ETV Bharat / state

ಬಿಜೆಪಿಯವರಿಗೆ ರೈತರ ಮೇಲೆ ಗೌರವ, ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 7, 2023, 1:36 PM IST

Updated : Nov 7, 2023, 2:46 PM IST

''ಬಿಜೆಪಿಗರಿಗೆ ರಾಜ್ಯದ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ'' ಎಂದು ಸಿಎಂ‌ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

CM Siddaramaiah
ಸಿಎಂ‌ ಸಿದ್ದರಾಮಯ್ಯ

ಬಿಜೆಪಿಯವರಿಗೆ ರೈತರ ಮೇಲೆ ಗೌರವ, ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ''ಹಳ್ಳಿಗಾಡಿನ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಕೇಂದ್ರದಿಂದ ಪರಿಹಾರ ಕೊಡಿಸಲಿ'' ಎಂದು ಸಿಎಂ‌ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬರ ಅಧ್ಯಯನಕ್ಕೆ ತಿರುಗೇಟು ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಇನ್ಫೋಸಿಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ವಿನ್ಯಾಸಗೊಳಿಸಿರುವ ಗಾಲಿ ಮೇಲಿನ‌ ಲ್ಯಾಬ್ ಎಂಬ ವಿಶೇಷ ಬಸ್​ಗೆ ಚಾಲನೆ ನೀಡಿ ಮಾತನಾಡಿದರು. ''ಕೇಂದ್ರದ ತಂಡ ಅಧ್ಯಯನ ಮಾಡಿಕೊಂಡು ಹೋಗಿದೆ, ಇನ್ನೂ ಕೂಡ ವರದಿ ಕೊಟ್ಟಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕಾಗಿ ಹೋಗ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಬಳಿ ಕುಳಿತು ದುಡ್ಡು ಕೊಡಿಸಲಿ. ಕೇಂದ್ರ ಸರ್ಕಾರದ ಅಧ್ಯಯನ ಮಾಡಿದೆ. ಇವರೇನು ಅಧ್ಯಯನ ಮಾಡೋಡು'' ಎಂದು ಟೀಕಿಸಿದರು.

''ನಾವೇ ಅಧ್ಯಯನ ಮಾಡಿದ್ದೀವಲ್ಲ. ಮಾಡಲಿ ನಮ್ಮದೇನು ತಕರಾರು ಇಲ್ಲ. ಮಾಡಬಾರದು ಅಂತಾನೂ ನಾವು ಹೇಳೋಕೆ ಹೋಗಲ್ಲ. ನಾವು ಕಳುಹಿಸಿ ತುಂಬಾ ದಿನ ಆಯ್ತು, ಸೆಂಟ್ರಲ್ ಟೀಂ ಹೋಗಿ ತುಂಬಾ ದಿನ ಆಯ್ತು ಇನ್ನೂ ವರದಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. 17,900 ಕೋಟಿಯಷ್ಟು ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ. ಅದನ್ನು ಮೊದಲು ಕೊಡಿಸಲಿ'' ಎಂದು ಕಿಡಿಕಾರಿದ್ದಾರೆ.

''25 ಜನ ಬಿಜೆಪಿ ಎಂಪಿಗಳಿದ್ದಾರಲ್ಲ ಕುಳಿತು ಮಾತನಾಡಿ ಕೊಡಿಸಲಿ. ನಮ್ಮ ಮಂತ್ರಿಗಳಿಗೆ ಕೇಂದ್ರದ ಸಚಿವರು ಭೇಟಿ ಮಾಡಲು ಸಮಯನೇ ಕೊಟ್ಟಿಲ್ಲ. ದೆಹಲಿಗೆ ಹೋದ್ರು ಸಮಯ ಕೊಟ್ಟಿಲ್ಲ. ಅವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ'' ಎಂದು ಪ್ರಶ್ನಿಸಿದರು.

ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಯಾರು ಅಧ್ಯಯನ ನಡೆಸಿದ್ದು? ಕೇಂದ್ರದ ಅಧ್ಯಯನ ತಂಡ. ಅದು ಯಾರ ಅಧೀನದಲ್ಲಿದೆ. ಮತ್ತೆ ಕೇಂದ್ರ ಸರ್ಕಾರ ಅಲ್ವಾ ಕೇಂದ್ರ ಬೈಯಲಿ. ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ಬೈಯಲಿ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಂದ್ರೇಗೌಡರ ನಿಧನಕ್ಕೆ ಕಂಬನಿ: ಮಾಜಿ ಸಚಿವ ಡಿ ಬಿ ಚಂದ್ರೇಗೌಡ ನಿಧನಕ್ಕೆ ಸಿಎಂ ಕಂಬನಿ ಮಿಡಿದರು. ನಾಳೆ ನಾನು ಚಿಕ್ಕಮಗಳೂರಿಗೆ ಹೋಗ್ತಾ ಇದ್ದೇನೆ. ಚಂದ್ರೇಗೌಡ ರಾಜ್ಯದ ಹಿರಿಯ ರಾಜಕಾರಣಿ. ರಾಜ್ಯದಲ್ಲಿ ಬಹಳ ದೀರ್ಘಕಾಲ ರಾಜಕಾರಣ ಮಾಡಿದ್ರು. ಸ್ಪೀಕರ್ ಆಗಿದ್ದರು, ಲಾ ಮಿನಿಸ್ಟರ್ ಆಗಿದ್ದರು. ಕಾಂಗ್ರೆಸ್​ನಲ್ಲಿ ಇದ್ದರು, ಇಂದಿರಾ ಗಾಂಧಿ ಜೊತೆಗೆ ರಾಜಕೀಯ ಮಾಡಿದ್ದಾರೆ. ಬಿಜೆಪಿಯಿಂದ ಎಂಪಿಯಾಗಿದ್ರು. ಚಂದ್ರೇಗೌಡರು ವಿವಿಧ ಹಂತದಲ್ಲಿ ರಾಜಕೀಯ ಮಾಡಿದ್ದಾರೆ. ಅವರ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಬರುವ ಶಕ್ತಿ ನೀಡಲಿ'' ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲಾ ಪ್ರವಾಸಕ್ಕೆ ಹೊರಟ ಸಿಎಂ: ಹವಾಮಾನ ವೈಪರೀತ್ಯ ಹಿನ್ನೆಲೆ ರಸ್ತೆ ಮೂಲಕ ಸಿಎಂ ಹಾಸನಕ್ಕೆ ತೆರಳಿದರು. ಮಧ್ಯಾಹ್ನ ಹಾಸನದ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ. ಹಾಸನಾಂಬೆಯ ದರ್ಶನ ಪಡೆದ ಬಳಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಡಿ.ಬಿ.ಚಂದ್ರೇಗೌಡರು ಇಂದಿರಾ ಗಾಂಧಿ ಗೆಲುವಿಗೆ ಹಗಲು-ರಾತ್ರಿ ದುಡಿದವರು: ಡಿಸಿಎಂ ಡಿ.ಕೆ.ಶಿವಕುಮಾರ್‌

Last Updated : Nov 7, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.