ಆದರೆ, ಇದೆಲ್ಲಾ ಘೋಷಣೆಯಲ್ಲೇ ಉಳಿದಿದೆ.

ಬೀದರ್ - ಚಾಮರಾಜನಗರ ಹೆದ್ದಾರಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಸ್ಲಂ ಮುಕ್ತ ಬೆಂಗಳೂರು ಸೇರಿದಂತೆ ಕಾಂಗ್ರೆಸ್ ಈಡೇರಿಸದ ಭರವಸೆಗಳ ಪಟ್ಟಿ ಉದ್ದವಿದೆ. ಯೋಜನೆಗಳ ಹೆಸರಿನಲ್ಲಿ ಮಾಡಿದ ಭ್ರಷ್ಟ ಹಣ ಕಾಂಗ್ರೆಸ್‌ ಭ್ರಷ್ಟರ ಜೇಬು ಸೇರಿದರೆ. ಉಳಿದ ಭರವಸೆಗಳು ಕಸದ ಬುಟ್ಟಿಯಲ್ಲಿದೆ. ಕಾಂಗ್ರೆಸ್ಸಿಗರೇ, ಶೇ.95 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಯಾವ ಮುಖ ಇಟ್ಟುಕೊಂಡು ಜನತೆಯ ಮುಂದೆ ಸುಳ್ಳು ಹೇಳುತ್ತಿದ್ದೀರಿ? ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿ ಕಾರಿದೆ.

ಇದನ್ನೂ ಓದಿ: ಆರೋಪ ಅಲ್ಲಗಳೆದ ಆನಂದ್​ ಸಿಂಗ್​: ಅಕ್ರಮ ಬಯಲಿಗೆಳೆದಿದ್ದಕ್ಕೆ ಜೀವ ಬೆದರಿಕೆ ಎಂದ ಪೋಲಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.