ETV Bharat / state

ಶ್ರೀಮಂತ ಮಹಿಳಾ ಅಧ್ಯಕ್ಷೆಗೆ ಪಿಎಂ ಆವಾಸ್‌ ಯೋಜನೆಯಡಿ ಮನೆ ಪಡೆಯಲು ಇಂದೇ ಅರ್ಜಿ ಸಲ್ಲಿಸಿ: ಬಿಜೆಪಿ ಟ್ವೀಟ್​

author img

By

Published : Jun 16, 2022, 6:13 PM IST

ನ್ಯಾಷನಲ್​ ಹೆರಾಲ್ಡ್​ ಪ್ರಕರಣವಾಗಿ ಕಾಂಗ್ರೆಸ್​​ ನಾಯಕರ ವಿರುದ್ಧ ಬಿಜೆಪಿ ಸರಣಿ ಟ್ವೀಟ್​ ಮಾಡಿ ಟೀಕಿಸಿದೆ.

bjp-series-tweet-against-congress-leaders
ಕಾಂಗ್ರೆಸ್​​ ನಾಯಕರ ವಿರುದ್ಧ ಬಿಜೆಪಿ ಸರಣಿ ಟ್ವೀಟ್​

ಬೆಂಗಳೂರು: ರಾಷ್ಟ್ರೀಯ ಪಕ್ಷವೊಂದರ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳಾ ಅಧ್ಯಕ್ಷೆಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ಮನೆ ಪಡೆಯಲು ಇಂದೇ ಅರ್ಜಿ ಸಲ್ಲಿಸಿ. ಭ್ರಷ್ಟಾಧ್ಯಕ್ಷರೇ, ನಿಮಗೂ ಸ್ವಂತ ಮನೆಯ ಇದೆಯೋ ಇಲ್ಲವೋ ಎಂಬುದನ್ನು ಜನತೆಗೆ ತಿಳಿಸುವಿರಾ ಎಂದು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿ ಟ್ವೀಟ್​ ಮಾಡಿದೆ.

ಸೋನಿಯಾ ಗಾಂಧಿ ಕುಟುಂಬಕ್ಕೆ ಸ್ವಂತ ಮನೆ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ಉಲ್ಲೇಖಿಸಿ ಕರ್ನಾಟಕ ಬಿಜೆಪಿ ಟ್ವಿಟ್ಟರ್​ ಖಾತೆಯಲ್ಲಿ ಈ ರೀತಿ ಬರೆಯಲಾಗಿದೆ. ಅಲ್ಲದೇ, ರಾಹುಲ್​ ಗಾಂಧಿ ಅವರ ವಿಡಿಯೋವೊಂದು ಶೇರ್​ ಮಾಡಿ ನ್ಯಾಷನಲ್ ಹೆರಾಲ್ಡ್ ರಾಹುಲ್ ಗಾಂಧಿ ಪಾಲಿನ ಸೋನಾ ಮಷಿನ್ ಈ ಕಡೆಯಿಂದ 50 ಲಕ್ಷ ಹಾಕು, ಆ ಕಡೆಯಿಂದ 2,000 ಕೋಟಿ ಲಪಟಾಯಿಸು ಎಂದು ಮತ್ತೊಂದು ಟ್ವೀಟ್​ ಮಾಡಲಾಗಿದೆ.

ಇಷ್ಟೇ ಅಲ್ಲ, ಭ್ರಷ್ಟರು, ಭ್ರಷ್ಟರಿಂದ, ಭ್ರಷ್ಟರ ರಕ್ಷಣೆಗಾಗಿ...ಇದು ಕೆಪಿಸಿಸಿಯ ಹೊಸ ನೀತಿ ಎಂದು ಇನ್ನೊಂದು ಟ್ವೀಟ್​ ಮಾಡಿ, ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ. ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನ ಹಾಗೂ ದಂಡ ಸಂಹಿತೆಗೆ ಅತೀತರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಇದು ಈ ದೇಶದ ಸಂವಿಧಾನ ಮತ್ತು ಕಾನೂನಿಗೆ ಮಾಡುತ್ತಿರುವ ಅವಮಾನವಲ್ಲವೇ? ಪ್ರಶ್ನಿಸಲಾಗಿದೆ.

ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರನ್ನು ಕಾಂಗ್ರೆಸ್ಸಿಗರು ಹೈರಾಣಾಗಿಸಿದ್ದಾರೆ. ನಕಲಿ ಗಾಂಧಿಗಳು ನಡೆಸಿದ ಲೂಟಿಯನ್ನು ಸಮರ್ಥಿಸಿ ಬೀದಿಗಿಳಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕಾಂಗ್ರೆಸ್ಸಿಗರೇ, ಜನ ಸಾಮಾನ್ಯರ ಹಿತಾಸಕ್ತಿಗಿಂತ ನಕಲಿ ಗಾಂಧಿ ಕುಟುಂಬದ ಗುಲಾಮಿತನವೇ ಶ್ರೇಷ್ಠವಾಯಿತೇ ಎಂದು ಕೇಳಲಾಗಿದೆ.

ಸಿದ್ದರಾಮಯ್ಯಗೆ ಅಭದ್ರತೆ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ಬಿಜೆಪಿ ಮಾಡಿದ್ದು, ಸಿದ್ದರಾಮಯ್ಯನವರನ್ನು ಇತ್ತೀಚೆಗೆ ಭಾರೀ ಅಭದ್ರತೆ ಕಾಡುತ್ತಿದೆ. ಒಂದು ಕಡೆಯಲ್ಲಿ ಡಿಕೆಶಿಯನ್ನು ಎದುರಿಸಬೇಕು, ಇನ್ನೊಂದು ಕಡೆಯಲ್ಲಿ ದಲಿತ ಸಿಎಂ ವಾದ ಮುಂದಿಡುತ್ತಿರುವ ಖರ್ಗೆ, ಪರಮೇಶ್ವರ್ ಅವರನ್ನು ಎದುರಿಸಬೇಕು. ಮತ್ತೊಂದೆಡೆ ಮುಂದಿನ ಬಾರಿಗೆ ಸುರಕ್ಷಿತ ಕ್ಷೇತ್ರವೂ ಅಂತಿಮವಾಗಿಲ್ಲ ಎನ್ನುವ ಭಯವೂ ಕಾಡುತ್ತಿದೆ ಎಂದು ವ್ಯಂಗ್ಯವಾಡಲಾಗಿದೆ.

ಕ್ಷೇತ್ರದ ಹುಡುಕಾಟದಲ್ಲಂತೂ ಸಿದ್ದರಾಮಯ್ಯ ಹೈರಾಣಾಗಿದ್ದಾರೆ. ಎಲ್ಲಿ ಹೋದರೂ ತಮ್ಮವರೇ ಸೋಲಿಸುತ್ತಾರೆ ಎಂಬ ಭಯ ಸಿದ್ದರಾಮಯ್ಯ ಅವರನ್ನು ಈಕ್ಷಣಕ್ಕೂ ಕಾಡುತ್ತಿದೆ. ಸಿದ್ದರಾಮಯ್ಯನವರೇ ಇದೆಲ್ಲ ನೀವು ಮಾಡಿದ ಕರ್ಮದ ಫಲ. ದಲಿತ ನಾಯಕರನ್ನು ತುಳಿದು ಬೆಳೆದ ಪಾಪ, ನಿಮ್ಮನ್ನು ಕಾಡದೆ ಬಿಡುವುದಿಲ್ಲ ಎಂದೂ ಟೀಕಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ನವರದು ಹೋರಾಟವಲ್ಲ, ರಾಜಕೀಯ ದೊಂಬರಾಟ: ಸಚಿವ ಹಾಲಪ್ಪ ಆಚಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.