ETV Bharat / state

ಆದಿಚುಂಚನಗಿರಿ ಶ್ರೀಗಳಿಂದ ಆಶೀರ್ವಾದ ಪಡೆದ ವಿಜಯೇಂದ್ರ: ಇಂದು ಸಿದ್ದಗಂಗಾ ಮಠ, ಯಡಿಯೂರು ದೇವಸ್ಥಾನಕ್ಕೆ ಟೆಂಪಲ್‌ರನ್

author img

By ETV Bharat Karnataka Team

Published : Nov 12, 2023, 7:16 AM IST

BJP president Vijayendra: ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬಿ.ವೈ ವಿಜಯೇಂದ್ರ ಅವರು ಟೆಂಪಲ್‌ರನ್ ಆರಂಭ ಮಾಡಿದ್ದಾರೆ.

ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ಬೆಂಗಳೂರು: ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾಮಠಕ್ಕೆ ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶನಿವಾರ ಭೇಟಿ ನೀಡಿ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈಗಾಗಲೇ ಸಿಟಿ ರವಿ ಅವರೊಂದಿಗೆ ಮಾತನಾಡಿದ್ದೇನೆ. ಮಾಜಿ ಸಚಿವ ವಿ.ಸೋಮಣ್ಣ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರೊಂದಿಗೂ ಮಾತನಾಡುತ್ತೇನೆ. ನನ್ನ ಮುಂದಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎನ್ನುವ ಒಂದೇ ಗುರಿ. ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ಮುಂದುವರೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷ ಇಷ್ಟು ದೊಡ್ಡ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಿರುವ ಸಂದರ್ಭದಲ್ಲಿ ಪರಮ ಪೂಜ್ಯರ ಆಶೀರ್ವಾದ ಬಹಳ ಅತ್ಯಗತ್ಯ. ಹಾಗಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ದೇನೆ. ಬಹಳ ಸಂತೋಷದಿಂದ ಅವರು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಯಾವ ರೀತಿ ಪಕ್ಷ ಸಂಘಟಿಸಿದ್ದಾರೋ ಅದೇ ರೀತಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕೆಲಸ ಮಾಡು ಎಂದು ಸಲಹೆ ನೀಡಿ ಆಶೀರ್ವಾದ ಮಾಡಿದ್ದಾರೆ. ಇದರಿಂದಾಗಿ ನನಗೆ ತುಂಬಾ ಸಂತೋಷವಾಯಿತು. ಭಾನುವಾರ ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದು ನಂತರ ಮನೆ ದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತೇನೆ ಎಂದರು.

ಇದನ್ನೂ ಓದಿ : ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ: ಸಿ ಟಿ ರವಿ

ರಾಜ್ಯಾಧ್ಯಕ್ಷ ಸ್ಥಾನದ ಪದಗ್ರಹಣ ಸಮಾರಂಭ ಯಾವಾಗ ನಡೆಸಬೇಕು. ಎಷ್ಟು ಜನರನ್ನು ಸೇರಿಸಬೇಕು. ಕಾರ್ಯಕ್ರಮ ಹೇಗಿರಬೇಕು ಎನ್ನುವ ಕುರಿತು ಇನ್ನು ಯಾವುದೇ ಚರ್ಚೆಯಾಗಿಲ್ಲ. ಇಂದು ಎರಡು ದಿನದಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಜಿ ಸಚಿವ ಸಿ.ಟಿ ರವಿ ಅವರ ಹೇಳಿಕೆಯನ್ನು ನಾನು ಕೂಡ ಅವರ ಗಮನಿಸಿದ್ದೇನೆ. ಅವರು ಅಸಮಾಧಾನದ ರೀತಿ ಹೇಳಿಕೆ ನೀಡಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಎಲ್ಲಾ ಹಿರಿಯರ ಸಲಹೆ ಪಡೆದು ಅವರ ವಿಶ್ವಾಸ ಗಳಿಸಿಕೊಂಡು ಮುಂದೆ ಸಾಗಬೇಕಿರುವುದು ನನ್ನ ಕರ್ತವ್ಯ, ಅದನ್ನು ಮಾಡುತ್ತೇನೆ. ಈ ವಿಚಾರದಲ್ಲಿ ಬೇರೆ ಏನೇನು ಆಪಾರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಘಟಕದ ಅಧ್ಯಕರನ್ನಾಗಿ ನೇಮಕವಾದ ಬಳಿಕ ಮೊದಲ ದಿನವೇ ಮೊದಲು ಬೂತಮಟ್ಟದ ಅಧ್ಯಕ್ಷರ ಮನೆಗೆ ವಿಜಯೇಂದ್ರ ಭೇಟಿ ನೀಡಿದ್ದರು. ಬಳಿಕ ಚಾಮರಾಜಪೇಟೆಯಲ್ಲಿರುವ ಆರ್​ಎಸ್​ಎಸ್ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ, ನಾಯಕರಿಂದ ಆಶೀರ್ವಾದ ಪಡೆದುಕೊಂಡಿದ್ದರು. ಆ ಬಳಿಕ ಸಂಜೆ ವೇಳೆಗೆ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಆರ್​ಎಸ್​ಎಸ್​ ಕಚೇರಿ ಕೇಶವಕೃಪಾಗೆ ಬಿ ವೈ ವಿಜಯೇಂದ್ರ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.