ETV Bharat / state

ಕಾಂಗ್ರೆಸ್ ನ 'ಸೇ ಸಿಎಂ'ಗೆ ಬಿಜೆಪಿಯಿಂದ 'ಸೇ ಸಿದ್ದು' ಗುದ್ದು

author img

By

Published : Oct 22, 2022, 10:16 PM IST

ಇತ್ತೀಚೆಗೆ ಕಾಂಗ್ರೆಸ್​ ಪಕ್ಷವು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆರಂಭಿಸಿದ್ದ ಸೇ ಸಿಎಂ ಅಭಿಯಾನಕ್ಕೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸೇ ಸಿದ್ದು ಎಂಬ ಹೊಸ ಅಭಿಯಾನವನ್ನು ಶುರು ಮಾಡಿದೆ.

bjp-started-say-siddu-campaign-against-congresses-say-cm-campaign
ಕಾಂಗ್ರೆಸ್ ನ 'ಸೇ ಸಿಎಂ'ಗೆ ಬಿಜೆಪಿಯಿಂದ 'ಸೇ ಸಿದ್ದು' ಗುದ್ದು!

ಬೆಂಗಳೂರು: ಕಾಂಗ್ರೆಸ್ ನ ಸೇ ಸಿಎಂ ಅಭಿಯಾ‌ನಕ್ಕೆ ಟಕ್ಕರ್ ನೀಡಲು ರಾಜ್ಯ ಬಿಜೆಪಿ 'ಸೇ ಸಿದ್ದು'ಎಂಬ ಅಭಿಯಾನವನ್ನು ಶುರು ಮಾಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್‌ ಅವಧಿಯ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? ಎಂದು ಪ್ರಶ್ನಿಸಿ, ಸೇ ಸಿದ್ದು ಎಂಬ ಪೋಸ್ಟರ್ ನ್ನು ಟ್ಯಾಗ್ ಮಾಡಿದ್ದಾರೆ.

#SAY SIDDU, 100% Undelivered, NO bribe NO Scheme. SCAN NOW TO KNOW SCAM ಬರಹದೊಂದಿಗೆ ಸಿದ್ದರಾಮಯ್ಯರ QR ಕೋಡ್ ಫೋಟೋ ಹೊಂದಿದ ಪೋಸ್ಟರ್ ಹಾಕಿ ಸಿದ್ದರಾಮಯ್ಯ ಅವರಿಗೆ ಗುದ್ದು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಮೌನವೇಕೆ ಎಂದು ಕಾಂಗ್ರೆಸ್ ಗೆ ಪ್ರಶ್ನಿಸಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್​​ ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸೇ ಸಿಎಂ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಈ ಅಭಿಯಾನಕ್ಕೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸೇ ಸಿದ್ದು ಅಭಿಯಾನವನ್ನು ಆರಂಭಿಸಿದೆ.

ಇದನ್ನೂ ಓದಿ : ಪೋಷಕರಿಂದ ಹಣ ಸಂಗ್ರಹ ಮಾಡುತ್ತರುವುದು ಸರ್ಕಾರದ ದಿವಾಳಿತನ ತೋರಿಸುತ್ತದೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.